Viral Video ಥೈಲ್ಯಾಂಡ್ ನ ರಸ್ತೆಯ ಮೇಲೆ ಎರಡು ವಾನರ ಸೆನೆಗಳ ನಡುವೆ ಭೀಕರ ಕಾಳಗ! Watch Video

Viral Monkey Fight Video: ಥೈಲ್ಯಾಂಡ್ ನ ಲೋಪ್‌ಬುರಿ ನಗರದಲ್ಲಿ ಎರಡು ಕೋತಿಗಳ ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆಯುತ್ತಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಅಧಿಕಾರಿಗಳು ಕೋತಿಗಳ ನಡುವಿನ ಈ ಅರಾಜಕತೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದಾರೆ. (Viral News In Kannada)  

Written by - Nitin Tabib | Last Updated : Mar 31, 2024, 06:49 PM IST
  • ಈ ಕೋತಿಗಳು ಜನರ ಆಹಾರವನ್ನು ಕದಿಯುತ್ತವೆ ಮತ್ತು ಜನರಿಗೆ ಕಿರುಕುಳ ನೀಡುತ್ತವೆ
  • ಎಂದು ವರದಿಗಳಲ್ಲಿ ಹೇಳಲಾಗಿದೆ. 2017 ರಲ್ಲಿ, ಕೋತಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿತ್ತು,
  • ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.
Viral Video ಥೈಲ್ಯಾಂಡ್ ನ ರಸ್ತೆಯ ಮೇಲೆ ಎರಡು ವಾನರ ಸೆನೆಗಳ ನಡುವೆ ಭೀಕರ ಕಾಳಗ! Watch Video title=

Viral Video: ಥೈಲ್ಯಾಂಡ್‌ನಲ್ಲಿ ಕೋತಿಗಳ ಸಂಖ್ಯೆ ವಿಪರೀತ ಬೆಳೆದು ಬಿಟ್ಟಿದೆ (monkey town thailand), ಇದರಿಂದ ಅಲ್ಲಿನ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಥಾಯ್ಲೆಂಡ್ ನ ಕರಾವಳಿ ಪ್ರದೇಶಗಳಲ್ಲಿ ಮಂಗಗಳ ಹಾವಳಿ ಹೆಚ್ಚಿರುವುದರಿಂದ ಪ್ರವಾಸಿಗರು ಕೂಡ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೆಲವೊಮ್ಮೆ ಮಂಗಗಳು ಎಷ್ಟು ಹಿಂಸಾತ್ಮಕವಾಗುತ್ತವೆ ಎಂದರೆ ಅವುಗಳನ್ನು ತಡೆಯುವುದು ತುಂಬಾ ಕಷ್ಟ. ಸದ್ಯ ಅಂತಹದ್ದೇ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ (Lopburi thailand monkeys attack) ನೂರಾರು ಕೋತಿಗಳ ಎರಡು ಗುಂಪುಗಳು ನಡುರಸ್ತೆಯಲ್ಲಿ ಜಗಳವಾಡುತ್ತಿರುವುದು ಕಂಡು ಬಂದಿದೆ. ಇದೇ ವೇಳೆ, ಸಾಮಾನ್ಯ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಅತ್ತಿಂದಿತ್ತ ಓಡಾಡುವುದನ್ನು ನೀವು ನೋಡಬಹುದು. (Viral News In Kannada)

ಲೋಪ್‌ಬುರಿ ನಗರದಲ್ಲಿ ಎರಡು ಕೋತಿಗಳ ಗುಂಪುಗಳ ನಡುವೆ ಭೀಕರ ಘರ್ಷಣೆ ನಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು (lopburi monkey temple). ಇನ್ನೊಂದೆಡೆ, ಅಧಿಕಾರಿಗಳು ಕೋತಿಗಳ ನಡುವಿನ  ಅವ್ಯವಸ್ಥೆಯನ್ನು ಕೊನೆಗೊಳಿಸಲು ಯತ್ನಿಸುತ್ತಿದ್ದಾರೆ ಮತ್ತು ಇದಕ್ಕಾಗಿ ಅವರು ಪ್ರೈಮೇಟ್‌ಗಳನ್ನು ಸ್ಥಳಾಂತರಿಸಲು ಆರಂಭಿಸಿದ್ದಾರೆ.

ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ (Social Media) ಪ್ಲಾಟ್‌ಫಾರ್ಮ್ X ನಲ್ಲಿ @sighyam ಎಂಬ ಬಳಕೆದಾರರಿಂದ ಹಂಚಿಕೊಳ್ಳಲಾಗಿದೆ, ಅದನ್ನು ಇದುವರೆಗೆ 1 ಮಿಲಿಯನ್‌ಗಿಂತಲೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ-Abby Hensel Marriage: ಒಂದೇ ಶರೀರ ಹೊಂದಿರುವ ಅವಳಿ Abby Hensel ವಿವಾಹ, ವಿಡಿಯೋ ನೋಡಿ

ಕೋತಿಗಳ ನಿಯಂತ್ರಣಕ್ಕೆ ಪ್ರಯತ್ನ ಮುಂದುವರಿದಿದೆ
ಡೈಲಿ ಸ್ಟಾರ್ ವರದಿಯ ಪ್ರಕಾರ, ಇತ್ತೀಚೆಗೆ ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ ಸಚಿವ ಪಟರಾವತ್ ವಾಂಗ್ಸುವಾನ್ ಅವರು ಉಪ ಸರ್ಕಾರದ ವಕ್ತಾರ ಕೆನಿಕರ್ ಒಂಜಿತ್ ಮೂಲಕ ಈ ಪ್ರದೇಶದಲ್ಲಿ ಕೋತಿಗಳ ಸಂಖ್ಯೆ ನಿಯಂತ್ರಣ ಮತ್ತು ಸ್ಥಳಾಂತರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ-Holi 2024 ಹೆಸರಿನಲ್ಲಿ ಸ್ಕೂಟಿ-ಬೈಕ್ ಮೇಲೆ ಯುವಕ ಯುವತಿಯರ ಅಶ್ಲೀಲ ಕೃತ್ಯ! Watch Video

ಈ ಕೋತಿಗಳು ಜನರ ಆಹಾರವನ್ನು ಕದಿಯುತ್ತವೆ ಮತ್ತು ಜನರಿಗೆ ಕಿರುಕುಳ ನೀಡುತ್ತವೆ ಎಂದು ವರದಿಗಳಲ್ಲಿ ಹೇಳಲಾಗಿದೆ. 2017 ರಲ್ಲಿ, ಕೋತಿಗಳ ಸಂಖ್ಯೆಯನ್ನು ನಿಯಂತ್ರಿಸಲು ಪ್ರಯತ್ನಿಸಲಾಗಿತ್ತು, ಆದರೆ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು.

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News