Viral Video : ಮದುವೆ ಮನೆಯಲ್ಲಿ ಹೊಟ್ಟೆ ತುಂಬ ತಿಂದ ತಾತಪ್ಪ ನಂತರ ಮಾಡಿದ ಕೆಲಸ ನೋಡಿ ಎಲ್ಲರಿಗೂ ಶಾಕ್ ..!

Viral Video : ಬಹುತೇಕ ಹಳ್ಳಿಗಳಲ್ಲಿಯೂ ಈಗ  ಬಫೆ ಪದ್ಧತಿಯ ಟ್ರೆಂಡ್  ನಡೆಯುತ್ತಿದೆ. ಆದರೆ, ಹಳ್ಳಿಗಳಲ್ಲಿ ಹೀಗೆ ಬಫೆ ಪದ್ಧತಿ ನಡೆಯುತ್ತಿದ್ದರೆ ಕೆಲವೊಮ್ಮೆ ಘಟಿಸುವ ಘಟನೆಗಳು ನಗು ತರಿಸುತ್ತವೆ. ಈ ಸಮಯದಲ್ಲಿ ಅನೇಕ ತಮಾಷೆಯ ಘಟನೆಗಳು ಸಹ ಸಂಭವಿಸುತ್ತವೆ.

Written by - Ranjitha R K | Last Updated : May 4, 2022, 03:24 PM IST
  • ಬಹುತೇಕ ಹಳ್ಳಿಗಳಲ್ಲಿಯೂ ಈಗ ಬಫೆ ಪದ್ಧತಿಯ ಟ್ರೆಂಡ್ ನಡೆಯುತ್ತಿದೆ.
  • ತಾತ ಮಾಡಿರುವ ಕೆಲಸಕ್ಕೆ ಎಲ್ಲರೂ ಶಾಕ್
  • ನೆಟ್ಟಿಗರಿಗೂ ತಡೆಯಲಾಗಲಿಲ್ಲ ನಗು
Viral Video : ಮದುವೆ ಮನೆಯಲ್ಲಿ ಹೊಟ್ಟೆ ತುಂಬ ತಿಂದ ತಾತಪ್ಪ ನಂತರ ಮಾಡಿದ ಕೆಲಸ ನೋಡಿ ಎಲ್ಲರಿಗೂ ಶಾಕ್ ..!   title=
Viral video (Photo instagram)

ಬೆಂಗಳೂರು : ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ಪ್ರಕಾರದ  ವಿಡಿಯೋಗಳಿರುತ್ತವೆ. ಅದರಲ್ಲೂ ಜನರು ತಮಾಷೆಯ ವಿಡಿಯೋಗಳಿಗೆ ಮೊದಲ ಆದ್ಯತೆ ನೀಡುತ್ತಾರೆ.  ಹಾಗಾಗಿ ಹೆಚ್ಚಿನವರು ಕಾಮಿಡಿ ದೃಶ್ಯಗಳು ಕಣ್ಣಿಗೆ ಬೀಳುತ್ತಿದ್ದಂತೆಯೇ ಅದರ ವಿಡಿಯೋ ಮಾಡುತ್ತಾರೆ. ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹರಿ ಬಿಡುತ್ತಾರೆ. ಹೀಗೆ ಹಾಕಿದ ವಿಡಿಯೋ ಜನರಿಗೆ ಇಷ್ಟವಾದರೆ ವಿಡಿಯೋಗಳು ಹಾಗೆಯೇ ಮುಂದೆ ಶೇರ್ ಆಗುತ್ತಾ ಹೋಗುತ್ತವೆ. ಇಲ್ಲಿ ನಾವು ಹೇಳಲು ಹೊರಟಿರುವ ವಿಡಿಯೋ ಕೂಡಾ ಅಂಥದ್ದೇ ಆಗಿದೆ. 

ಬಹುತೇಕ ಹಳ್ಳಿಗಳಲ್ಲಿಯೂ ಈಗ  ಬಫೆ ಪದ್ಧತಿಯ ಟ್ರೆಂಡ್  ನಡೆಯುತ್ತಿದೆ. ಆದರೆ, ಹಳ್ಳಿಗಳಲ್ಲಿ ಹೀಗೆ ಬಫೆ ಪದ್ಧತಿ ನಡೆಯುತ್ತಿದ್ದರೆ ಕೆಲವೊಮ್ಮೆ ಘಟಿಸುವ ಘಟನೆಗಳು ನಗು ತರಿಸುತ್ತವೆ. ಈ ಸಮಯದಲ್ಲಿ ಅನೇಕ ತಮಾಷೆಯ ಘಟನೆಗಳು ಸಹ ಸಂಭವಿಸುತ್ತವೆ. ಇಲ್ಲಿ ಸಮಾರಂಭವೊಂದರಲ್ಲಿ ನಡೆದಿರುವ ಘಟನೆಯನ್ನು ನೋಡಿದರೆ ನಗು ತಡೆಯುವುದೇ ಇಲ್ಲ.  ಈ ವಿಡಿಯೋ ವಯಸ್ಕರೊಬ್ಬರಿಗೆ ಸಂಬಂಧಿಸಿದ್ದಾಗಿದೆ. 

ಇದನ್ನೂ ಓದಿ : Viral Video: ಮದುವೆ ಬಳಿಕ ಧೂಳನ್ನೂ ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ..!

ತಾತ ಮಾಡಿರುವ ಕೆಲಸಕ್ಕೆ ಎಲ್ಲರೂ ಶಾಕ್  :
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋ ಮದುವೆಯ ಸಮಾರಂಭದ್ದಾಗಿದೆ.  ಈ ಸಮಾರಂಭದಲ್ಲಿ ಬಫೆ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಎಲ್ಲರೂ ಮದುವೆಯ ಭೋಜನವನ್ನು ಆನಂದಿಸುವುದನ್ನು ಕಾಣಬಹುದು.  ಇಲ್ಲೊಬ್ಬ ತಾತಾ ಕೂಡಾ ಟೇಬಲ್ ನಲ್ಲಿ ಕುಳಿತು ಭೋಜನದ ಸವಿಯನ್ನು ಸವಿಯುತ್ತಿದ್ದಾರೆ. ಈ ತಾತ ಭರ್ಜರಿ ಭೋಜನವನ್ನು ಮಾಡಿ ಮುಗಿಸುತ್ತಾರೆ. ನಂತರ ಅಲ್ಲಿ ಅವರಿಗೆ ಮುಖ ಒರೆಸಿಕೊಳ್ಳಲು ಏನೂ ಸಿಗುವುದಿಲ್ಲ. ಇನ್ನೇನು ತಾತನ ಮುಂದೆ ರೋಟಿ ಕಾಣಿಸುತ್ತದ. ತಾತ ರೋಟಿಯನ್ನೇ ತೆಗೆದುಕೊಂಡು ಟಿಶ್ಯೂವಿನಂತೆ ಮುಖ ಒರೆಸಿಕೊಳ್ಳುತ್ತಾರೆ .  

 
 
 
 

 
 
 
 
 
 
 
 
 
 
 

A post shared by Sen Sen (@sensen4947)

ನೆಟ್ಟಿಗರಿಗೂ ನಗು ತಡೆಯಲಾಗಲಿಲ್ಲ :
ಸೋಶಿಯಲ್ ಮೀಡಿಯಾ ಬಳಕೆದಾರರೂ ತಾತನ ಈ ಕೃತ್ಯದಿಂದ ಅಚ್ಚರಿಗೊಂಡಿದ್ದಾರೆ. ಹೆಚ್ಚಿನ ಬಳಕೆದಾರರು ನಗುವ ಎಮೋಜಿಯನ್ನು ಪೋಸ್ಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ವೀಡಿಯೊವನ್ನು sensorn4947 ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಇದನ್ನೂ ಓದಿ :Viral Video: ಅಬ್ಬಾ... ವೃದ್ಧ ದಂಪತಿಯ ಈ ಡ್ಯಾನ್ಸ್‌ ನೋಡಿದ್ರೆ ಫಿದಾ ಆಗ್ತೀರಾ.. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News