ಮದ್ಯದ ಅಮಲಿನಲ್ಲಿ ಹಾವು ಹಿಡಿದ ಭೂಪ; ನಾಲ್ಕು ಬಾರಿ ಕಚ್ಚಿದ ಹಾವು
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸುರೇಶ್ ಬಾಗಡೆ ಮದ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದಿರುವುದು ಅಚ್ಚರಿಯ ವಿಷಯವಾಗಿದೆ.
ಬೆಳಗಾವಿ: ಸರ್ವರೋಗಕ್ಕೂ ಸಾರಾಯಿ ಮದ್ದು ಎಂಬುದು ಮದ್ಯ ಪ್ರಿಯರ ಮಾತು. ಆದರೆ ಮದ್ಯದ ಅಮಲಿನಲ್ಲಿಯೇ ಎಂಟು ಅಡಿಯಷ್ಟು ಉದ್ದದ ಹಾವನ್ನು ಹಿಡಿದಿರುವ ಘಟನೆ ಸಂಭವಿಸಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪಾಲಭಾವಿ ಸೊನ್ನದ್ ತೋಟದ ಅಂಗನವಾಡಿಯಲ್ಲಿ ಕಾಣಿಸಿಕೊಂಡ ಹಾವನ್ನು ರಮೇಶ್ ಬಾಗಡೆ ಎಂಬುವರು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. ಸುರೇಶ್ ಬಾಗಡೆ ಮದ್ಯದ ಅಮಲಿನಲ್ಲಿಯೇ ಹಾವನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬುದು ಅಚ್ಚರಿಯ ವಿಷಯವಾಗಿದೆ.
ಇದನ್ನೂ ಓದಿ- Dog Attack Viral Video: 11-12 ವರ್ಷದ ಬಾಲಕನ ಮೇಲೆ ಬೀದಿನಾಯಿ ಅಟ್ಯಾಕ್- ವಾಚ್ ವೈರಲ್ ವಿಡಿಯೋ
ಯಾವುದೇ ಮುಂಜಾಗ್ರತ ಕ್ರಮ ಅನುಸರಿಸದೇ ಇರುವುದರಿಂದ ರಮೇಶ್ಗೆ ಮುಖ, ಗಲ್ಲ, ತುಟಿ ಮತ್ತು ಕಾಲಿಗೆ ನಾಲ್ಕು ಬಾರಿ ಹಾವು ಕಚ್ಚಿದೆ. ಅದೃಷ್ಟವಶಾತ್ ರಮೇಶ್ ಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಳೆದ 20 ವರ್ಷಗಳಿಂದ ಹಾವುಗಳನ್ನು ಹಿಡಿಯುತ್ತೇನೆ ಎಂದು ಹೇಳಿದ್ದಲ್ಲದೆ ಬೆಳ್ಳುಳ್ಳಿ ಹಾಗೂ ನೀರನ್ನು ಸೇವಿಸುತ್ತೇನೆ. ಇದರಿಂದ ನನಗೆ ಹಾವು ಕಚ್ಚಿದರೂ ಏನು ಆಗೋದಿಲ್ಲವೆಂದು ಅವರು ತಿಳಿಸಿದ್ದಾರೆ. ಇವರ ಧೈರ್ಯವನ್ನು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದಲ್ಲದೆ ಅರಣ್ಯ ಇಲಾಖೆ ವತಿಯಿಂದ ರಮೇಶ್ ಅವರಿಗೆ ಪುರಸ್ಕಾರ ನೀಡಬೇಕೆಂದು ಕೋರಿದ್ದಾರೆ.
ಇದನ್ನೂ ಓದಿ- Video viral : ಪೆಟ್ರೋಲ್ ಬಂಕ್‌ನಲ್ಲಿ ಹೀಗೆ ಮಾಡಿದಳು ಯುವತಿ! ದಂಗಾದ ಯುವಕ!
ಆದರೂ, ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೆ ಹಾವಿನೊಂದಿಗೆ ಚೆಲ್ಲಾಟ ಆಡುವುದು ಸರಿಯಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.