ಕಾಡಿನಿಂದ ನಾಡಿಗೆ ಎಂಟ್ರಿ ಕೊಟ್ಟ ಚಿರತೆ.. ಸಿಸಿಟಿವಿಯಲ್ಲಿ ದೃಶ್ಯ ಕಂಡು ಬೆಚ್ಚಿಬಿದ್ದ ಜನರು: ವಾಚ್ ವಿಡಿಯೋ
Leopard Video: ಒಂದು ಕಡೆ ನಿರಂತರ ಬೊಗಳುತ್ತಿರುವ ನಾಯಿಗಳು.. ಇನ್ನೊಂದು ಕಡೆ ಮಂಗಗಳ ಕಿರುಚಾಟ ಅಬ್ಬಬ್ಬಾ ನಿನ್ನೆ ರಾತ್ರಿ ಕಳೆದದ್ದೆ ತುಂಬಾ ಕಷ್ಟದಲ್ಲಿ ಅಂತಾರೆ ಗ್ರಾಮದ ಜನರು. ರಾತ್ರಿ 7 ಗಂಟೆಯಿಂದ ತಡರಾತ್ರಿಯವರೆಗೂ ನಾಯಿಗಳ ಬೊಬ್ಬೆ ವಿಪರೀತವಾಗಿತ್ತು. ಏನಾಯ್ತು ಅಂತ ಹೊರಗೆ ಬಂದು ನೋಡುವ ಧೈರ್ಯ ಕೂಡ ಅಲ್ಲಿನ ಜನರಲ್ಲಿ ಇರಲಿಲ್ಲ. ಆಗ ಮನೆ ಮತ್ತು ಲೇಔಟ್ ನಲ್ಲಿನ ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಚಿರತೆ ಓಡಾಡಿರೋ ದೃಶ್ಯ ಕಂಡು ಶಾಕ್ ಆಗಿದ್ದಾರೆ.
Leopard CCTV Video: ಆ ಏರಿಯಾದ ಜನರೆಲ್ಲಾ ಗಾಢ ನಿದ್ದೆಯಲ್ಲಿದ್ರು. ನಸುಕಿನ ಜಾವ ಏಕಾಏಕಿ ನಾಯಿಗಳು ಬೊಗಳಲು ಶುರುಮಾಡಿವೆ. ಜನರು ಏನಾಯ್ತು ಎಂದು ಸಿಸಿಟಿವಿ ಕಡೆ ಕಣ್ಣಾಡಿಸಿದಾಗ ಶಾಕ್ ಆಗಿದ್ರು. ಜನರ ಎದೆಯ ಬಡಿತ ಹೆಚ್ಚಾಗಿ ಆತಂಕದಲ್ಲಿಯೇ ದಿನ ಕಳೆಯುವಂತಾಗಿದೆ. ಅಷ್ಟಕ್ಕೂ ಅಲ್ಲಿನ ಜನರ ಆತಂಕಕ್ಕೆ ಕಾರಣ ಏನು ಅಂತೀರಾ ಇದಕ್ಕೆ ಮುಖ್ಯ ಕಾರಣ ಕಾಡಿನಿಂದ ನಾಡಿಗೆ ದೌಡಾಯಿಸಿದ ಚಿರತೆ ವಿಡಿಯೋ (Leopard Video).
ಹೌದು, ಪ್ರಶಾಂತವಾದ ಕೆರೆ ವಿಶಾಲವಾದ ಲೇ ಔಟ್.. ಸುತ್ತಲೂ ಪ್ರಕೃತಿಯ ರಮಣೀಯ ಸೌಂದರ್ಯ.. ಈ ವನಸಿರಿಯಲ್ಲಿ ವನ್ಯಜೀವಿ ಚಿರತೆಯೊಂದು (Leopard) ಕಾಣಿಸಿ ಕೊಂಡಿದ್ದು ಜನರ ನಿದ್ದೆಗೆ ಕೊಳ್ಳಿ ಇಟ್ಟಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕ್ಯಾಲಸನಹಳ್ಳಿಯಲ್ಲಿ ಸದ್ಯ ಚುಕ್ಕಿ ಸುಂದರಿ ಅಂದ್ರೆ ಚಿರತೆ ಪ್ರತ್ಯಕ್ಷ ಆಗಿದ್ದು ಜನರಲ್ಲಿ ಆತಂಕ ಹೆಚ್ಚಾಗಿದೆ.
ಏರ್‌ಪೋರ್ಟ್ ರನ್‌ವೇಯಲ್ಲಿ ಹಾವನ್ನು ಅಟ್ಯಾಕ್ ಮಾಡಿದ 3 ಮುಂಗುಸಿಗಳು: ವಿಡಿಯೋ ವೈರಲ್
ಇನ್ನೂ ಖಾಸಗಿ ಲೇಔಟ್ ಅಲ್ಲಿ ಕಾಣಿಸಿಕೊಂಡ ಚಿರತೆಯ ರಾಜ ಗಾಂಭೀರ್ಯದ ಓಡಾಟ ಸಿಸಿಟಿವಿಯಲ್ಲಿ (CCTV) ಸೆರೆಯಾಗಿದೆ. ಚಿರತೆಯ ಹೆಜ್ಜೆ ಗುರುತು ಕೂಡ ಪತ್ತೆಯಾಗಿದ್ದು ಚಿರತೆಯ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯ ಮಾಡಿದ್ದಾರೆ. ಚಿರತೆ ಚಲನವಲನದ ಸಿಸಿಟಿವಿ ದೃಶ್ಯಾವಳಿ ಮಾದ್ಯಮಗಳು ವರದಿ ಮಾಡಿದ ಬೆನ್ನಲ್ಲೇ ಜಿಗಣಿ ಪೊಲೀಸರು, ಆನೇಕಲ್ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆ ಹೆಜ್ಜೆ ಗುರುತು, ಚಿರತೆ ಓಡಾಡಿರುವ ಜಾಗವನ್ನ ಪರಿಶೀಲನೆ ನಡೆಸಿದ್ದಾರೆ.. ಅಗತ್ಯವಿದ್ದಲ್ಲಿ ಬೋನಿಟ್ಟು ಚಿರತೆಯನ್ನ ಸೆರೆ ಹಿಡಿಯುವ ಪ್ಲಾನ್ ಮಾಡಿದ್ದಾರೆ.
ಇದನ್ನೂ ಓದಿ- Viral Video: ಸರ್ಕಾರಿ ಶಾಲೆಗೆ ಹಾರಿ ಬಂದ ರಾಷ್ಟ್ರಪಕ್ಷಿ, ಮಕ್ಕಳೊಂದಿಗೆ ಬಿಸಿ ಊಟ ಸವಿದ ನಾಟ್ಯ ಮಯೂರಿ...
ಒಟ್ಟಿನಲ್ಲಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ (Bannerghatta National Park) ಸಮೀಪದಲ್ಲಿನ ಗ್ರಾಮದಲ್ಲಿ ಚಿರತೆ ಕಾಣಿಸಿ ಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ಜನವಸತಿ ಪ್ರದೇಶ ಆಗಿರೋದ್ರಿಂದ ಚಿರತೆ ಪದೇ ಪದೇ ಕಾಣಿಸಿಕೊಂಡ್ರೆ ಬೋನ್ ಇಟ್ಟು ಅದನ್ನು ಹಿಡಿದು ಕಾಡಿಗೆ ಬಿಡುವಂತಹ ಕೆಲಸವನ್ನ ಅರಣ್ಯ ಇಲಾಖೆ ಮಾಡಬೇಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.