Viral Video : ಜೀವಂತ ಹಾವನ್ನು ಕುಕ್ಕಿ ತಿನ್ನಲು ಯತ್ನಿಸುವ ರಣಹದ್ದು..! ಹಾವು ಮಾಡಿದ್ದೇನು ?
Snake And Eagle Fight Video: ಆಕಾಶದಲ್ಲಿ ಹಾರುತ್ತಿರುವಾಗಲೇ ಹದ್ದು ತನ್ನ ಬೇಟೆಯನ್ನು ಗುರಿಯಾಗಿಸಿಕೊಳ್ಳುತ್ತದೆ. ಅತಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವ ಹದ್ದು, ಒಮ್ಮೆ ಗುರಿಯಿಟ್ಟಿತೆಂದರೆ ಬೇಟೆಯ ಕತೆ ಮುಗಿಯಿತು ಎಂದೇ ಅರ್ಥ.
ಬೆಂಗಳೂರು : Snake And Eagle Fight Video: ಹದ್ದು ಬೇಟೆಯಾಡುವ ಪಕ್ಷಿ. ಅದರ ತೆಳುವಾದ ರೆಕ್ಕೆಗಳು ಅತಿ ವೇಗದಲ್ಲಿ ಹಾರುವುದಕ್ಕೆ ಅದಕ್ಕೆ ಸಹಾಯ ಮಾಡುತ್ತದೆ. ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್‌ನ ಸಮೀಕ್ಷೆಯ ಪ್ರಕಾರ, ಹದ್ದು ವಿಶ್ವದ 10 ವೇಗದ ಪ್ರಾಣಿಗಳ ವರ್ಗಕ್ಕೆ ಸೇರಿದೆ. ಹದ್ದು ಗಂಟೆಗೆ 320 ಕಿಲೋಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಹಾರಬಲ್ಲದು. ಹದ್ದು ಆಕಾಶದಲ್ಲಿ ಮಾತ್ರವಲ್ಲ, ಭೂಮಿಯ ಮೇಲಿನ ಅತ್ಯಂತ ವೇಗದ ಪಕ್ಷಿಯಾಗಿದೆ.
ಹದ್ದು ಮತ್ತು ಹಾವಿನ ಭಯಾನಕ ವಿಡಿಯೋ :
ಆಕಾಶದಲ್ಲಿ ಹಾರುತ್ತಿರುವಾಗಲೇ ಹದ್ದು ತನ್ನ ಬೇಟೆಯನ್ನು ಗುರಿಯಾಗಿಸಿಕೊಳ್ಳುತ್ತದೆ. ಅತಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುವ ಹದ್ದು, ಒಮ್ಮೆ ಗುರಿಯಿಟ್ಟಿತೆಂದರೆ ಬೇಟೆಯ ಕತೆ ಮುಗಿಯಿತು ಎಂದೇ ಅರ್ಥ. ಸಾವಿರಾರು ಮೀಟರ್ ಎತ್ತರದಿಂದಲೇ ತನ್ನ ಬೇಟೆಯನ್ನು ಗುರುತಿಸುವ ಈ ಪಕ್ಷಿ ಬೇಟೆಗೆ ತಪ್ಪಿಸಿಕೊಳ್ಳುವ ಕಿಂಚಿತ್ತೂ ಅವಕಾಶ ನೀಡುವುದಿಲ್ಲ. ಕ್ಷಣ ಮಾತ್ರದಲ್ಲಿ ಹರಿ ಬಂದು ಬೇಟೆ ಮೇಲೆ ಮಾರಣಾಂತಿಕ ದಾಳಿ ನಡೆಸಿ ಬಿಡುತ್ತದೆ.ಇತ್ತೀಚಿನ ದಿನಗಳಲ್ಲಿ ಹದ್ದಿನ ಒಂದು ವಿಡಿಯೋ ವೈರಲ್ ಆಗುತ್ತಿದೆ. ಇದರಲ್ಲಿ ಅವರು ಅಪಾಯಕಾರಿ ಹಾವನ್ನು ಬೇಟೆಯಾಡುತ್ತಿರುವುದನ್ನು ಕಾಣಬಹುದು. ಹದ್ದು ತನ್ನ ಮೊನಚಾದ ಉಗುರುಗಳಿಂದ ಹಾವನ್ನು ಒತ್ತಿ ಹಿಡಿದು ತನ್ನ ಕೊಕ್ಕಿನಿಂದ ಕುಕ್ಕುತ್ತಿರುವುದನ್ನು ಕಾಣಬಹುದು.
ಇದನ್ನೂ ಓದಿ : Monkey Leopard Video: ಮರದ ಮೇಲೇರಿದ ಕೋತಿಯನ್ನು ಜಿಗಿದು ಹಿಡಿದ ಚಿರತೆ- ವಾಚ್ ಶಾಕಿಂಗ್ ವಿಡಿಯೋ
ಅಪಾಯಕಾರಿ ಹಾವನ್ನು ಹದ್ದು ತನ್ನ ಉಗುರುಗಳಿಂದ ಹಿಡಿದಿತಟ್ಟಿರುವುದನ್ನು ಇಲ್ಲಿ ಕಾಣಬಹುದು. ಇಷ್ಟಿದ್ದರೂ ಹಾವು ಕೂಡಾ ತನ್ನ ಬಾಯಿ ತೆರೆದು ಹದ್ದಿನ ಮೇಲೆ ದಾಳಿ ಮಾಡಲು ಯತ್ನಿಸುತ್ತದೆ. ಈ ದೃಶ್ಯ ನಿಜಕ್ಕೂ ಭಯಾನಕವಾಗಿದೆ.
ನೇಚರ್_ಓಕೆ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಹದ್ದಿನ ಉಗುರಿಗೆ ಸಿಲುಕಿ ಹಾವು ನರಳುತ್ತಿದ್ದು, ಹದ್ದು ನಿರಂತರವಾಗಿ ದಾಳಿ ಮಾಡುವುದನ್ನು ವಿಡಿಯೋದಲ್ಲಿ ಕಾಣಬಹುದು. ಹಾವು ಕೊನೆಯುಸಿರಿನವರೆಗೂ ಹದ್ದಿನ ಜೊತೆ ಹೋರಾಡುತ್ತದೆ. ಈ ವೀಡಿಯೋವನ್ನು ಇದುವರೆಗೆ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
ಇದನ್ನೂ ಓದಿ : ಮದುವೆ ಸಂಭ್ರಮದ ನಡುವೆಯೂ ಕುಳಿತಲ್ಲೇ ನಿದ್ದೆಗೆ ಜಾರಿದ ವರ .! ವಧು ಮಾಡಿದ್ದೇನು ಗೊತ್ತಾ ?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.