Guru Vakri 2022: ಈ ರಾಶಿಯ ಜನರಿಗೆ ಅದೃಷ್ಟ ಕರುಣಿಸಲಿದ್ದಾನೆ ವಕ್ರಿ ಗುರು

Guru Vakri 2022 in Pisces:  ಶನಿ ದೇವನ ಹಿಮ್ಮುಖ ಚಲನೆಯ ಬಳಿಕ ಇದೀಗ ಜುಲೈ  29 ರಿಂದ ದೇವಗುರು ಬೃಹಸ್ಪತಿ ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಗುರು ಗ್ರಹದ ಹಿಮ್ಮುಖ ಚಲನೆಯು ಕೆಲವು ರಾಶಿಯವರಿಗೆ ಅದೃಷ್ಟವನ್ನು ಕರುನಿಸಲಿದೆ. ಅಂತಹ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Jun 28, 2022, 09:36 AM IST
  • ಹಿಮ್ಮುಖ ಗುರುವು ಮಿಥುನ ರಾಶಿಯ ಜನರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ.

    ಗುರುಗ್ರಹದ ಹಿಮ್ಮುಖ ಚಲನೆಯು ಕರ್ಕ ರಾಶಿಯವರಿಗೆ ಅದ್ಭುತ ಸಮಯವನ್ನು ತರುತ್ತದೆ.
  • ಈ ಸಮಯವು ಅವರಿಗೆ ಸ್ಥಾನ, ಹಣ, ಪ್ರತಿಷ್ಠೆ ಎಲ್ಲವನ್ನೂ ನೀಡುತ್ತದೆ.
Guru Vakri 2022: ಈ ರಾಶಿಯ ಜನರಿಗೆ ಅದೃಷ್ಟ ಕರುಣಿಸಲಿದ್ದಾನೆ ವಕ್ರಿ ಗುರು title=
Guru retrograde effect

ಜುಲೈನಲ್ಲಿ ಗುರು ವಕ್ರಿ 2022: ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿರುವ ದೇವಗುರು ಬೃಹಸ್ಪತಿ ಮುಂದಿನ ತಿಂಗಳಾಂತ್ಯದಲ್ಲಿ ಹಿಮ್ಮೆಟ್ಟಲಿದ್ದಾನೆ. ಗುರು ಗ್ರಹವು ಜುಲೈ 29 ರಿಂದ ತನ್ನದೇ ಆದ ಮೀನ ರಾಶಿಯಲ್ಲಿ ಹಿಮ್ಮೆಟ್ಟಲಿದ್ದಾನೆ.  ಗುರುಗ್ರಹದ ಹಿಮ್ಮೆಟ್ಟುವಿಕೆಯು ಎಲ್ಲಾ ರಾಶಿಚಕ್ರಗಳ ಮೇಲೆ ಒಳ್ಳೆಯ ಹಾಗೂ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಈ ಸಂದರ್ಭದಲ್ಲಿ, ವಕ್ರಿ ಗುರು 4 ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟವನ್ನು ಕರುಣಿಸಲಿದೆ. ಏಕೆಂದರೆ ಹಿಮ್ಮುಖ ಗುರುವು ಅವರ ಮೇಲೆ ತನ್ನ ಆಶೀರ್ವಾದವನ್ನು ಸುರಿಸುತ್ತಾರೆ. 

ಹಿಮ್ಮುಖ ಗುರುವು ಈ ರಾಶಿಚಕ್ರ ಚಿಹ್ನೆಗಳಿಗೆ ಲಾಭವನ್ನು ನೀಡುತ್ತದೆ:
ವೃಷಭ ರಾಶಿ: ಹಿಮ್ಮುಖ ಗುರುವು
ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತಾನೆ. ಆರ್ಥಿಕ ಸಮೃದ್ಧಿ ಹೆಚ್ಚಲಿದೆ. ಒಳ್ಳೆಯ ಪ್ಯಾಕೇಜ್ ಜೊತೆಗೆ ಹೊಸ ಕೆಲಸ ಸಿಗಬಹುದು ಅಥವಾ ಸಂಬಳ ಹೆಚ್ಚಾಗಬಹುದು. ವ್ಯಾಪಾರದಲ್ಲಿ ಸಾಕಷ್ಟು ಲಾಭವಾಗಲಿದೆ. ಕುಟುಂಬದ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಆರೋಗ್ಯ ಚೆನ್ನಾಗಿರುತ್ತದೆ. 

ಇದನ್ನೂ ಓದಿ- July 2022 Horoscope: ಈ ನಾಲ್ಕು ರಾಶಿಯವರಿಗೆ ಲಾಭ-ಸಂತೋಷ ತರಲಿದೆ ಜುಲೈ

ಮಿಥುನ ರಾಶಿ: ಹಿಮ್ಮುಖ ಗುರುವು ಮಿಥುನ ರಾಶಿಯ ಜನರಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಸ್ವಲ್ಪ ಪ್ರಯತ್ನವೂ ದೊಡ್ಡ ಲಾಭವನ್ನು ನೀಡುತ್ತದೆ. ವೃತ್ತಿಜೀವನದಲ್ಲಿ ಯಾರಾದರೂ ಸಹಾಯ ಮಾಡುತ್ತಾರೆ, ಅದು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. 

ಕರ್ಕ ರಾಶಿ: ಗುರುಗ್ರಹದ ಹಿಮ್ಮುಖ ಚಲನೆಯು ಕರ್ಕ ರಾಶಿಯವರಿಗೆ ಅದ್ಭುತ ಸಮಯವನ್ನು ತರುತ್ತದೆ. ಈ ಸಮಯವು ಅವರಿಗೆ ಸ್ಥಾನ, ಹಣ, ಪ್ರತಿಷ್ಠೆ ಎಲ್ಲವನ್ನೂ ನೀಡುತ್ತದೆ. ಇಷ್ಟು ದಿನ ಕೈ ಸೇರದ ಹಣವು ಈಗ ನಿಮ್ಮ ಕೈ ಸೇರಲಿದೆ.  ಅಂಟಿಕೊಂಡಿರುವ ಕೆಲಸ ನಡೆಯಲಿದೆ. ಹೂಡಿಕೆಯಿಂದ ಲಾಭವಾಗಲಿದೆ. 

ಇದನ್ನೂ ಓದಿ- ಜುಲೈ 12ರ ನಂತರ ಈ ರಾಶಿಯವರ ಮೇಲಿರಲಿದೆ ಶನಿಯ ಕೃಪಾ ದೃಷ್ಟಿ

ಕುಂಭ ರಾಶಿ: ಮೀನ ರಾಶಿಯಲ್ಲಿ ಗುರು ಹಿಮ್ಮೆಟ್ಟುವುದರಿಂದ ಕುಂಭ ರಾಶಿಯವರಿಗೆ ಲಾಭವಾಗಲಿದೆ. ವ್ಯಾಪಾರದಲ್ಲಿ ಯಶಸ್ಸು ಸಿಗಲಿದೆ. ಉದ್ಯೋಗ ಮಾಡುವವರಿಗೂ ಲಾಭವಾಗುತ್ತದೆ. ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಚಟುವಟಿಕೆಯು ಹೆಚ್ಚಾಗುತ್ತದೆ ಅದು ನಿಮಗೆ ಜನಪ್ರಿಯತೆಯನ್ನು ತರುತ್ತದೆ. 

ಸೂಚನೆ:  ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News