ಲಂಡನ್: ಮಗು ಜನಿಸಿದ ಬಳಿಕ ತಂದೆ ತಾಯಿ, ತಮ್ಮ ಮಗುವಿಗೆ ಮುದ್ದಾದ ಹೆಸರನ್ನು ಇಡಬೇಕು ಎಂದು ಯೋಚಿಸುತ್ತಾರೆ. ಇನ್ನೂ ಕೆಲವರು ಮಗುವಿನ ಭವಿಷ್ಯವನ್ನು ಆಲೋಚಿಸಿ, ಅದಕ್ಕೆ ಸೂಕ್ತ ಎನ್ನುವಂತಹ ಹೆಸರನ್ನು ನಾಮಕರಣ ಮಾಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ತಮ್ಮ ಮಗುವಿಗೆ ಖಾದ್ಯವೊಂದರ ಹೆಸರನ್ನು ಇಟ್ಟು ಭಾರೀ ಸುದ್ದಿಯಾಗುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral News: ಈ ದೇಶದಲ್ಲಿ ಹಣ ಕೊಟ್ಟು ಹಸುವನ್ನು ತಬ್ಬಿಕೊಳ್ಳುತ್ತಿದ್ದಾರೆ ಜನ, ಕಾರಣ ತುಂಬಾ ರೋಚಕವಾಗಿದೆ


ಐರ್ಲೆಂಡ್ ಮೂಲದ ದಂಪತಿ ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರನ್ನು ಇಟ್ಟಿದ್ದಾರೆ. ಇವರಿಗೆ ಭಾರತೀಯ ತಿಂಡಿ ತಿನಿಸುಗಳೆಂದರೆ ಬಹಳ ಅಚ್ಚುಮೆಚ್ಚು. ಹೀಗಾಗಿ ಇಲ್ಲಿನ ತಿಂಡಿ ಅವರಿಗೆ ಇಷ್ಟವಾದ್ದರಿಂದ ಮಗುವಿಗೂ ಅದೇ ಹೆಸರನ್ನು ಇಟ್ಟಿದ್ದಾರೆ. 


 


 


ಮಗುವಿನ ಹೆಸರು ಏನೆಂದು ಕುತೂಹಲವಿದೆಯೇ? ಹಾಗಾದ್ರೆ ವರದಿಯನ್ನು ಮುಂದಕ್ಕೆ ಓದಿ. ಇಂಡಿಯನ್ ಖಾದ್ಯಗಳಲ್ಲಿ ಜನಪ್ರಿಯವಾಗಿರುವ ‘ಪಕೋರಾ’ (ಪಕೋಡಾ)ವನ್ನು ಇವರು ಇಷ್ಟಪಟ್ಟು ತಿಂದಿದ್ದಾರೆ. ಬಳಿಕ ಇದರ ಸ್ವಾದಕ್ಕೆ ಮನಸೋತು ತಮ್ಮ ಮಗುವಿಗೂ ಇದೇ ಹೆಸರನ್ನು ಇಡಬೇಕು ಎಂದು ಆಲೋಚಿಸಿ, ಪಕೋರಾ ಎಂದು ನಾಮಕರಣ ಮಾಡಿದ್ದಾರೆ.


ಇದನ್ನೂ ಓದಿ: Viral News: ಮನೆ ಕೆಡವಿದ ಮೇಲೆ ಸಿಕ್ಕಳು ‘ಅದೃಷ್ಟ ಲಕ್ಷ್ಮಿ’; ದಂಪತಿಗೆ ಸಿಕ್ತು ಕೋಟಿ ಕೋಟಿ ಮೌಲ್ಯದ ‘ನಿಧಿ’!


ಭಾರತೀಯರಿಗೆ ಈ ಹೆಸರು ತಿನಿಸುಗಳಲ್ಲಿ ಕೇಳಿ ತಿಳಿದಿದೆಯೇ ಹೊರತು, ಮಗುವಿಗೆ ನಾಮಕರಣ ಮಾಡಿ ಗೊತ್ತಿಲ್ಲ. ಹೀಗಾಗಿ ಕೊಂಚ ವಿಭಿನ್ನವಾಗಿ ಅನುಭವವಾಗುತ್ತಿದೆ. ಆದರೆ ಭಾರತೀಯ ತಿನಿಸುಗಳಿಗೆ ಮನಸೋತ ದಂಪತಿ ಇಂಡಿಯನ್ ರೆಸ್ಟೋರೆಂಟ್ ಗಳನ್ನು ಹೆಚ್ಚಾಗಿ ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.