ಕೇವಲ 9 ತಿಂಗಳಲ್ಲಿ ಪಾಕಿಸ್ತಾನದಲ್ಲಿದ್ದ ಆರು ಭಾರತೀಯ ಕೈದಿಗಳು ಸಾವು! ಕಾರಣ ನಿಗೂಢ

“ಪಾಕಿಸ್ತಾನದಲ್ಲಿ ಜೈಲಿನಲ್ಲಿರುವಾಗ ಭಾರತೀಯ ಕೈದಿಗಳು ಸಾಯುತ್ತಿರುವ ಪ್ರಕರಣಗಳು ಹೆಚ್ಚು ಕಳವಳಕಾರಿಯಾಗಿದೆ. ಭಾರತೀಯ ಕೈದಿಗಳ ಭದ್ರತೆಯ ವಿಷಯವನ್ನು ಇಸ್ಲಾಮಾಬಾದ್‌ನಲ್ಲಿರುವ ನಮ್ಮ ಹೈಕಮಿಷನ್ ಪದೇ ಪದೇ ಪ್ರಸ್ತಾಪಿಸಿದೆ. ಎಲ್ಲಾ ಭಾರತೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಲಾಗಿದೆ” ಎಂದರು.

Written by - Bhavishya Shetty | Last Updated : Oct 7, 2022, 09:31 PM IST
    • 6 ಭಾರತೀಯರು ಪಾಕಿಸ್ತಾನದ ವಶದಲ್ಲಿದ್ದ ಸಂದರ್ಭದಲ್ಲಿದ್ದ ಸಾವನ್ನಪ್ಪಿದ್ದಾರೆ
    • ಅವರನ್ನು ದೇಶಕ್ಕೆ ಹಿಂದಿರುಗಿಸುವಂತೆ ಭಾರತ ಮನವಿ ಮಾಡಿದರೂ ಅವರನ್ನು ಬಂಧಿಸಲಾಗಿದೆ
    • ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿಕೆ
ಕೇವಲ 9 ತಿಂಗಳಲ್ಲಿ ಪಾಕಿಸ್ತಾನದಲ್ಲಿದ್ದ ಆರು ಭಾರತೀಯ ಕೈದಿಗಳು ಸಾವು! ಕಾರಣ ನಿಗೂಢ title=
Indian prisoner

ಕಳೆದ ಒಂಬತ್ತು ತಿಂಗಳಲ್ಲಿ ಪಾಕಿಸ್ತಾನದ ವಶದಲ್ಲಿದ್ದ ಆರು ಭಾರತೀಯ ಕೈದಿಗಳು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಶುಕ್ರವಾರ ಹೇಳಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಈ ಬಗ್ಗೆ ಮಾತನಾಡಿದ್ದು, “6 ಭಾರತೀಯರು ಪಾಕಿಸ್ತಾನದ ವಶದಲ್ಲಿದ್ದ ಸಂದರ್ಭದಲ್ಲಿದ್ದ ಸಾವನ್ನಪ್ಪಿದ್ದಾರೆ. ಅವರಲ್ಲಿ 5 ಮಂದಿ ಮೀನುಗಾರರು. ಈ 6 ಮಂದಿಯೂ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು. ಅವರನ್ನು ದೇಶಕ್ಕೆ ಹಿಂದಿರುಗಿಸುವಂತೆ ಭಾರತ ಮನವಿ ಮಾಡಿದರೂ ಅಕ್ರಮವಾಗಿ ಅವರನ್ನು ಬಂಧಿಸಲಾಗಿತ್ತು” ಎಂದು ಅವರು ಆರೋಪಿಸಿದ್ದಾರೆ. 

ಇದನ್ನೂ ಓದಿ: ‘ಕಾಲಾ ಚಶ್ಮಾ’ ಹಿಂದಿ ಹಾಡಿಗೆ ಜಪಾನ್ ಬಾಲೆಯರ ಭರ್ಜರಿ ಸ್ಟೆಪ್: ವಿಡಿಯೋ ನೋಡಿದ್ರೆ ನೀವು ಕುಣಿಯೋದು ಗ್ಯಾರಂಟಿ

ಪಾಕಿಸ್ತಾನದಲ್ಲಿ ಜೈಲಿನಲ್ಲಿರುವಾಗ ಭಾರತೀಯ ಕೈದಿಗಳು ಸಾಯುತ್ತಿರುವ ಪ್ರಕರಣಗಳು ಹೆಚ್ಚು ಕಳವಳಕಾರಿಯಾಗಿದೆ. ಭಾರತೀಯ ಕೈದಿಗಳ ಭದ್ರತೆಯ ವಿಷಯವನ್ನು ಇಸ್ಲಾಮಾಬಾದ್‌ನಲ್ಲಿರುವ ನಮ್ಮ ಹೈಕಮಿಷನ್ ಪದೇ ಪದೇ ಪ್ರಸ್ತಾಪಿಸಿದೆ. ಎಲ್ಲಾ ಭಾರತೀಯ ಕೈದಿಗಳನ್ನು ಕೂಡಲೇ ಬಿಡುಗಡೆ ಮಾಡಿ ಭಾರತಕ್ಕೆ ಕಳುಹಿಸುವಂತೆ ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಲಾಗಿದೆ” ಎಂದರು.

ಎರಡು ನೆರೆಯ ದೇಶಗಳ ನಡುವಿನ ಅಂತರಾಷ್ಟ್ರೀಯ ಕಡಲ ಗಡಿ ರೇಖೆಯ ಬಳಿ ಮುಳುಗುತ್ತಿದ್ದ ಆರು ಭಾರತೀಯ ಮೀನುಗಾರರನ್ನು ರಕ್ಷಿಸಿದ್ದೇವೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿಕೊಂಡ ದಿನವೇ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಈ ಹೇಳಿಕೆ ಬಂದಿದೆ.

ಇದನ್ನೂ ಓದಿ: ಸೋನಿಯಾ ಶೂ ಲೇಸ್ ಕಟ್ಟುವ ಫೋಟೋ ವೈರಲ್ ಆಗ್ತಿದ್ದಂತೆ ಬಿಜೆಪಿ ಮಾಡಿದ್ದೇನು ಗೊತ್ತಾ…!!

ಪೂರ್ವ ಸಮುದ್ರ ತೀರದಲ್ಲಿ ಗಸ್ತು ತಿರುಗುತ್ತಿದ್ದ ಪಾಕಿಸ್ತಾನ್ ಮಾರಿಟೈಮ್ ಸೆಕ್ಯುರಿಟಿ ಏಜೆನ್ಸಿ (ಪಿಎಂಎಸ್‌ಎ) ಹಡಗು, ಸಮುದ್ರದಲ್ಲಿದ್ದ ಆರು ಭಾರತೀಯ ಮೀನುಗಾರರನ್ನು ಕಂಡಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಭಾರತೀಯ ಮೀನುಗಾರಿಕಾ ದೋಣಿಯ ಎಲ್ಲಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಆ ಬಳಿಕ ಮತ್ತೆ ವರದಿ ಬಿಡುಗಡೆ ಮಾಡಿದ್ದು, ದೋಣಿ ಅಪಘಾತದಿಂದ ಮುಳುಗಿತು. ಅವರೆಲ್ಲರೂ ಪಾಕಿಸ್ತಾನದ ನೀರಿನಲ್ಲಿ ಕೊಚ್ಚಿಹೋಗಿದ್ದಾರೆ. ರಕ್ಷಿಸಲಾದ ಮೀನುಗಾರರನ್ನು ಆ ಪ್ರದೇಶದಲ್ಲಿ ಭಾರತೀಯ ಕೋಸ್ಟ್ ಗಾರ್ಡ್ ಹಡಗಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News