Viral Video : ಮದುವೆ ಮಂಟಪದಲ್ಲಿ ವಧು ಮಾಡಿದ ಈ ತಪ್ಪಿಗೆ ವೇದಿಕೆ ಮೇಲೆಯೇ ಸೇಡು ತೀರಿಸಿಕೊಂಡ ವರ
Wedding Video: ವಧು-ವರರ ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಹಾರ ಬದಲಾವಣೆ ವೇಳೆ ವಧು ಮಾಡಿದ ತಪ್ಪಿನಿಂದ ಕೋಪಗೊಂಡ ವರ, ವೇದಿಕೆಯಲ್ಲಿಯೇ ಸೇಡು ತೀರಿಸಿಕೊಂಡಿದ್ದಾನೆ.
ನವದೆಹಲಿ : Wedding Video: ಈಗ ಮದುವೆಯ ಸೀಸನ್ ನಡೆಯುತ್ತಿದೆ. ಮದುವೆಗೆ ಸಂಬಂಧಿಸಿದ ನೂರಾರು ವೀಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮದುವೆ ಮನೆ ಎಂದರೆ ಅಲ್ಲಿನ ಸಂಭ್ರಮವೇ ಬೇರೆ. ಮದುವೆ ನಿಗದಿಯಾದ ದಿನದಿಂದಲೇ ವಧು ವರ ಅನೇಕ ಕನಸುಗಳನ್ನು ಕಾಣುತ್ತಾರೆ. ಮಾಡುವೆ ದಿನದ ಅಲಂಕಾರ, ಬಟ್ಟೆ ಓಡಾಟ ಹೀಗೆ ಮನೆ ಮನ ಪೂರ್ತಿ ಸಂಭ್ರಮ ಮನೆ ಮಾಡಿರುತ್ತದೆ. ವಧು ವರನ ಮನೆಯವರು ಮಾತ್ರವಲ್ಲ ಸಂಬಂಧಿಕರೂ ಕೂಡಾ ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ಕೈ ಜೋಡಿಸುತ್ತಾರೆ. ಆದರೆ, ಕೆಲವೊಮ್ಮೆ, ಮದುವೆ ಮನೆಯಲ್ಲಿ ಕೂಡಾ ಒಂದಿಷ್ಟು ವಿಚಿತ್ರ ಘಟನೆಗಳು ನಡೆದು ಬಿಡುತ್ತವೆ. ಕೆಲವ ಘಟನೆಗಳನ್ನು ನೋಡಿದಾಗ ನಗು ಬಂದರೆ, ಕೆಲ ಘಟನೆಗಳು ಬೆಚ್ಚಿ ಬೀಳಿಸುತ್ತವೆ.
ಹಾರ ಬದಲಾವಣೆ ವೇಳೆ ವಿಚಿತ್ರವಾಗಿತ್ತು ವಧುವಿನ ವರ್ತನೆ :
ಮದುವೆ ಅಂದರೆ ಅದು ಜನುಮ ಜನುಮದ ಅನುಬಂಧ ಎಂದು ಹೇಳಲಾಗುತ್ತದೆ. ಮದುವೆ ಮನೆಯಲ್ಲಿ ವಧು ವರರೇ ಆಕರ್ಷಣೆಯ ಕೇಂದ್ರ ಬಿಂದು. ಇಲ್ಲಿ ಅವರು ಮಾಡುವ ಸಣ್ಣ ಸಣ್ಣ ಸನ್ನೆಗಳನ್ನು ಕೂಡಾ ಜನ ಗುರುತಿಸಿಬಿಡುತ್ತಾರೆ. ಆ ಕಾರಣಕ್ಕಾಗಿಯೇ ಇರಬೇಕು ಮದುವೆ ದಿನ ವಧು ವರರಿಬ್ಬರು ಬಹಳ ನಯ ನಾಜೂಕಿನಿಂದ ಇರುತ್ತಾರೆ. ಆದರೆ, ಈ ಮದುವೆಯಲ್ಲಿ ನಡೆದದ್ದೇ ಬೇರೆ..
ವಿವಾಹದ ಬಹು ಮುಖ್ಯ ಶಾಸ್ತ್ರವಾದ ಹಾರ ಬದಲಾವಣೆಯ ವೇಳೆಯೇ ವಧುವಿಗೆ ಅದೇನಾಯಿತೋ ಗೊತ್ತಿಲ್ಲ. ಹಾರವನ್ನು ವರನ ಮೇಲೆ ಎಸೆದೆ ಬಿಟ್ಟಿದ್ದಾಳೆ.
ಇದನ್ನೂ ಓದಿ : Viral Video: ಇಲ್ನೋಡಿ ಅಜ್ಜಿಯ ಡ್ಯಾನ್ಸ್... `ಸಾಮಿ ಸಾಮಿ' ಹಾಡಿಗೆ ಭರ್ಜರಿ ಸ್ಟೆಪ್ಸ್
ವರ ಕೂಡಾ ತೀರಿಸಿಕೊಂಡ ಸೇಡು :
ಇಷ್ಟಾದ ಮೇಲೆ ವರ ಸುಮ್ಮನಿರಬೇಕಲ್ಲ. ಹಾರ ಬದಲಾವಣೆ ವೇಳೆ ವಧು ರೀತಿ ವರ್ತಿಸುವಾಗ ವರ ಹೇಗೆ ತಾನೇ ಸಹಿಸಿಕೊಂಡಾನು ? ನಾನೇನು ಕಮ್ಮಿ ಎನ್ನುವಂತೆ ತನ್ನ ಸರದಿ ಬಂದಾಗ ವರ ಕೂಡಾ ಬೇಕೋ ಬೇಡವೋ ಎಂಬಂತೆ ಹಾರವನನ್ನು ಎಸೆದು ಬಿಟ್ಟಿದ್ದಾನೆ. ಈ ಹೊತ್ತಿನಲ್ಲಿ ಹಾರ ವಧುವಿನ ತಲೆಯ ಮೇಲೆಯೇ ಸಿಲುಕಿಕೊಳ್ಳುತ್ತದೆ. ಆ ಸಂದರ್ಭದಲ್ಲಿ ಫೋಟೋಗ್ರಾಫರ್ ಮತ್ತೊಮ್ಮೆ ಸರಿಯಾಗಿ ಹಾರ ಹಾಕುವಂತೆ ಸೂಚಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಹೊತ್ತಿನಲ್ಲಿ ಮತ್ತೆ ವರ ಹಾರವನ್ನು ಎಸೆದುಬಿಡುತ್ತಾನೆ. ಆಗ ಹಾರ ಭುಜದ ಮೇಲೆ ಕೂರುವ ಬದಲು ಸೀದಾ ಕೆಳಗೆ ಬಿದ್ದಿದೆ.
ವೈರಲ್ ವಿಡಿಯೋ: ನಾರಿ ಜೊತೆ ಡ್ಯಾನ್ಸ್ ಮಾಡಲು ವೇದಿಕೆ ಬಳಿ ಬಂದ ವ್ಯಕ್ತಿ, ಬೆಚ್ಚಿಬಿದ್ದ...
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು ಈ ವಿಡಿಯೋ :
ಈ ವಿಡಿಯೋವನ್ನು DPA Tech Info ಹೆಸರಿನ YouTube ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಇದುವರೆಗೆ 67 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ವಿಡಿಯೋ ವೀಕ್ಷಿಸಿದ ಒಬ್ಬರು ಮೊದಲ ದಿನವೇ ಹೀಗಾದರೆ ಇಡೀ ಜೀವನ ಹೇಗಿರುತ್ತದೆಯೋ ಎಂದು ಪ್ರತಿಕ್ರಿಯಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.