ಕುಡಿದ ಮತ್ತಲ್ಲಿ ಸಿಂಹದ ಬೋನಿಗೆ ಜಿಗಿದ ಭೂಪ! ಮುಂದೇನಾಯ್ತು? ಈ ವಿಡಿಯೋ ನೋಡಿ....
Drunk Man in Lion Cage: ಕುಡಿದ ಅಮಲಿನಲ್ಲಿ ಜನ ಹೇಗೇಗೋ ಆಡ್ತಾರೆ... ಅವರ ಮಾತಿನ ಮೇಲೆ ಅವರಿಗೆ ಪ್ರಜ್ಞೆ ಇರುವುದಿಲ್ಲ ಎಂಬುದನ್ನೂ ನೀವು ನೋಡಿರಬಹುದು ಇಲ್ಲವೇ ಕೇಳಿರಬಹುದು. ಆದರಿಲ್ಲೊಬ್ಬ ಭೂಪ ಕೂಡಿದ ಅಮಲಿನಲ್ಲಿ ಸಿಂಹದ ಬೋನಿಗೆ ಜಿಗಿದಿದ್ದಾನೆ.
Drunk Man Jumped Into Lion Cage Viral Video: ಈ ಇಂಟರ್ನೆಟ್ ಜಗತ್ತಿನಲ್ಲಿ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಾಡು ಪ್ರಾಣಿಗಳ ಅಪರೂಪದ ಅಮೋಘ ವಿಡಿಯೋಗಳನ್ನು ಕಣ್ತುಂಬಿಕೊಳ್ಳಬಹುದು. ಅಷ್ಟೇ ಅಲ್ಲ, ಕೆಲವೊಮ್ಮೆ ಪ್ರಾಣಿಗಳೊಂದಿಗೆ ಕೂಡಿ ಮನುಷ್ಯರೂ ಕೂಡ ಮನರಂಜನೆ ನೀಡುತ್ತಾರೆ. ಒಂದರ್ಥದಲ್ಲಿ ಇದು ಮನರಂಜನೆ ಎನ್ನುವುದಕ್ಕಿಂತ ವ್ಯಕ್ತಿಗೆ ಚೆಲ್ಲಾಟ ಕಂಡವರಿಗೆ ಪೀಕಲಾಟ ಎಂಬಂತ ಸ್ಥಿತಿ.
ಕುಡಿದಾಗ ಮನುಷ್ಯ ತನ್ನ ಹಿಡಿತದಲ್ಲಿ ತಾನಿರುವುದಿಲ್ಲ. ಆತನ ಬುದ್ದಿಗೂ ನಡವಳಿಕೆಗೂ ಕನೆಕ್ಷನ್ ಇರೊಲ್ಲ ಅನ್ನೋದನ್ನ ನೀವು ಕೇಳಿರಬಹುದು ಅಥವಾ ಪ್ರತ್ಯಕ್ಷವಾಗಿ ನೋಡಿಯೂ ಇರಬಹುದು. ಆದರಿಲ್ಲೊಬ್ಬ ಭೂಪ ಕುಡಿದ ಅಮಲಿನಲ್ಲಿ ಸಿಂಹವಿದ್ದ ಬೋನಿಗೆ ಹಾರಿದ್ದು ಸದ್ಯ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ- ಬೇಟೆಯಾಡಲು ಬಂದ ವ್ಯಾಘ್ರನಿಗೆ ಏಟಿನ ರುಚಿ ತೋರಿದ ಕಾಡೆಮ್ಮೆ: ವಾಚ್ ವಿಡಿಯೋ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಕಾಡಿನ ರಾಜ ಸಿಂಹವಿದ್ದ ಬೋನಿಗೆ ಹಾರಿದ ವ್ಯಕ್ತಿ (Drunk Man Jumped Into Lion Cage) ಸುಮ್ಮನಿರದೆ ಸಿಂಹದ ಬಳಿಗೆ ಹೋಗಿ ಮಾತನಾಡುತ್ತಿದ್ದಾನೆ. ಇನ್ನೂ ವಿಚಿತ್ರ ಅಂದ್ರೆ ಆತ ಸಿಂಹದ ಮುಂದಿದ್ದ ಒಂದು ಕಲ್ಲು ಬಂಡೆಯ ಮೇಲೆ ಕುಳಿತು ತಾನೇ ಅದರ ಒಡೆಯನೆಂಬಂತೆ ಸಿಂಹದೊಟ್ಟಿಗೆ ಮಾತನಾಡುತ್ತಾ ಸೆಲ್ಫಿ ತೆಗೆದುಕೊಳ್ಳಲು ಯತ್ನಿಸುತ್ತಾನೆ. ಬಳಿಕ ಕೈ ಸನ್ಹೆ ಮಾಡುತ್ತಾ ಕಾಡಿನ ರಾಜನಿಗೆ ಏನೋ ಹೇಳುತ್ತಿರುವಂತೆ ತೋರುತ್ತದೆ.
ಒಂದೆಡೆ ಕುಡಿದ ಅಮಲಿನಲ್ಲಿರುವ ವ್ಯಕ್ತಿ ಸಿಂಹದ ಜೊತೆ ಮನೆಯ ಸಾಕು ಪ್ರಾಣಿಗಳೊಂದಿಗೆ ನಡೆದುಕೊಳ್ಳುವಂತೆ ನಡೆದುಕೊಳ್ಳುತ್ತಿದ್ದರೆ ಹಿಂಬದಿಯಲ್ಲಿ ಜನರ ಕೂಗಾಟ ಕೇಳಿಬರುತ್ತದೆ. ನೋಡುವುದಕ್ಕೆ ಈ ವಿಡಿಯೋ ಯಾವುದೋ ಪ್ರಾಣಿ ಸಂಗ್ರಹಾಲಯದಲ್ಲಿ ತೆರೆದಿರುವಂತೆ ತೋರುತ್ತದೆ. ಈ ವಿಡಿಯೋದಲ್ಲಿ ಜನರು ಮಾತನಾಡುತ್ತಿದ್ದು ಕುಡಿದ ಮತ್ತಲ್ಲಿ ಸಿಂಹ ಬೋನಿಗೆ ಹಾರಿರುವ ವ್ಯಕ್ತಿಯನ್ನು ಮೇಲೆ ತರಲು ಪ್ರಯತ್ನಿಸುತ್ತಿದ್ದಾರೆ.
ಇದನ್ನೂ ಓದಿ- Tigers Attack On Lion: ಒಂಟಿ ಸಿಂಹದ ಮೇಲೆ ಐದು ಹುಲಿಗಳಿಂದ ದಾಳಿ, ಮುಂದೇನಾಯ್ತು... ವಾಚ್ ವೈರಲ್ ವಿಡಿಯೋ
ಇಲ್ಲೊಬ್ಬ ಅಯ್ಯೋ ಪಾಗಲ್... ಸಿಂಹದ ಹತ್ರ ಹೋಗ್ಬೇಡಾ ಅಂತ ಚೀರುತ್ತಿದ್ದರೆ, ಒಬ್ಬರು ಅಲ್ಲೇ ಮಲಗು ಎಂದು ಸಲಹೆ ನೀಡುತ್ತಿದ್ದಾರೆ. ಇನ್ನೊಬ್ಬ ವ್ಯಕ್ತಿ ಜೋರಾಗಿ ಕಿರುಚಬೇಡಿ ಸಿಂಹ ಅವನನ್ನು ತಿಂದುಬಿಟ್ಟಿತು ಎಂದು ಎಚ್ಚರಿಸುತ್ತಾ ಆತ ಏನಾದರೂ ಹುಚ್ಚನೇ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ ಮತ್ತೊರ್ವ ವ್ಯಕ್ತಿ ಕುಡಿದ ಅಮಲಿನಲ್ಲಿ ಜನ ಹೀಗೆಲ್ಲಾ ವರ್ತಿಸುತ್ತಾರೆ. ಆತ ಸಿಂಹವನ್ನು ನಾಯಿ ಅಂತ ಅಂದುಕೊಂಡಿರಬಹುದು ಎನ್ನುತ್ತಾರೆ.
ಈ ವಿಡಿಯೋವನ್ನು@aanweash ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದ್ದು ಇದಕ್ಕೆ ನೆಟಿಜನ್‌ಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಬರುತ್ತಿವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.