lovers viral video : ಇತ್ತೀಚಿನ ಕೆಲವು ದಿನಗಳಲ್ಲಿ ಸುರಿದಭಾರೀ ಮಳೆಗೆ ದೇಶದ ಅನೇಕ ಕಡೆಗಲ್ಲಿ ಭಾರೀ ಅನಾಹುತ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವ ಹಾಗೆ ಆಗಿತ್ತು. ಈ ಮಳೆಯ ಮಧ್ಯೆ ನಡೆದ ಕಾಮಿಡಿ ದೃಶ್ಯವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವಿಡಿಯೋ ನೋಡಿದ ಲಕ್ಷಾಂತರ ಮಂದಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ ಎನ್ನಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹೌದು, ಮಳೆಯಿಂದಾಗಿ ರಸ್ತೆಯುದ್ದಕ್ಕೂ ನೀರು ನಿಂತ ಪರಿಣಾಮ ಯುವಕನೊಬ್ಬನ ಸ್ಕೂಟಿ ರಸ್ತೆ ಮಧ್ಯೆಯೇ ಬಂದ್ ಬಿದ್ದಿದೆ. ಆ ಯುವಕ ತನ್ನ ಸ್ಕೂಟಿಯ ಹಿಂಭಾಗ ತನ್ನ ಗೆಳತಿಯನ್ನು ಕೂರಿಸಿಕೊಂಡು ಬೇರೆ ಹೋಗುತ್ತಿದ್ದ. ಸ್ಕೂಟಿ ಬಂದ್ ಬಿದ್ದಿದ್ದೇ ತಡ ಯುವಕ ಕೆಳಗಿಳಿದು ಅದನ್ನು ತಳ್ಳಲು ಶುರು ಮಾಡಿದ್ದಾನೆ. ಆದರೆ ರಸ್ತೆಯುದ್ದಕ್ಕೂ ಕೊಳಚೆ ನೀರು ನಿಂತಿದೆ. ಹುಡುಗಿ ತಾನು ಕೊಳಚೆ ನೀರಿನಲ್ಲಿ ಕಾಲು ಇಡುವುದಿಲ್ಲ ಎಂದು ಕುಳಿತಲ್ಲಿಂದ ಅಲುಗಾಡುವುದಿಲ್ಲ. 


ಇದನ್ನೂ ಓದಿ : Viral Video : ಪ್ರೇಯಸಿ ಮದುವೆಗೆ ಬಂದ ಮಾಜಿ ಲವರ್‌ ಮಾಡಿದ್ದೇನು?


ಪಾಪ ಹುಡುಗ ಸ್ಕೂಟಿ ಅದರ ಜೊತೆ ತನ್ನ ಹುಡುಗಿ ಇಬ್ಬರನ್ನು ಹಿಡಿದುಕೊಂಡು ಸರ್ಕಸ್ ಮಾಡುತ್ತಿರುತ್ತಾನೆ. ಆದರೆ ನೀರಿನ ರಭಸಕ್ಕೋ, ಹುಡುಗಿಯ ಭಾರಕ್ಕೋ ಗೊತ್ತಿಲ್ಲ ಆ ಹುಡುಗನಿಗೆ ಸ್ಕೂಟಿಯನ್ನು ಸಂಭಾಳಿಸುವುದು ಸಾಧ್ಯವಾಗುವುದಿಲ್ಲ. ಸ್ಕೂಟಿ ನೀರಿನಲ್ಲಿ ಬಿದ್ದು ಬಿಡುತ್ತದೆ. ಸ್ಕೂಟಿ ಮಾತ್ರವಲ್ಲ, ಕೊಳಚೆ ನೀರು ಕಾಲಿಗೆ ತಾಗಬಾರದು ಎಂದು ಕುಳಿತಿದ್ದ ಹುಡುಗಿಯೂ ನೀರಿನಲ್ಲಿ ಬೀಳುತ್ತಾಳೆ. ಆ ನೀರಿನಲ್ಲಿ ಕಾಲಿಡುವುದಕ್ಕೂ ಅಸಹ್ಯ ಪಡುತ್ತಿದ್ದ ಹುಡುಗಿ ಪಾಪ ಕೊಳಚೆ ನೀರಿನಲ್ಲೇ ತೋಯ್ದುಹೋಗುತ್ತಾಳೆ.   
ಅಂದ ಹಾಗೆ ಈ ಘಟನೆಯ ನಂತರ ಆ ಪ್ರೇಮಿಗೂ ಕೂಡಾ ನಗು ತಡೆಯುವುದು ಸಾಧ್ಯವಾಗಲಿಲ್ಲವಂತೆ. 


 ಇಲ್ಲಿದೆ ವಿಡಿಯೋ : 


 

 

 

 



 

 

 

 

 

 

 

 

 

 

 

A post shared by Meemlogy (@meemlogy)


 


ಇದನ್ನೂ ಓದಿ : Viral Video : ಮದುಮಗನಾದ 102 ವರ್ಷದ ವೃದ್ಧ, ಬಾರಾತ್‌ನಲ್ಲಿ ಕಂಗೊಳಿಸಿದ್ದು ಹೀಗೆ


ಈ ವಿಡಿಯೋ ಎಲ್ಲಿಯದ್ದು ಎನ್ನುವುದು ತಿಳಿದು ಬಂದಿಲ್ಲ. Instagram ನಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡಿದೆ. ಮೀಮ್ಲೊಜಿ ಹೆಸರಿನ ಪುಟದಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಲಾಗಿದೆ. ಇಲ್ಲಿಯವರೆಗೆ ಲಕ್ಷಾಂತರ ಮಂದಿ ಈ ವಿಡಿಯೋ ವೀಕ್ಷಿಸಿದ್ದಾರೆ.  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.