Video viral : ಪೆಟ್ರೋಲ್‌ ಬಂಕ್‌ನಲ್ಲಿ ಹೀಗೆ ಮಾಡಿದಳು ಯುವತಿ! ದಂಗಾದ ಯುವಕ!

Girl Scooty Incident : ಪೆಟ್ರೋಲ್ ಪಂಪ್‌ನಲ್ಲಿ ಸ್ಕೂಟಿಯಲ್ಲಿ ಬಂದ ಹುಡುಗಿಯೊಬ್ಬಳು ಪೆಟ್ರೋಲ್ ಪಂಪ್‌ನ ಯಂತ್ರಕ್ಕೆ ಡಿಕ್ಕಿ ಹೊಡೆದ ವಿಡಿಯೋ ವೈರಲ್‌ ಆಗುತ್ತಿದೆ. ಇಷ್ಟೇ ಅಲ್ಲ, ಈ ಸಂದರ್ಭದಲ್ಲಿ ಮತ್ತೊಂದು ಘಟನೆ ನಡೆದಿದೆ.

Written by - Chetana Devarmani | Last Updated : Sep 13, 2022, 02:46 PM IST
  • ಪೆಟ್ರೋಲ್ ಪಂಪ್‌ನಲ್ಲಿ ಸ್ಕೂಟಿಯಲ್ಲಿ ಬಂದ ಹುಡುಗಿ
  • ಪೆಟ್ರೋಲ್ ಪಂಪ್‌ನ ಯಂತ್ರಕ್ಕೆ ಡಿಕ್ಕಿ ಹೊಡೆದ ವಿಡಿಯೋ ವೈರಲ್‌
Video viral : ಪೆಟ್ರೋಲ್‌ ಬಂಕ್‌ನಲ್ಲಿ ಹೀಗೆ ಮಾಡಿದಳು ಯುವತಿ! ದಂಗಾದ ಯುವಕ! title=
ಪೆಟ್ರೋಲ್ ಪಂಪ್‌

Girls Driving Scooty Video Viral : ಹುಡುಗಿಯರು ಸ್ಕೂಟರ್‌ನಿಂದ ಬೀಳುವ ಅಥವಾ ಯಾರಿಗಾದರೂ ಡಿಕ್ಕಿ ಹೊಡೆಯುವ ವಿಡಿಯೋಗಳನ್ನು ನಾವು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ನೋಡುತ್ತೇವೆ. ಇಂತಹ ವಿಡಿಯೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿವೆ. ಪೆಟ್ರೋಲ್ ಪಂಪ್‌ನಲ್ಲಿ ಸ್ಕೂಟಿಯಲ್ಲಿ ಬಂದ ಹುಡುಗಿಯೊಬ್ಬಳು ತನ್ನ ಕಾರನ್ನು ಪೆಟ್ರೋಲ್ ಪಂಪ್‌ನ ಯಂತ್ರಕ್ಕೆ ಡಿಕ್ಕಿ ಹೊಡೆಯುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಇಷ್ಟೇ ಅಲ್ಲ, ಈ ಸಂದರ್ಭದಲ್ಲಿ ಮತ್ತೊಂದು ಘಟನೆ ನಡೆಯುತ್ತದೆ. ಇಲ್ಲಿ ಸ್ಕೂಟಿ ಮೇಲೆ ಕುಳಿತ ಮತ್ತೊಬ್ಬ ಮಹಿಳೆಯೂ ಕೆಳಗೆ ಬೀಳುತ್ತಾರೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಇದನ್ನೂ ಓದಿ : WATCH : ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆ ಯೋಗಾಸನ.. ನೋಡಿದ್ರೆ ಬಿದ್ದು ಬಿದ್ದು ನಗ್ತೀರಾ!

ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಿಳೆಯೊಬ್ಬರು ಸ್ಕೂಟಿಯಲ್ಲಿ ಕುಳಿತು ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವುದು ಗೊತ್ತಾಗಿದೆ. ಪೆಟ್ರೋಲ್ ತುಂಬಿದ ನಂತರ, ಅವರು ಮುಂದೆ ಹೋಗುತ್ತಿರುವಾಗ, ಹಿಂದಿನ ವ್ಯಕ್ತಿಯೊಬ್ಬ ಹುಡುಗಿಗೆ ಸ್ಕೂಟಿ ಕೊಟ್ಟು ಪೆಟ್ರೋಲ್ ತುಂಬಲು ಮುಂದೆ ಹೋಗುವಂತೆ ಹೇಳುತ್ತಾರೆ. ಆಗ ಯುವತಿ ತನ್ನ ಸ್ಕೂಟಿ ತೆಗೆದುಕೊಂಡು, ಎಕ್ಸಲೇಟರ್‌ ತಿರುಗಿಸುತ್ತಾರೆ. ಈ ವೇಳೆ ನಿಯಂತ್ರಣಕ್ಕೆ ಬಾರದೆ ನೇರವಾಗಿ ಹೋದ ಸ್ಕೂಟಿ ಪೆಟ್ರೋಲ್‌ ಪಂಪ್‌ನ ಯಂತ್ರಕ್ಕೆ ಡಿಕ್ಕಿ ಹೊಡೆಯುತ್ತದೆ. ಈ ವೇಳೆ ಪೆಟ್ರೋಲ್‌ ಹಾಕುತ್ತಿದ್ದ ಕೆಲಸಗಾರನಿಗೆ ಪೆಟ್ಟಾಗಿದ್ದಲ್ಲದೆ, ಸಮೀಪದಲ್ಲೇ ಸ್ಕೂಟಿಯಲ್ಲಿ ಕುಳಿತಿದ್ದ ಮಹಿಳೆಯೂ ಬಿದ್ದಿದ್ದಾರೆ.

 

 
 
 
 

 
 
 
 
 
 
 
 
 
 
 

A post shared by RVCJ Media (@rvcjinsta)

 

ಇದನ್ನೂ ಓದಿ : Video viral : ನಡುರಸ್ತೆಯಲ್ಲೇ ಚಪ್ಪಲಿಯಿಂದ ಹೊಡೆದಾಡಿಕೊಂಡ ವ್ಯಕ್ತಿಗಳು

ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಯುವತಿ ಮಾಡಿದ ಸಣ್ಣ ತಪ್ಪಿನಿಂದಾಗಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಆದರೆ ಈ ಘಟನೆ ಇನ್ನಷ್ಟು ಗಂಭೀರವಾಗಬಹುದಿತ್ತು. ಆದರೆ, ಈ ವಿಡಿಯೋ ನೋಡಿದ ಜನರು ವಿಭಿನ್ನ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ  ವಿಡಿಯೋವನ್ನು rvcjinsta ಹೆಸರಿನ ಖಾತೆಯಿಂದ Instagram ನಲ್ಲಿ ಹಂಚಿಕೊಳ್ಳಲಾಗಿದೆ. ಸುಮಾರು 3 ಲಕ್ಷ ಮಂದಿ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News