Viral Video: ಇಲ್ನೋಡಿ ಅಜ್ಜಿಯ ಡ್ಯಾನ್ಸ್‌... `ಸಾಮಿ ಸಾಮಿ' ಹಾಡಿಗೆ ಭರ್ಜರಿ ಸ್ಟೆಪ್ಸ್‌

 ವಯಸ್ಸು ಎಂಬುದು ಬರಿಯ ಸಂಖ್ಯೆ ಅಂತ ಇಲ್ಲೊಬ್ಬರು ಅಜ್ಜಿ ಪ್ರೂವ್‌ ಮಾಡಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಸಾಮಿ, ಸಾಮಿ ಹಾಡಿಗೆ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. 

Written by - Bhavishya Shetty | Last Updated : May 4, 2022, 03:45 PM IST
  • ಸಾಮಿ ಸಾಮಿ' ಹಾಡಿಗೆ ಅಜ್ಜಿಯ ಭರ್ಜರಿ ಸ್ಟೆಪ್ಸ್‌
  • ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌
  • giedde ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ವಿಡಿಯೋ
Viral Video: ಇಲ್ನೋಡಿ ಅಜ್ಜಿಯ ಡ್ಯಾನ್ಸ್‌... `ಸಾಮಿ ಸಾಮಿ' ಹಾಡಿಗೆ ಭರ್ಜರಿ ಸ್ಟೆಪ್ಸ್‌ title=
Old Lady dance

ಇತ್ತೀಚಿನ ದಿನಗಳಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ವಿಡಿಯೋಗಳು ಎಲ್ಲರನ್ನು ಹುಬ್ಬೇರುವಂತೆ ಮಾಡುತ್ತದೆ. ಚಿತ್ರ ವಿಚಿತ್ರ ವಿಡಿಯೋಗಳ ಜೊತೆ ಮನಸ್ಸಿಗೆ ಮುದ ನೀಡುವ ದೃಶ್ಯಗಳು ಇರುತ್ತವೆ. ಅಂತಹದ್ದರಲ್ಲಿ ಈ ವಿಡಿಯೋ ಸಹ ಒಂದು. ಉಲ್ಲಾಸ ತುಂಬಿದಂತೆ ವೃದ್ಧರು ಡ್ಯಾನ್ಸ್‌ ಮಾಡೋದನ್ನು ನೋಡಿದರೆ "ಈ ವಯಸ್ಸಿನಲ್ಲಿಯೇ ಹೀಗೆ ಕುಣಿದಾಡುವ ಇವರು, ಯವ್ವನದಲ್ಲಿ ಇನ್ನೆಷ್ಟು ಹುಮ್ಮಸ್ಸಿನಿಂದ ಇರುತ್ತಿದ್ದರೋ!" ಎಂಬ ಪ್ರಶ್ನೆ ಮೂಡುತ್ತದೆ. 

ಇದನ್ನು ಓದಿ: Madhya Pradesh: ಏಕಕಾಲದಲ್ಲಿ ಮೂವರನ್ನು ವರಿಸಿದ 42ರ ಭೂಪತಿ ಗಂಡು

ವಯಸ್ಸು ಎಂಬುದು ಬರಿಯ ಸಂಖ್ಯೆ ಅಂತ ಇಲ್ಲೊಬ್ಬರು ಅಜ್ಜಿ ಪ್ರೂವ್‌ ಮಾಡಿದ್ದಾರೆ. ತೆಲುಗಿನ ಪುಷ್ಪ ಸಿನಿಮಾದ ಸಾಮಿ, ಸಾಮಿ ಹಾಡಿಗೆ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿರಿಯ ವಯಸ್ಸಿನಲ್ಲಿ ವೃದ್ಧೆಯ ಹುಮ್ಮಸ್ಸು ನೋಡಿ ಜನರು ಫಿದಾ ಆಗಿದ್ದಾರೆ. 

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ತೆಲುಗು ಸಿನಿಮಾ 'ಪುಷ್ಪ: ದಿ ರೈಸ್' ಸಿಕ್ಕಾಪಟ್ಟೆ ಕ್ರೇಜ್‌ ಸೃಷ್ಟಿಸಿತ್ತು. ಅದರಲ್ಲೂ ಆ ಸಿನಿಮಾದ ಹಾಡುಗಳು ಸೂಪರ್‌ ಹಿಟ್‌ ಕಂಡಿತ್ತು. ಒಂದಿಷ್ಟು ಮಂದಿಗೆ ಡೈಲಾಗ್‌ ಇಷ್ಟವಾದರೆ ಇನ್ನೊಂದಿಷ್ಟು ಮಂದಿಗೆ ಹಾಡಿನ ಕ್ರೇಜ್‌ ಹುಟ್ಟಿಕೊಂಡಿತ್ತು. ಇದೀಗ ಅಂತಹದ್ದೇ ಕ್ರೇಜ್‌ ಹೊಂದಿದ್ದ ವೃದ್ಧೆಯೊಬ್ಬರು ಪುಷ್ಪ ಸಿನಿಮಾದ ʼಸಾಮಿ ಸಾಮಿʼ ಹಾಡಿಗೆ ಸ್ಟೆಪ್‌ ಹಾಕಿದ್ದಾರೆ. ಈ ಕ್ಲಿಪ್‌ ಸಖತ್‌ ವೈರಲ್‌ ಆಗುತ್ತಿದೆ.

 
 
 
 

 
 
 
 
 
 
 
 
 
 
 

A post shared by GiDDa CoMpAnY (@giedde)

 

 

giedde ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋದ ಎಡಿಟೆಡ್‌ ವರ್ಷನ್‌ನ್ನು ಅಪ್ಲೋಡ್ ಮಾಡಲಾಗಿದೆ. `ಸಾಮಿ ಸಾಮಿ' ಹಾಡು ಕಿವಿಗೆ ಬೀಳುತ್ತಿದ್ದಂತೆಯೇ ವೃದ್ಧೆಯೊಬ್ಬರು ಕುಣಿದಾಡಿದ್ದಾರೆ. ಈ ಅಜ್ಜಿ ಕುಣಿಯುವ ಸ್ಟೈಲ್‌, ಉತ್ಸಾಹ ಮತ್ತು ಉಲ್ಲಾಸ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. 

ಇದನ್ನು ಓದಿ: Viral Video: ಮದುವೆ ಬಳಿಕ ಧೂಳನ್ನೂ ಲೆಕ್ಕಿಸದೆ ಕಾರಿನ ಹಿಂದೆ ಓಡಿದ ವಧು-ವರ..!

ಅಜ್ಜಿಯ ಉತ್ಸಾಹ ಎಲ್ಲರನ್ನೂ ಬಹುವಾಗಿ ಸೆಳೆದಿದೆ. ಹೀಗಾಗಿ, ಈ ಅಜ್ಜಿಯನ್ನು ಹೊಗಳದೇ ಇರಲು ನೆಟ್ಟಿಗರಿಗೆ ಸಾಧ್ಯವಾಗಿಲ್ಲ. ಸದ್ಯ ಈ ವಿಡಿಯೋ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ. ಎಲ್ಲರಲ್ಲೂ ಮಂದಹಾಸ ಮೂಡಿಸುವಲ್ಲಿ ಈ ಉತ್ಸಾಹಿ ಅಜ್ಜಿ ಯಶಸ್ವಿಯಾಗಿದ್ದಾರೆ. ನಿಮಗೆ ಕೂಡಾ ಈ ಉಲ್ಲಾಸದಾಯಕ ನೃತ್ಯ ಖುಷಿ ನೀಡಿರಬಹುದು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News