Abby Hensel Marriage: ಒಂದೇ ಶರೀರ ಹೊಂದಿರುವ ಅವಳಿ Abby Hensel ವಿವಾಹ, ವಿಡಿಯೋ ನೋಡಿ

Abby Hensel And Brittany Hensel Weddign Video: ಅಬ್ಬಿ ಮತ್ತು ಹೆನ್ಸೆಲ್ ಮೊತ್ತಮೊದಲಬಾರಿಗೆ 1996 ರಲ್ಲಿ ಕಿರುತೆರೆಯ ರಿಯಾಲಿಟಿ ಷೋವೊಂದರಲ್ಲಿ ಕಾಣಿಸಿಕೊಂಡಿದ್ದರು, ಒಂದೇ ಶರೀರವನ್ನು ಹೊಂದಿರುವ ಈ ಇಬ್ಬರು ಯುವತಿಯರನ್ನು ನೋಡಿ ಇಡೀ ವಿಶ್ವವೇ ನಿಬ್ಬೆರಗಾಗಿತ್ತು. ನಂತರ ಅವರು ಹೇಗೆ ಬದುಕುತ್ತಾರೆ ಎಂದು ನೋಡಿ ಜನ ಆಶ್ಚರ್ಯಪಡುತ್ತಿದ್ದರು.  (Viral News In Kannada)  

Written by - Nitin Tabib | Last Updated : Mar 30, 2024, 11:03 PM IST
  • ಅಬ್ಬಿ ಮತ್ತು ಬ್ರಿಟಾನಿ ಹೆನ್ಸೆಲ್ (Hensel Sisters) ಡಿಸ್ಸೆಫಾಲಸ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ.
  • ಅವರು 1990 ರಲ್ಲಿ ಜನಿಸಿದ್ದಾರೆ. ಜನನದ ಸಮಯದಲ್ಲಿ, ವೈದ್ಯರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು.
  • ಆದರೆ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಚೇತರಿಸಿಕೊಳ್ಳಲು ಆರಂಭಿಸಿದರು.
Abby Hensel Marriage: ಒಂದೇ ಶರೀರ ಹೊಂದಿರುವ ಅವಳಿ Abby Hensel ವಿವಾಹ, ವಿಡಿಯೋ ನೋಡಿ title=

Abby Hensel-Brittany Hensel Viral Dance Video: ಅಮೆರಿಕದ ಟಿವಿ ರಿಯಾಲಿಟಿ ಶೋ (American Reality Show) ಮೂಲಕ ವಿಶ್ವಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದ ಅಬ್ಬಿ-ಹೆನ್ಸೆಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದೇ ದೇಹಕ್ಕೆ ಎರಡು ಯುವತಿಯರ ತಲೆ ಇರುವ ಅಬ್ಬಿ ಹೆನ್ಸೆಲ್ (Abby Hensel) ಅವರ ಮದುವೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ. ಆದರೆ, ಮೂರು ವರ್ಷಗಳ ಹಿಂದೆ ಅಬ್ಬಿ ವಿವಾಹವಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ (abby hensel marriage video goes trending on social media). ಆದರೆ ಈ ಮದುವೆ ತೀರಾ ಖಾಸಗಿಯಾಗಿ ನಡೆದಿದೆ. ಅಬ್ಬಿ ಹೆನ್ಸೆಲ್ ಒಂದು ದೇಹ ಮತ್ತು ಎರಡು ತಲೆಗಳನ್ನು ಹೊಂದಿರುವ ಯುವತಿಯರು ಆಗಿದ್ದಾರೆ. ಒಬ್ಬರ ಹೆಸರು ಅಬ್ಬಿ ಹೆನ್ಸೆಲ್ ಮತ್ತು ಇನ್ನೊಬ್ಬರ ಹೆಸರು (Brittany Hensel) ಬ್ರಿಟನಿ ಹೆನ್ಸೆಲ್.(Viral News In Kannada)

ಇದನ್ನೂ ಓದಿ-Holi 2024 ಹೆಸರಿನಲ್ಲಿ ಸ್ಕೂಟಿ-ಬೈಕ್ ಮೇಲೆ ಯುವಕ ಯುವತಿಯರ ಅಶ್ಲೀಲ ಕೃತ್ಯ! Watch Video

1996 ರಲ್ಲಿ, ಅವರು ಮೊದಲ ಬಾರಿಗೆ ಅಮೇರಿಕನ್ ಟಿವಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದರು. ಆ ಅವಧಿಯಲ್ಲಿ, ಒಂದೇ ದೇಹದಲ್ಲಿ ಒಂದಾದ ಈ ಸಹೋದರಿಯರು ಹೇಗೆ ಬದುಕುತ್ತಾರೆ ಎಂಬುದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದರು.  ಆದರೆ ಈಗ ಅವರು ಬೆಳೆದು US ಸೇನಾ ಅನುಭವಿ ಜೋಶ್ ಬೌಲಿಂಗ್ ಅನ್ನು ತನ್ನ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗುತ್ತಿರುವ ವಿಡಿಯೋದಲ್ಲಿ ಅಬ್ಬಿ ತನ್ನ ಪತಿಯೊಂದಿಗೆ ಡ್ಯಾನ್ಸ್ ಮಾಡುತ್ತಿರುವುದು ಕೂಡ ಕಂಡು ಬಂದಿದೆ. ಮದುವೆಯ ಸಂದರ್ಭದಲ್ಲಿ ಅಬ್ಬಿ ಮದುವೆಯ ಡ್ರೆಸ್ ಧರಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮದುವೆಯ ನಂತರ ಮೂವರೂ ತುಂಬಾ ಖುಷಿಯಾಗಿ ಇರುವುದನ್ನು ನೀವು ನೋಡಬಹುದು.

ಇದನ್ನೂ ಓದಿ-Viral Video: ಚಲಿಸುತ್ತಿರುವ ಸ್ಕೂಟರ್ ಮೇಲೆ ನಿಂತು ಯುವಕನಿಗೆ ಬಣ್ಣ ಬಳಿದ ಯುವತಿ, ನಂತರ ನಡೆದಿದ್ದು ಆಕೆ ಲೈಫ್ ಲಾಂಗ್ ಮರೆಯಲ್ಲ!

ಇಲ್ಲಿದೆ ವಿವಾಹದ ಟ್ರೆಂಡಿಂಗ್ ವಿಡಿಯೋ

ಹೆನ್ಸೆಲ್ ಸಹೋದರಿಯರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ (abby and brittany hensel married )
ಅಬ್ಬಿ ಮತ್ತು ಬ್ರಿಟಾನಿ ಹೆನ್ಸೆಲ್ (Hensel Sisters) ಡಿಸ್ಸೆಫಾಲಸ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅವರು 1990 ರಲ್ಲಿ ಜನಿಸಿದ್ದಾರೆ. ಜನನದ ಸಮಯದಲ್ಲಿ, ವೈದ್ಯರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಿದ್ದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಸಾಮಾನ್ಯವಾಗಲು ಆರಂಭಿಸಿದರು. ಅಬ್ಬಿ ಹೆನ್ಸೆಲ್ ಈ ದೇಹದ ಬಲಗೈ ಮತ್ತು ಕಾಲನ್ನು ನಿಯಂತ್ರಿಸುತ್ತಾರೆ. ಇದೇ ವೇಳೆ, ಬ್ರಿಟನಿ ಹೆನ್ಸೆಲ್ ದೇಹದ ಎಡಭಾಗದಲ್ಲಿ ಸ್ಥಿರವಾಗಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News