ನವದೆಹಲಿ: ಇಸ್ರೇಲ್‌ನ ಸ್ಡೆರೋಟ್ ನಗರದಲ್ಲಿ ಹಮಾಸ್ ದಾಳಿಯ ಭಯಾನಕ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇಬ್ಬರು ಹೆಣ್ಣುಮಕ್ಕಳ ಎದುರೇ ಹಮಾಸ್ ಉಗ್ರರು ಇಸ್ರೇಲಿ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದಾರೆ.


COMMERCIAL BREAK
SCROLL TO CONTINUE READING

ಇಸ್ರೇಲಿ ಮಹಿಳೆ ಒಡೆಯಾ ಸ್ವಿಸ್ಸಾ ಚಲಾಯಿಸುತ್ತಿದ್ದ ಕಾರನ್ನು ತಡೆದ ಹಮಾಸ್ ಭಯೋತ್ಪಾದಕರು ಗುಂಡಿನ ದಾಳಿ  ನಡೆಸಿದ್ದಾರೆ. ಮೃತ ಸ್ವಿಸ್ಸಾ ನಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಭಯೋತ್ಪಾದಕರು ಕಾರಿನ ಹಿಂಬದಿಯ ಸೀಟಿನ ಕೆಳಗೆ ಅಡಗಿದ್ದ ಇಬ್ಬರು ಪುತ್ರಿಯರ ಎದುರೇ ಆಕೆಗೆ ಗುಂಡಿಕ್ಕಿದ್ದಾರೆ. ಮಕ್ಕಳು ಕಾರಿನಲ್ಲಿದ್ದಾರೆ ಅನ್ನೋದು ತಿಳಿಯದೆ ಭಯೋತ್ಪಾದಕರು ಸ್ಥಳದಿಂದ ಪರಾರಿಯಾಗಿದ್ದಾರೆ.


ಇದನ್ನೂ ಓದಿ: ಇಸ್ರೇಲ್‌ನ ದೊಡ್ಡ ರಹಸ್ಯ ಬಹಿರಂಗಪಡಿಸಿದ ಗೂಢಚಾರರಿಗೆ ಇದೆಂಥ ಶಿಕ್ಷೆ?


ಘಟನೆಯ ಸ್ವಲ್ಪ ಸಮಯದ ನಂತರ ಇಸ್ರೇಲಿ ಪೊಲೀಸರು ಸ್ಥಳಕ್ಕೆ ತಲುಪಿ ಇಬ್ಬರೂ ಮಕ್ಕಳನ್ನು ರಕ್ಷಿಸಿದ್ದಾರೆ. ಈ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ರಕ್ಷಿಸಲು ಬಂದ ಅಧಿಕಾರಿ ಇಸ್ರೇಲಿ ಎಂಬುದನ್ನು ತಿಳಿದಾಗ ಆ ಹೆಣ್ಣುಮಕ್ಕಳು ‘ನಮ್ಮನ್ನು ಕರೆದುಕೊಂಡು ಹೋಗಿ’ ಎಂದು ಮನವಿ ಮಾಡಿರುವುದು ಕೂಡ ಸೆರೆಯಾಗಿದೆ.


Nostradamus Predictions: 2024ರಲ್ಲಿ ಜಗತ್ತಿಗೆ ಕಾದಿದೆ ಗಂಡಾಂತರ! ನಾಸ್ಟ್ರಾಡಾಮಸ್ ಹೇಳಿದ್ದೇನು?


ಇಸ್ರೇಲ್ ಡಿಫೆನ್ಸ್ ಫೋರ್ಸಸ್ (IDF) ಕಳೆದ ತಿಂಗಳಲ್ಲಿ 14,000ಕ್ಕೂ ಹೆಚ್ಚು ಭಯೋತ್ಪಾದಕ ಗುರಿಗಳನ್ನು ಹೊಡೆದಿದೆ ಎಂದು ಹೇಳಿದೆ. ಹಲವಾರು ಹಮಾಸ್ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಿದ್ದು, ಪ್ರಮುಖ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರಗಳನ್ನು ನಾಶಪಡಿಸಿದೆ. ‘ಗಾಜಾ ನಗರವನ್ನು ನಮ್ಮ ಸೈನಿಕರು ಸುತ್ತುವರೆದಿದ್ದಾರೆ. IDF ಈ ನಿಟ್ಟಿನಲ್ಲಿ ಉತ್ತಮ ಕೆಲಸ ಮಾಡುತ್ತಿದೆ. ಪ್ರತಿದಿನವೂ ಹಮಾಸ್ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದೆ’ ಎಂದು ಇಸ್ರೇಲಿ ಪಿಎಂ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.