Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ...

Peacock Viral News: ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು ಮಕ್ಕಳೊಂದಿಗೆ ಬಿಸಿ ಊಟ ಸವಿದಿದೆ. 

Written by - Yashaswini V | Last Updated : Aug 28, 2024, 02:55 PM IST
  • ಶಾಲಾ ಆವರಣದಲ್ಲಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ರಾಷ್ಟ್ರಪಕ್ಷಿ
  • ಶಾಲೆಯಲ್ಲಿ ನಾಟ್ಯ ಮಯೂರಿಯನ್ನು ಕಂಡು ಮಕ್ಕಳಲ್ಲಿ ಸಂತಸ
Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ... title=

Viral Video: ಸರ್ಕಾರಿ ಶಾಲೆಯಲ್ಲಿ ಅಕ್ಷರ ದಾಸೋಹ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳು ಮಧ್ಯಾಹ್ನ ಬಿಸಿಊಟ ಸೇವಿಸುತ್ತಿರುವ ಸಮಯದಲ್ಲಿ ಹಾರಿ ಬಂದ ರಾಷ್ಟ್ರಪಕ್ಷಿ ನವಿಲು (National Bird Peacock)  ಮಕ್ಕಳೊಂದಿಗೆ ಬಿಸಿ ಊಟ ಸವಿದು ಮಕ್ಕಳಿಗೆ ಮನೊಲ್ಲಾಸ ಹೆಚ್ಚಿಸಿದ ಘಟನೆ ನಡೆದಿದೆ.

ವಿಜಯಪುರ ತಾಲೂಕಿನ ಜಂಬಗಿ (ಆ) ಗ್ರಾಮದ ಕೆರೂರವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ವಸ್ತಿ ಶಾಲಾ ಮಕ್ಕಳು ಬಿಸಿಊಟ (Bisiuta) ಸೇವಿಸುವಾಗ ಹಾರಿ ಬಂದ ರಾಷ್ಟ್ರ ಪಕ್ಷಿ (National Bird) ಮಕ್ಕಳು ತಟ್ಟೆಯಲ್ಲಿ ಅನ್ನ ಹಾಕಿಕೊಂಡು ಪ್ರಾರ್ಥನೆ ಮಾಡುತ್ತಾ ಕುಳಿತಾಗ ಅನ್ನದ ತಟ್ಟೆಗೆ ಕಡೆಗೆ ಸಾಗಿದೆ. 

ಇದನ್ನೂ ಓದಿ- Viral Video: ಗರಿಬಿಚ್ಚಿ ನಲಿಯುತ್ತಿದ್ದ ನವಿಲನ್ನು ಹಿಡಿಯಲು ಹೊಂಚು ಹಾಕಿದ ಹುಲಿ, ಮುಂದೇನಾಯ್ತು...!

ನವಿಲು ಹತ್ತಿರ ಬಂದಂತೆ ಕೆಲ ಮಕ್ಕಳು ನಾವಿಲನ್ನು ಹಿಂದೆ ಸರಿಯುವಂತೆ ಕೈ ಬೀಸುತ್ತಾರೆ. ಈ ಸಮಯದಲ್ಲಿ ಸಾಲಿನಲ್ಲಿ ಕುಳಿತಿದ್ದ ವಿದ್ಯಾರ್ಥಿಯೋರ್ವಳು ತನ್ನ ತಟ್ಟೆಯನ್ನು ನವಿಲಿಗೆ ಕೊಟ್ಟು ಹೊರಡುತ್ತಾಳೆ. ನವಿಲು ಬಿಸಿಯೂಟ ಸವಿಯುತ್ತಾ ನಿಂತರೆ, ಬಾಲಕಿ ಬೇರೊಂದು ತಟ್ಟೆ ತೆಗೆದುಕೊಂಡು ಬಂದು ನವಿಲಿನ ಎದುರೇ ಕೂರುತ್ತಾಳೆ. 

ಶಾಲೆಯ ಕೋಣೆಯ ಹತ್ತಿರವು ಬಂದ ನಾಟ್ಯ ಮಯೂರಿ (Natya Mayuti) ಧಾನ್ಯಗಳನ್ನು ಸವಿದು ತನ್ನ‌ ಹಸಿವನ್ನು ನೀಗಿಸಿಕೊಂಡಿದೆ.

ಇದನ್ನೂ ಓದಿ- Viral Video: ನಾಗರಹಾವನ್ನು ಕಂಡು ಬೆಚ್ಚಿಬಿದ್ದ ಹುಲಿ, ವಾಚ್ ವೈರಲ್ ವಿಡಿಯೋ! 

ಶಾಲಾ ಆವರಣವು ಹಚ್ಚ ಹಸಿರಿನ ಗಿಡಗಳ ಮಧ್ಯೆ ಸುಂದರ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರತಿದಿನ ಮಕ್ಕಳು ಈ ಪ್ರಕೃತಿ ಮಡಿಲಲ್ಲಿ ಊಟ ಸವಿಯುತ್ತಾರೆ. ಹಸಿರು ತುಂಬಿದ ವಾತಾವರಣದಲ್ಲಿ ರಾಷ್ಟ್ರಪಕ್ಷಿ ಆಗಮಿಸಿದ್ದರಿಂದ ವಿದ್ಯಾರ್ಥಿಗಳು ಕೂಡ ಸಂತಸ ವ್ಯಕ್ತಪಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News