ನಾಗರಹಾವಿನೊಂದಿಗೆ ಮುಂಗುಸಿಗಳ ಕಾಳಗ- ವಾಚ್ ವಿಡಿಯೋ
ಈ ಟ್ರೆಂಡಿಂಗ್ ವಿಡಿಯೋದಲ್ಲಿ ಮರುಭೂಮಿಯಲ್ಲಿ ಮುಂಗುಸಿಗಳ ಸಮೂಹವು ನಾಗರಹಾವನ್ನು ಹೇಗೆ ಸುತ್ತುವರೆದಿರುವುದನ್ನು ಕಾಣಬಹುದು.
ಕಿಂಗ್ ಕೋಬ್ರಾ-ಮುಂಗುಸಿಗಳ ವಿಡಿಯೋ: ಪ್ರಪಂಚದಾದ್ಯಂತ ಹಲವು ಜಾತಿಯ ಹಾವುಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಹೆಚ್ಚು ಅಪಾಯಕಾರಿ. ಇವುಗಳಲ್ಲಿ ಕಿಂಗ್ ಕೋಬ್ರಾ ಅಂದರೆ ನಾಗರಹಾವನ್ನು ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗುತ್ತದೆ. ನಾಗರಹಾವು ಕಚ್ಚಿದರೆ ಸಾವು ನಿಶ್ಚಿತ ಎಂದು ಹೇಳಲಾಗುತ್ತದೆ. ಹಾಗಾಗಿಯೇ, ಜನರು ಹಾವುಗಳ ಬಗ್ಗೆ ತುಂಬಾ ಹೆದರುತ್ತಾರೆ ಮತ್ತು ಅವುಗಳಿಂದ ದೂರವಿರುವುದು ತಮ್ಮ ಒಳ್ಳೆಯದನ್ನು ಪರಿಗಣಿಸುತ್ತಾರೆ. ಹಾವು ಹಿಡಿಯುವವರೂ ಕೂಡ ನಾಗರಹಾವಿನ ವಿಷಯಕ್ಕೆ ಬಂದರೆ ಕೊಂಚ ಹಿಂದೆಯೇ ಸರಿಯುತ್ತಾರೆ. ಸಾಮಾನ್ಯವಾಗಿ ಹಾವಿನ ಜೊತೆ ಕಾಳಗ ಎಂದರೆ ನೆನಪಾಗುವುದೇ ಹಾವು-ಮುಂಗುಸಿ ಜಗಳ. ಇತ್ತೀಚಿಗೆ ಹಾವು-ಮುಂಗೂಸಿಗಳ ಒಂದು ರೋಚಕ ವಿಡಿಯೋ ಸಖತ್ ಸದ್ದು ಮಾಡುತ್ತಿದೆ. ಈ ಟ್ರೆಂಡಿಂಗ್ ವಿಡಿಯೋದಲ್ಲಿ ಮರುಭೂಮಿಯಲ್ಲಿ ಮುಂಗುಸಿಗಳ ಸಮೂಹವು ನಾಗರಹಾವನ್ನು ಹೇಗೆ ಸುತ್ತುವರೆದಿರುವುದನ್ನು ಕಾಣಬಹುದು.
ಕೆಲವು ಪ್ರಾಣಿಗಳು ಹಾವುಗಳನ್ನು ತಮ್ಮ ಬೇಟೆಯನ್ನಾಗಿ ಮಾಡಿಕೊಳ್ಳುತ್ತವೆ. ಅದರಲ್ಲಿ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಮುಂಗುಸಿಯದ್ದು ಎಂದರೂ ತಪ್ಪಾಗಲಾರದು. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಹೊರಬಿದ್ದಿದ್ದು, ಅದರಲ್ಲಿ ಮುಂಗುಸಿಯಂತೆ ಕಾಣುವ ಹಲವು ಪ್ರಾಣಿಗಳು ಹಾವುಗಳ ರಾಜ ನಾಗರಹಾವನ್ನು ಸುತ್ತುವರೆದಿರುವುದನ್ನು ಕಾಣಬಹುದು.
ಇದನ್ನೂ ಓದಿ - ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...
ಕಿಂಗ್ ಕೋಬ್ರಾವನ್ನು ಸುತ್ತುವರಿಯಲು ಯೋಜನೆ:
ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಮುಂಗುಸಿಯಂತೆ ಕಾಣುವ ಅನೇಕ ಪ್ರಾಣಿಗಳು ಮರುಭೂಮಿಯಲ್ಲಿ ತಿರುಗಾಡುತ್ತಿರುವುದನ್ನು ನೀವು ನೋಡಬಹುದು. ಅಲ್ಲಿ ಹಾಯಾಗಿ ಕುಳಿತಿರುವ ನಾಗರಹಾವು ಕೂಡ ಗೋಚರಿಸುತ್ತದೆ. ಮುಂಗುಸಿಯ ಒಂದು ಕಣ್ಣು ಅಪಾಯಕಾರಿಯಾಗಿ ಕಾಣುವ ನಾಗರಹಾವಿನ ಮೇಲೆ ಬೀಳುತ್ತದೆ. ಬಳಿಕ ಈ ಪ್ರಾಣಿ ಹೊಂಚು ಹಾಕಿ ನಾಗರಹಾವನ್ನು ಅಟ್ಯಾಕ್ ಮಾಡಲು ಅದನ್ನು ಸುತ್ತುವರೆಯುತ್ತವೆ. ಕಿಂಗ್ ಕೋಬ್ರಾ ಕೂಡ ಭಯಂಕರ ರೀತಿಯಲ್ಲಿ ಅದರ ಮೇಲೆ ಪ್ರತೀಕಾರಕ್ಕೆ ಮುಂದಾಗುತ್ತದೆ. ನೋಡು ನೋಡುತ್ತಿದ್ದಂತೆ ಮುಂಗುಸಿಗಳಂತೆ ಕಾಣುವ ಈ ಪ್ರಾಣಿಯ ಗುಂಪು ಎಲ್ಲಾ ಕಡೆಯಿಂದ ನಾಗರಹಾವನ್ನು ಸುತ್ತುವರೆಯುತ್ತವೆ.
ವೀಡಿಯೊವನ್ನು ಇಲ್ಲಿ ವೀಕ್ಷಿಸಿ: Snake Video: ಸ್ನಾನದ ಮನೆಯಲ್ಲಿ ಅಡಗಿ ಕೂತಿದ್ದ ಕಾಳಿಂಗ ಸರ್ಪ!
ನ್ಯಾಷನಲ್ ಜಿಯೋಗ್ರಾಫಿಕ್ ಯುಕೆ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ. ಇದುವರೆಗೆ 96 ಲಕ್ಷಕ್ಕೂ ಹೆಚ್ಚು ಬಾರಿ ಇದನ್ನು ವೀಕ್ಷಿಸಲಾಗಿದೆ. ವೀಡಿಯೊದಲ್ಲಿ ಮುಂಗುಸಿಯಂತೆ ಕಾಣುವ ಪ್ರಾಣಿಗಳನ್ನು ಮೀರ್ಕಟ್ ಎಂದು ಕರೆಯಲಾಗುತ್ತದೆ ಮತ್ತು ಅವು ಆಫ್ರಿಕಾದಲ್ಲಿ ಕಂಡುಬರುತ್ತವೆ. ಅವುಗಳನ್ನು ಸಣ್ಣ ಮುಂಗುಸಿ ಎಂದೂ ಕರೆಯುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.