Holi 2024 Viral Video: ಪ್ರತಿ ಬಾರಿ ಹೋಳಿ ಹಬ್ಬದಂದು ಜನರು ಮಾಡುವ ಕೆಲ ಕೃತ್ಯಗಳು ಅವರಿಗೆ ಭಾರಿ ದುಬಾರಿಯಾಗಿ ಪರಿಣಮಿಸುತ್ತವೆ.  ಪ್ರಸ್ತುತ, ಸಾಮಾಜಿಕ ಮಾಧ್ಯಮದಲ್ಲಿ (Social Media) ಅಂತಹುದೇ  ಎರಡು ವೀಡಿಯೊಗಳು ವೈರಲ್ ಆಗುತ್ತಿದ್ದು, ಈ ವಿಡಿಯೋಗಳಲ್ಲಿ  ಅಶ್ಲೀಲತೆಯ (Vulgar Act) ಎಲ್ಲಾ ಎಲ್ಲೆಗಳನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ. ಆದರೆ, ಈ ವಿಡಿಯೊಗಳನ್ನು ವೀಕ್ಷಿಸಿದ ನೋಯ್ಡಾ ಪೊಲೀಸರು ರೀಲ್ ತಯಾರಿಸಿದ (Viral Video) ಓರ್ವಖಾತೆದಾರನಿಗೆ 33 ಸಾವಿರ ರೂಪಾಯಿ ಮತ್ತು ಇನ್ನೊಬ್ಬ ಖಾತೆದಾರನಿಗೆ 24500 ರೂಪಾಯಿ ಭಾರಿ ದಂಡ ವಿಧಿಸಿದ್ದಾರೆ. (Viral News In Kannada)


COMMERCIAL BREAK
SCROLL TO CONTINUE READING

ಇದನ್ನೂ ಓದಿ-Viral Video: ಚಲಿಸುತ್ತಿರುವ ಸ್ಕೂಟರ್ ಮೇಲೆ ನಿಂತು ಯುವಕನಿಗೆ ಬಣ್ಣ ಬಳಿದ ಯುವತಿ, ನಂತರ ನಡೆದಿದ್ದು ಆಕೆ ಲೈಫ್ ಲಾಂಗ್ ಮರೆಯಲ್ಲ!


ವಾಸ್ತವದಲಿ ಬಣ್ಣಗಳ ಹಬ್ಬ (Festival Of Colours) ಹೋಳಿ 25 ಮಾರ್ಚ್ 2024 ರಂದು ಆಚರಿಸಲಾಯಿತು. ಈ ದಿನ, ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ಮೋಜು ಮಸ್ತಿಯ ಪ್ರಪಂಚದಲ್ಲಿ ಮುಳುಗಿರುತ್ತಾನೆ, ಆದರೆ ಕೆಲವು ಯುವಕರು ತಮ್ಮ ಎಲ್ಲ ಮಿತಿಗಳನ್ನು ದಾಟಿ ಎಸಗುವ ಕೃತ್ಯಗಳಿಗೆ ಅವರು ದೊಡ್ಡ ಪರಿಣಾಮವನ್ನೇ ಎದುರಿಸಬೇಕಾಗುತ್ತದೆ. ಮೊದಲ ವೀಡಿಯೋದಲ್ಲಿ (Vulgarity In The Name Of Holi), ಯುವಕ ಯುವತಿಯ ರೀಲ್ ಮಾಡುವ ಗೀಳನ್ನು ನೀವು ನೋಡಬಹುದು, ಅವರಿಬ್ಬರೂ ಒಟ್ಟಿಗೆ ಸ್ಕೂಟಿ ಮೇಲೆ ಕುಳಿತು 'ರಂಗ್ ಲಗಾ ದೇ ರೇ ಮೋಹೆ ಅಂಗ್ ಲಗಾ ದೇ ರೇ' ಹಾಡಿನಲ್ಲಿ ರೀಲ್ ಮಾಡುವುದನ್ನು ನೀವು ನೋಡಬಹುದು. ಇಬ್ಬರ ಅಭಿವ್ಯಕ್ತಿಗಳು ತುಂಬಾ ಅಸಭ್ಯವಾಗಿದ್ದವು, ಈ ವೀಡಿಯೊವನ್ನು ನೋಡುವ ಯಾವುದೇ ವ್ಯಕ್ತಿ ಆಕ್ಷೇಪಣೆಯನ್ನು ವ್ಯಕ್ತಪಡಿಸಬಹುದು.


ಇದನ್ನೂ ಓದಿ-Shocking Video: ನಡುರಸ್ತೆಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆ, ಅಷ್ಟರಲ್ಲೇ ನಡೆದಿದ್ದೇನು ನೀವೇ ನೋಡಿ!


ವೈರಲ್ ಆಗುತ್ತಿರುವ ಎರಡನೇ ವೀಡಿಯೋದಲ್ಲಿ (Trennding Video) ಒಂದೇ ಬೈಕ್‌ನಲ್ಲಿ ನಾಲ್ವರು ಕುಳಿತಿರುವುದನ್ನು ನೀವು ನೋಡಬಹುದು, ಅದರಲ್ಲಿ ಹಿಂಬದಿಲ್ಲಿ  ಕುಳಿತ ಯುವಕ ಷರ್ಟ್ ಧರಿಸಿಲ್ಲ ಮತ್ತು ಮಧ್ಯದಲ್ಲಿ ಕುಳಿತಿರುವ ಇಬ್ಬರು ಹುಡುಗಿಯೊಂದಿಗೆ ಅಶ್ಲೀಲ ಕೃತ್ಯಗಳನ್ನು ನಡೆಸುತ್ತಿದ್ದಾನೆ. ಈ ವಿಡಿಯೋವನ್ನು ಕಾರಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಶೂಟ್ ಮಾಡಿ  ನೋಯ್ಡಾ ಪೊಲೀಸರಿಗೆ (Noida Police) ಟ್ಯಾಗ್ ಮಾಡಿದ್ದಾರೆ. ಇದಾದ ಬಳಿಕ ಕಾರ್ಯಪ್ರವೃತ್ತರಾದ ಪೊಲೀಸರು ಅಶ್ಲೀಲ ಕೃತ್ಯ ಎಸಗಿದ ಯುವಕ-ಯುವತಿಯರಿಗೆ 24500 ರೂ. ದಂಡ ವಿಧಿಸಿದ್ದಾರೆ. 


ವೈರಲ್ ವಿಡಿಯೋಗಳು ಇಲ್ಲಿವೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ