ನವದೆಹಲಿ: ನಿಮಗೆ ಉಚಿತವಾಗಿ ವಿದೇಶ ಪ್ರವಾಸ ಮಾಡುವ ಆಸೆ ಇದೆಯೇ? ಹೌದು ಎಂದಾದರೆ, ಇಲ್ಲಿದೆ ನಿಮಗಾಗಿ ಒಂದು ಸುವರ್ಣಾವಕಾಶ. ವಿಶ್ವದಲ್ಲೇ ಸುಂದರ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿರುವ ಹಾಂಕಾಂಗ್ ಮತ್ತೆ ಪ್ರವಾಸಿಗರನ್ನು ತನ್ನತ್ತ ಸೆಳೆಯಲು 5 ಲಕ್ಷ ವಿಮಾನ ಟಿಕೆಟ್‍ಗಳನ್ನು ಉಚಿತವಾಗಿ ನೀಡಲು ಹೊರಟಿದೆ. ಈ ಮೂಲಕ ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕ ಮತ್ತು ಚೀನಾ ಸರ್ಕಾರದ ಕಟ್ಟುನಿಟ್ಟಿನ ನೀತಿಗಳಿಂದ ಭಾರೀ ಆರ್ಥಿಕ ನಷ್ಟ ಎದುರಿಸುತ್ತಿರುವ ಹಾಂಕಾಂಗ್‌ಗೆ ಪ್ರವಾಸಿಗರು ಬರಲು ಪ್ರೋತ್ಸಾಹಿಸಲಾಗುತ್ತದೆ.


COMMERCIAL BREAK
SCROLL TO CONTINUE READING

5 ಲಕ್ಷ ಟಿಕೆಟ್‌ ಮುಂಗಡ ಖರೀದಿ


ವರದಿಯ ಪ್ರಕಾರ, ಹಾಂಗ್ ಕಾಂಗ್ ಏರ್‌ಪೋರ್ಟ್ ಅಥಾರಿಟಿ (AAHK) ವಕ್ತಾರರು ಈ ಯೋಜನೆಯನ್ನು ಖಚಿತಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಹಾಂಗ್ ಕಾಂಗ್‌ನ ವಿಮಾನಯಾನ ಸಂಸ್ಥೆಗಳು ದೊಡ್ಡ ನಷ್ಟ ಅನುಭವಿಸಿವೆ. ಸಿಬ್ಬಂದಿಗೆ ಸಂಬಳ ನೀಡಲು ಸಹ ಅವರ ಬಳಿ ಹಣವಿಲ್ಲವೆಂದು ವಕ್ತಾರರು ಹೇಳಿದ್ದಾರೆ. ಆ ಅವಧಿಯಲ್ಲಿ ವಿಮಾನಯಾನ ಸಂಸ್ಥೆಗಳಿಗೆ ಪರಿಹಾರ ನೀಡುವ ಸಲುವಾಗಿ AAHK 254.8 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ 5 ಲಕ್ಷ ಟಿಕೆಟ್‌ಗಳನ್ನು ಮುಂಗಡವಾಗಿ ಖರೀದಿಸಿತ್ತು. ಹೀಗಾಗಿ ಪರಿಸ್ಥಿತಿ ಸರಿ ಇದ್ದಾಗ ವಿದೇಶಿ ಪ್ರವಾಸಿಗರನ್ನು ಬಳಸಿಕೊಂಡು ದೇಶಕ್ಕೆ ಕರೆತರಬಹುದು ಎಂಬುದು ಇದರ ಲೆಕ್ಕಾಚಾರವಂತೆ.


ಇದನ್ನೂ ಓದಿ: Selfie With Tiger: ಸೆಲ್ಫಿಗಾಗಿ ಕಾಡಿನಲ್ಲಿ ಹುಲಿ ಬೆನ್ನಟ್ಟಿದ ಯುವಕರು, ಮುಂದಾಗಿದ್ದೇನು?


ಹಾಂಗ್ ಕಾಂಗ್‌ನಲ್ಲಿ ಕ್ವಾರಂಟೈನ್ ಅವಧಿ ಮುಕ್ತಾಯ 


ವಕ್ತಾರರ ಪ್ರಕಾರ, ಈಗ ಹಾಂಗ್ ಕಾಂಗ್‌ನಲ್ಲಿ ಕೊರೊನಾ ಸಾಂಕ್ರಾಮಿಕವು ದೊಡ್ಡ ಪ್ರಮಾಣದಲ್ಲಿ ನಿಯಂತ್ರಣಕ್ಕೆ ಬಂದಿದೆ. ಹೀಗಾಗಿ ವಿದೇಶಿ ಪ್ರವಾಸಿಗರಿಗೆ ಕಡ್ಡಾಯ ಹೋಟೆಲ್ ಕ್ವಾರಂಟೈನ್ ನಿಯಮವನ್ನು ಸಹ ರದ್ದುಗೊಳಿಸಲಾಗಿದೆ. ಇದರೊಂದಿಗೆ ದೇಶದ ಪ್ರವಾಸೋದ್ಯಮವನ್ನು ಮತ್ತೆ ಸರಿದಾರಿಗೆ ತರಲು 5 ಲಕ್ಷ ಉಚಿತ ವಿಮಾನ ಟಿಕೆಟ್‌ಗಳನ್ನು ನೀಡಲು ನಿರ್ಧರಿಸಲಾಗಿದೆ. ಇದರಲ್ಲಿ ಅರ್ಧದಷ್ಟು ಟಿಕೆಟ್‌ಗಳನ್ನು ಹಾಂಗ್ ಕಾಂಗ್‌ನ ಸ್ಥಳೀಯ ನಿವಾಸಿಗಳಿಗೆ ನೀಡಲಾಗುವುದು ಮತ್ತು ಅರ್ಧದಷ್ಟು ಟಿಕೆಟ್‌ಗಳನ್ನು ವಿದೇಶಿಯರಿಗೆ ನೀಡಲಾಗುವುದಂತೆ.


ಪ್ರವಾಸೋದ್ಯಮ ಪುನಶ್ಚೇತನಕ್ಕೆ ಪ್ರಯತ್ನ


ವರದಿಯ ಪ್ರಕಾರ, ಕೊರೊನಾ ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲು 5 ಕೋಟಿ 60 ಲಕ್ಷ ಪ್ರವಾಸಿಗರು ಹಾಂಗ್ ಕಾಂಗ್‌ಗೆ ಆಗಮಿಸಿದ್ದರು. ಆದರೆ ಅದರ ನಂತರ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗ ಈ ಸಂಖ್ಯೆ ಬಹಳ ಕಡಿಮೆ ಇತ್ತು. ಚೀನಾ ಸರ್ಕಾರದ ಶೂನ್ಯ ಕೋವಿಡ್ ನೀತಿಯು ಸರಿಯಾದ ಕೆಲಸವನ್ನು ಮಾಡಿದೆ. ಈ ನೀತಿಯಡಿ ವಿದೇಶದಿಂದ ಹಾಂಗ್ ಕಾಂಗ್ ಅಥವಾ ಚೀನಾದ ಇತರ ಭಾಗಗಳಿಗೆ ಬರುವ ಜನರು ತಮ್ಮ ಸ್ವಂತ ಖರ್ಚಿನಲ್ಲಿ 21 ದಿನಗಳ ಕಾಲ ಹೋಟೆಲ್‌ನಲ್ಲಿ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿತ್ತು. ಈ ನೀತಿಯಿಂದಾಗಿ ವಿದೇಶಿ ಪ್ರವಾಸಿಗರು ಹಾಂಗ್ ಕಾಂಗ್‍ನತ್ತ ಮುಖ ಮಾಡಿರಲಿಲ್ಲ. ಇದರಿಂದಾಗಿ ಅಲ್ಲಿನ ಆರ್ಥಿಕತೆಯು ಕೆಟ್ಟ ಸ್ಥಿತಿಗೆ ತಲುಪಿದೆ. ಹೀಗಾಗಿ ಮತ್ತೆ ಹಾಂಗ್ ಕಾಂಗ್‍ನಲ್ಲಿ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಪ್ರಯತ್ನಿಸಲಾಗುತ್ತಿದೆ.


ಇದನ್ನೂ ಓದಿ: ಟ್ರಕ್‌ಗೆ ಬಸ್ ಡಿಕ್ಕಿ: ಬೆಂಕಿ ಹೊತ್ತಿ 11 ಪ್ರಯಾಣಿಕರ ಸಜೀವ ದಹನ!, 38ಕ್ಕೂ ಹೆಚ್ಚು ಮಂದಿಗೆ ಗಾಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.