Elephant Viral Video : ಮಾನವರಂತೆ ಪ್ರಾಣಿಗಳಿಗೂ ಭಾವನೆಗಳಿವೆ ಎಂಬ ವಿಚಾರ ಹಲವಾರು ಪ್ರಸಂಗಗಳ ಮೂಲಕ ಸಾಬೀತಾಗಿದೆ. ಆನೆಗಳು ನೋಡಲು ದೈತ್ಯವಾಗಿದ್ದರೂ, ಅವುಗಳಿಗೆ ಮಗುವಿನಂತಹ ಮನಸ್ಸಿರುತ್ತದೆ. ಸದ್ಯ ಕಬ್ಬಿನ ಗದ್ದೆಯ ಮಣ್ಣಿನಲ್ಲಿ ಸಿಲುಕಿದ್ದ ಮರಿ ಆನೆ ಒಂದು ತನ್ನನ್ನು ರಕ್ಷಿಸಿದ ಯುವತಿಗೆ ಧನ್ಯವಾದ ಹೇಳಿರುವ ವಿಡಿಯೋ ಒಂದು ವೈರಲ್‌ ಆಗಿದೆ.


COMMERCIAL BREAK
SCROLL TO CONTINUE READING

ಐಎಸ್‌ಎಫ್‌ ಅಧಿಕಾರಿ ಸುಸಂತ ನಂದ ಅವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ಕ್ಯೂಟ್‌ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಬ್ಬಿನ ಗದ್ದೆಯ ಕೆಸರಲ್ಲಿ ಮರಿಯಾನೆಯ ಕಾಲು ಸಿಲುಕಿಕೊಂಡು ಮೇಲಕ್ಕೆ ಬರಲಾಗದೆ ಒದ್ದಾಡುತ್ತಿತ್ತು. ಇದನ್ನು ನೋಡಿದ ಯುವತಿ ಆನೆಯ ಕಾಲನ್ನು ಗಟ್ಟಿಯಾಗಿ ಹಿಡಿದು ಮೇಲಕ್ಕೆ ಬರಲು ಸಹಾಯ ಮಾಡುತ್ತಾಳೆ. ನಂತರ ಮರಿ ಆನೆ ತನ್ನಗೆ ಸಹಾಯ ಮಾಡಿದ ಯುವತಿಗೆ ಸೊಂಡಿಲನ್ನೆತ್ತಿ ತನ್ನದೇ ಶೈಲಿಯಲ್ಲಿ ಧನ್ಯವಾದ ಹೇಳಿದೆ. ಈ ಸಂಪೂರ್ಣ ದೃಶ್ಯವನ್ನು ಯುವತಿಯ ಜತೆಗಿದ್ದವರು ಸೆರೆ ಹಿಡಿದಿದ್ದಾರೆ.


ಇದನ್ನೂ ಓದಿ: B-Town ನ Halloween ಪಾರ್ಟಿಯಲ್ಲಿ ತುಂಡುಡುಗೆ ಧರಿಸಿ ಝಲಕ್ ನೀಡಿದ ಬಾಲಿವುಡ್ ಲಲನೆಯರು... Watch Videos 


ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆನೆಮರಿಯ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಕ್ಯೂಟ್‌ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಇನ್ನು ಹಲವರು ಹಾರ್ಟ್‌ ಇಮೋಜಿ ಒತ್ತುತ್ತಿದ್ದಾರೆ. ಒಟ್ಟಿನಲ್ಲಿ ವಿಡಿಯೋ ಬೆಸರದಿಂದ ಕುಳಿತವರ ನಗುವಿಗೆ ಕಾರಣವಾಗಿದ್ದು, ಅಂತರ್ಜಾಲದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ