Shocking Video: ನಡುರಸ್ತೆಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆ, ಅಷ್ಟರಲ್ಲೇ ನಡೆದಿದ್ದೇನು ನೀವೇ ನೋಡಿ!

Shocking Chain Snatching Video: ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಸಕತ್ ವೈರಲ್ ಆಗುತ್ತಿದ್ದು, ನಡುಬೀದಿಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರ ಮತ್ತು ಮಂಗಳಸೂತ್ರವನ್ನು ಬೈಕ್‌ನಲ್ಲಿ ಓಡಿಸುತ್ತಿದ್ದ ಅನಾಮಧೇಯ ವ್ಯಕ್ತಿ ಕಿತ್ತುಕೊಂಡು ಪರಾರಿಯಾಗಿದ್ದಾನೆ, ಇದಾದ ಬಳಿಕ ಮಹಿಳೆ ತೀವ್ರ ಆಘಾತಕ್ಕೆ ಒಳಗಾಗಿರುವುದನ್ನು ನೀವು ನೋಡಬಹುದು (Viral News In Kannada)  

Written by - Nitin Tabib | Last Updated : Mar 25, 2024, 10:45 PM IST
  • ಮಹಿಳೆ ಎಷ್ಟೊಂದು ಶಾಕ್ ಗೆ ಒಳಗಾಗಿದ್ದಾಳೆ ಎಂದರೆ
  • ದೀರ್ಘ ಸಮಯದವರೆಗೆ ಏನು ನಡೆದು ಹೋಗಿದೆ ಎಂಬುದು ಅವಳಿಗೆ ಅರ್ಥವಾಗುವುದೇ ಇಲ್ಲ.
  • ಇದಾದ ಬಳಿಕ ಚೈನ್ ಮತ್ತು ಮಂಗಳಸೂತ್ರ ಎರಡೂ ಮಾಯವಾಗಿವೆ ಎಂಬ ಧ್ವನಿ ವಿಡಿಯೋದಲ್ಲಿ ಕೇಳಿ ಬರುತ್ತದೆ.
Shocking Video: ನಡುರಸ್ತೆಯಲ್ಲಿ ರೀಲ್ ತಯಾರಿಸುತ್ತಿದ್ದ ಮಹಿಳೆ, ಅಷ್ಟರಲ್ಲೇ ನಡೆದಿದ್ದೇನು ನೀವೇ ನೋಡಿ! title=

X Shocking Video: ಇದು ಸಾಮಾಜಿಕ ಮಾಧ್ಯಮಗಳ ಯುಗ. ಈ ವೇದಿಕೆಯಲ್ಲಿ ಜನ ಖ್ಯಾತಿ ಪಡೆಯಲು ಬಯಸುವವರು, ಯೂಟ್ಯೂಬರ್‌ಗಳು ಮತ್ತು ರೀಲ್ ತಯಾರಕರು ಎಲ್ಲಿಯಾದರೂ ರೀಲ್‌ಗಳು ಮತ್ತು ವೀಡಿಯೊಗಳನ್ನು ಮಾಡಲು ಆರಂಭಿಸುತ್ತಿದ್ದಾರೆ. ಅನೇಕ ಬಾರಿ ಜನರು ತೋರುವ ನಿರ್ಲಕ್ಷ ಧೋರಣೆಗೆ, ರೀಲ್ ತಯಾರಿಸುವುದು ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತದೆ (Gaziabad Chain Snatching Video Goes Viral On social media). ಸುರಕ್ಷತೆಯ ದೃಷ್ಟಿಯಿಂದ ಸೂಕ್ತವಲ್ಲದ ಅಂತಹ ಸ್ಥಳಗಳಲ್ಲಿ ಅನೇಕ ಜನರು ರೀಲ್ಗಳನ್ನು ತಯಾರಿಸಲು ಮುಂದಾಗುತ್ತಾರೆ. ಅಂತಹುದೇ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ, ಇದರಲ್ಲಿ ಮಹಿಳೆಯೊಬ್ಬರು ರಸ್ತೆಯಲ್ಲಿ ರೀಲ್ ತಯಾರಿಸುತ್ತಿರುವುದನ್ನು ನೋಡಬಹುದು; ರೀಲ್ ಮಾಡುವಾಗ, ಅವಳಿಗೆ ದೊಡ್ಡ ಆಘಾತ ಎದುರಾಗಿದೆ.

ಇದನ್ನೂ ಓದಿ-Viral Video: ಭೂಮಿಯಿಂದ ಸಾವಿರಾರು ಅಡಿ ಎತ್ತರದಲ್ಲಿ ಜೋಡಿಯ ರೊಮ್ಯಾಂಟಿಕ್ ಡಿನ್ನರ್ ಡೇಟ್! ಬೇಚ್ಚಿಬೀಳಿಸುವಂತಿದೆ

ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, (Viral Video) ರಸ್ತೆಯಲ್ಲಿ ರೀಲ್ ಮಾಡುವ ಮಹಿಳೆ ಸಂಪೂರ್ಣವಾಗಿ ರೀಲ್ ತಯಾರಿಸುವಲ್ಲಿ ಲೀನಳಾಗಿರುವುದನ್ನು ನೀವು ನೋಡಬಹುದು, ಏತನ್ಮಧ್ಯೆ ಬೈಕ್ ಓಡಿಸುತ್ತ ಬರುವ ಓರ್ವಹೆಲ್ಮೆಟ್ ಧರಿಸಿದ ಅನಾಮಧೇಯ ವ್ಯಕ್ತಿ,  ಮಹಿಳೆ ಬಳಿಗೆ ಬರುತ್ತಾನೆ ಮತ್ತು ಮಹಿಳೆಗೆ ಇದೇನಿದು ಎಂಬುದು ಅರ್ಧವಾಗುವುದರ ಒಳಗೆ ಆಕೆಯ ಕತ್ತಿನಿಂದ ಸಾರಾ ಮತ್ತು ಮಂಗಳಸೂತ್ರವನ್ನು ಕಿತ್ತುಕೊಂಡು ಅಲ್ಲಿಂದ ಪರಾರಿಯಾಗುತ್ತಾನೆ. 

ಇದನ್ನೂ ಓದಿ-Vulgar Dance Video: Delhi Metro ದಲ್ಲಿ ಹೋಳಿ ಹಬ್ಬದ ರೀಲ್ ತಯಾರಿಸುತ್ತ ಅಶ್ಲೀಲ ನೃತ್ಯ ಪ್ರದರ್ಶಿಸಿದ ಯುವತಿಯರು, ಮುಂದೇನಾಯ್ತು ಗೊತ್ತಾ!

ಮಹಿಳೆ ಎಷ್ಟೊಂದು ಶಾಕ್ ಗೆ ಒಳಗಾಗಿದ್ದಾಳೆ ಎಂದರೆ ದೀರ್ಘ ಸಮಯದವರೆಗೆ ಏನು ನಡೆದು ಹೋಗಿದೆ ಎಂಬುದು ಅವಳಿಗೆ ಅರ್ಥವಾಗುವುದೇ ಇಲ್ಲ. ಇದಾದ ಬಳಿಕ ಚೈನ್ ಮತ್ತು ಮಂಗಳಸೂತ್ರ ಎರಡೂ ಮಾಯವಾಗಿವೆ ಎಂಬ ಧ್ವನಿ ವಿಡಿಯೋದಲ್ಲಿ ಕೇಳಿ ಬರುತ್ತದೆ. ಗಾಜಿಯಾಬಾದ್‌ನ ಐಷಾರಾಮಿ ಪ್ರದೇಶವಾದ ಇಂದಿರಾಪುರಂನಿಂದ ಈ ಘಟನೆ ವರದಿಯಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News