Nostradamus Predictions: 2024ರಲ್ಲಿ ಜಗತ್ತಿಗೆ ಕಾದಿದೆ ಗಂಡಾಂತರ! ನಾಸ್ಟ್ರಾಡಾಮಸ್ ಹೇಳಿದ್ದೇನು?

Nostradamus Predictions 2024: ನಾಸ್ಟ್ರಾಡಾಮಸ್ ನೂರಾರು ವರ್ಷಗಳ ಹಿಂದೆ 2024ರ ಭವಿಷ್ಯವನ್ನು ಹೇಳಿದ್ದರು. ಅವರ ಮಾತು ನಿಜವಾದರೆ ಇಡೀ ಜಗತ್ತಿಗೆ ದೊಡ್ಡ ಗಂಡಾಂತರ ಕಾದಿದೆ ಅಂತಾನೇ ಹೇಳಬಹುದು.

Nostradamus Predictions 2024: ಜಗತ್ತಿನಲ್ಲಿ ಅನೇಕ ಪ್ರವಾದಿಗಳು ಮತ್ತು ತತ್ವಜ್ಞಾನಿಗಳ ಭವಿಷ್ಯವಾಣಿಗಳು ನಿಜವಾಗಿವೆ. ಫ್ರೆಂಚ್ ತತ್ವಜ್ಞಾನಿ ನಾಸ್ಟ್ರಾಡಾಮಸ್ ಕೂಡ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. 2024ರ ಹೊಸ ವರ್ಷಕ್ಕೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಹೊಸ ವರ್ಷ ದೇಶ ಮತ್ತು ಜಗತ್ತಿಗೆ ಹೇಗಿರುತ್ತದೆ ಎಂಬ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ನಾಸ್ಟ್ರಾಡಾಮಸ್ ನೂರಾರು ವರ್ಷಗಳ ಹಿಂದೆ 2024ರ ಭವಿಷ್ಯವನ್ನು ಹೇಳಿದ್ದರು. ಅವರ ಮಾತು ನಿಜವಾದರೆ ಜಗತ್ತಿಗೆ ದೊಡ್ಡ ಗಂಡಾಂತರ ಕಾದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ನಾಸ್ಟ್ರಾಡಾಮಸ್ ತಮ್ಮ ಜೀವಿತಾವಧಿಯಲ್ಲಿ ಹಲವಾರು ಭವಿಷ್ಯಗಳನ್ನು ನುಡಿದಿದ್ದರು. ಜರ್ಮನಿಯಲ್ಲಿ ಹಿಟ್ಲರ್‌ನ ಉದಯ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಜಾನ್ ಎಫ್.ಕೆನಡಿ ಅವರ ಗುಂಡಿನ ದಾಳಿ ಸೇರಿದಂತೆ ನೂರಾರು ಭವಿಷ್ಯ ನುಡಿದಿದ್ದರು. ಅವರು ತಮ್ಮ ಕವಿತೆಗಳ ಮೂಲಕ ಭವಿಷ್ಯ ನುಡಿಯುತ್ತಿದ್ದರು. ಪ್ರಪಂಚದಾದ್ಯಂತ ಜನರು ಅವರ ಕವಿತೆಗಳನ್ನು ಡಿಕೋಡ್ ಮಾಡುತ್ತಿದ್ದಾರೆ. ಜೊತೆಗೆ ಅವರ ಭವಿಷ್ಯವಾಣಿಗಳನ್ನು ಜಗತ್ತಿನ ಮುಂದೆ ಇಡುತ್ತಿದ್ದಾರೆ.

2 /5

2024ಕ್ಕೆ ನಾಸ್ಟ್ರಾಡಾಮಸ್‌ನ ಭವಿಷ್ಯವಾಣಿಗಳು ಆತಂಕವನ್ನು ಉಂಟುಮಾಡುತ್ತಿವೆ. ಅವರ ಭವಿಷ್ಯವಾಣಿಯ ಪ್ರಕಾರ, 2024ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯಲ್ಲಿ ಅಸ್ಥಿರತೆ ಉಂಟಾಗಬಹುದು ಮತ್ತು ಇಲ್ಲಿ ಅಂತರ್ಯುದ್ಧದಂತಹ ಪರಿಸ್ಥಿತಿ ಉದ್ಭವಿಸಬಹುದು ಎಂದು ಹೇಳಲಾಗಿದೆ.

3 /5

ನಾಸ್ಟ್ರಾಡಾಮಸ್ ಪ್ರಕಾರ, ಹೊಸ ವರ್ಷದಲ್ಲಿ ಅಮೆರಿಕ ಮತ್ತು ಚೀನಾ ನಡುವೆ ಯುದ್ಧ ನಡೆಯಬಹುದು. ‘ಕೆಂಪು ಶತ್ರು ಭಯದಿಂದ ಹಳದಿಯಾಗುತ್ತಾನೆ, ಮಹಾಸಾಗರದಲ್ಲಿ ಭಯವಿದೆ’ ಎಂದು ಅವರು ತಮ್ಮ ಕವಿತೆಯಲ್ಲಿ ಹೇಳಿದ್ದಾರೆ. ಅನೇಕ ಜನರು ಕೆಂಪು ಶತ್ರುವನ್ನು ಕಮ್ಯುನಿಸ್ಟ್ ಚೀನಾ ಎಂದು ಪರಿಗಣಿಸಿದ್ದಾರೆ.

4 /5

ನಾಸ್ಟ್ರಾಡಾಮಸ್ ತನ್ನ ಕವಿತೆಯಲ್ಲಿ ಬರೆಯುತ್ತಾ, 2024ರಲ್ಲಿ ಪರಮಾಣು ಸ್ಫೋಟ ಸಂಭವಿಸಲಿದೆ ಎಂದು ಎಚ್ಚರಿಸಿದ್ದಾರೆ. ಇದು ಹವಾಮಾನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ ಅಂತಾ ಜಗತ್ತಿಗೆ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

5 /5

2024ರಲ್ಲಿ ಸಾಕಷ್ಟು ಹವಾಮಾನ ಬದಲಾವಣೆಯಾಗಲಿದೆ ಮತ್ತು ಭೂಮಿಯು ಮೊದಲಿಗಿಂತ ಹೆಚ್ಚು ಬಿಸಿಯಾಗಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿದ್ದಾರೆ. ಈ ವರ್ಷ ಶಾಖದ ಅಲೆಗಳು ಹೆಚ್ಚು ತೀವ್ರವಾಗಿರಬಹುದು ಅಂತಾ ಅವರು ಭವಿಷ್ಯದ ಮೂಲಕ ತಿಳಿಸಿದ್ದಾರೆ.