Bloody Marry Challenge: ಭಾರತೀಯ ಚಲನ ಚಿತ್ರಗಳಲ್ಲಿ ಭೂತ ತನ್ನ ನಿಜ ಸ್ವರೂಪವನ್ನು ಕನ್ನಡಿಯಲ್ಲಿ ಮಾತ್ರ ತೋರಿಸುತ್ತದೆ ಎಂಬುದನ್ನು ತೋರಿಸಲಾಗುತ್ತದೆ. ಹಾಲಿವುಡ್ ಅಥವಾ ಬಾಲಿವುಡ್ ಚಿತ್ರವಾಗಲಿ, ಭೂತದ ನಿಜವಾದ ಮುಖವನ್ನು ತೋರಿಸಬೇಕಾದರೆ ಅದನ್ನು ಕನ್ನಡಿಯಲ್ಲಿ ಮಾತ್ರ ತೋರಿಸುತ್ತದೆ ಎನ್ನಲಾಗುತ್ತದೆ. ಆದರೆ ಇದು ಏಕೆ ಸಂಭವಿಸುತ್ತದೆ? ಅಥವಾ ಇದರ ಹಿಂದಿನ ತರ್ಕವೇನು? ಬನ್ನಿ ತಿಳಿದುಕೊಳ್ಳಲು ಪಯತ್ನಿಸೋಣ (Viral News In Kannada).


COMMERCIAL BREAK
SCROLL TO CONTINUE READING

ಬ್ಲಡಿ ಮೇರಿ ಕಥೆ ನಿಮಗೆ ಗೊತ್ತಾ? (how did bloody mary die)
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ರೀಲ್ ವೊಂದು ಭಾರಿ ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ವ್ಯಕ್ತಿ ನೀವು ಭೂತವನ್ನು ನೋಡಬೇಕಾದರೆ ಮಧ್ಯರಾತ್ರಿಯಲ್ಲಿ ನಿಮ್ಮ ಮನೆಯ ಕನ್ನಡಿಯ ಮುಂದೆ ನಿಂತು ಕನ್ನಡಿ ನೋಡುತ್ತಾ ಬ್ಲಡಿ ಮೇರಿ (bloody mary story) ಎಂದು ಮೂರು ಬಾರಿ ಹೇಳಿ ಎಂದು ಹೇಳುವುದು ಕಂಡು ಬರುತ್ತಿದೆ. ಹೀಗೆ ಮಾಡುವುದರಿಂದ ಇದ್ದಕ್ಕಿದ್ದಂತೆ ಬ್ಲಡಿ ಮೇರಿ ಎಂಬ ಹೆಣ್ಣು ಭೂತ ಕನ್ನಡಿಯಲ್ಲಿ ಕಾಣಿಸಿಕೊಂಡು ನಿಮ್ಮ ಪರಚುತ್ತಾಳೆ ಎಂದು ಆತ ಹೇಳುತ್ತಿದ್ದಾನೆ.  ಈ ರೀಲ್ ಭಾರತದಲ್ಲಷ್ಟೇ ಅಲ್ಲದೆ ವಿದೇಶಗಳಲ್ಲೂ ವೈರಲ್ ಆಗುತ್ತಿದೆ.


ಇದನ್ನೂ ಓದಿ-Viral Video ಥೈಲ್ಯಾಂಡ್ ನ ರಸ್ತೆಯ ಮೇಲೆ ಎರಡು ವಾನರ ಸೆನೆಗಳ ನಡುವೆ ಭೀಕರ ಕಾಳಗ! Watch Video


ಕನ್ನಡಿಯಲ್ಲಿ ದೆವ್ವ ಹೇಗೆ ಕಾಣಿಸುತ್ತದೆ? (bloody mary ghost)
2010 ರಲ್ಲಿ, ಇಟಾಲಿಯನ್ ಮನಶ್ಶಾಸ್ತ್ರಜ್ಞ ಜಿಯೋವಾನಿ ಕ್ಯಾಪುಟೊ ಈ ಕುರಿತು ಒಂದು ಸಂಶೋಧನೆ ನಡೆಸಿದ್ದಾರೆ. ಇದರಲ್ಲಿ ಕೆಲವರಿಗೆ ಮಂದಬೆಳಕಿನ ಕೋಣೆಗೆ ಹೋಗಿ 10 ನಿಮಿಷ ಕನ್ನಡಿ ನೋಡುವಂತೆ ಅವರು ಹೇಳುತ್ತಾರೆ. ಎಲ್ಲರೂ ಅದನ್ನು ಮಾಡಿದಾಗ, ಅವರು ಕನ್ನಡಿಯಲ್ಲಿ ಕಂಡದ್ದನ್ನು ಬರೆಯಲು ಹೇಳುತ್ತಾರೆ. ಅದರಲ್ಲಿನ ಶೇ. 66 ರಷ್ಟು ಜನ ಕನ್ನಡಿಯಲ್ಲಿ ತಮ್ಮ ಮುಖವನ್ನು ವಿಭಿನ್ನ ರೀತಿಯಲ್ಲಿ ನೋಡಿರುವುದಾಗಿ ಹೇಳುತ್ತಾರೆ. ಶೇ. 40 ರಷ್ಟು ಜನರು ಪ್ರಾಣಿಗಳು, ವಿಚಿತ್ರ ಆಕಾರಗಳು ಮತ್ತು ತಮ್ಮನ್ನಗಳಿದ ಪೋಷಕರ ಮುಖಗಳನ್ನು ಕನ್ನಡಿಯಲ್ಲಿ ನೋಡಿರುವುದಾಗಿ ಬರೆದುಕೊಂಡಿದ್ದಾರೆ.


ಇದನ್ನೂ ಓದಿ-Abby Hensel Marriage: ಒಂದೇ ಶರೀರ ಹೊಂದಿರುವ ಅವಳಿ Abby Hensel ವಿವಾಹ, ವಿಡಿಯೋ ನೋಡಿ


ಈ ಕುರಿತು ಹೇಳುವ ಮನಶ್ಶಾಸ್ತ್ರಜ್ಞ ಜಿಯೋವಾನಿ ಕ್ಯಾಪುಟೊ ಮನುಷ್ಯರು ಯಾವಾಗಲು ವಸ್ತುಗಳಲ್ಲಿ ಮುಖಗಳನ್ನು ನೋಡುತ್ತಾರೆ ಎಂದು ಹೇಳುತ್ತಾರೆ. ಕೆಲವೊಮ್ಮೆ ಮೋಡಗಳಲ್ಲಿ, ಕೆಲವೊಮ್ಮೆ ತರಕಾರಿಗಳಲ್ಲಿ, ಕೆಲವೊಮ್ಮೆ ಟೋಸ್ಟ್ ತುಂಡುಗಳಲ್ಲಿ. ಇಂತಹ ಪರಿಸ್ಥಿತಿಯಲ್ಲಿ, ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಮಂದ ಬೆಳಕಿನಲ್ಲಿ ಕನ್ನಡಿಯನ್ನು ನೋಡುತ್ತಾ ಯಾವುದಾದರೂ ಸಂಗತಿಯ ಕುರಿತು ಯೋಚಿಸುತ್ತಿರುವಾಗ, ಅವನು ತನ್ನ ಮನಸ್ಸಿನಲ್ಲಿ ಸೃಷ್ಟಿಸಿದ ಅದೇ ಚಿತ್ರಣವನ್ನು ನೋಡುತ್ತಾನೆ ಏನು ಹೇಳಿದ್ದಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ