ಪಂಜರದೊಳಗಿನಿಂದಲೇ ಸೆಲ್ಫಿ ಹುಡುಗಿಗೆ ತನ್ನ ಕರಾಮತ್ತು ತೋರಿಸಿದ ಕರಡಿ : ಇಲ್ಲಿದೆ ವಿಡಿಯೋ
Animal Viral Video : ಈ ರೀತಿ ಹುಚ್ಚಿಗೆ ಬಿದ್ದು ಸೆಲ್ಫಿ ತೆಗೆದುಕೊಳ್ಳುವಾಗ ನಡೆಯುತ್ತಿರುವ ವಿಚಿತ್ರ ಘಟನೆಗಳು ಕ್ಯಾಮಾರಾದಲ್ಲಿ ಸೆರೆಯಾಗಿ ಬಿಡುತ್ತವೆ.
Animal Viral Video : ಇಂದಿನ ಜಗತ್ತಿನಲ್ಲಿ, ಸಾಮಾಜಿಕ ಮಾಧ್ಯಮವು ನಮ್ಮ ಜೀವನದೊಂದಿಗೆ ಹೆಣೆದುಕೊಂಡಿದೆ. ಇಂಟರ್ನೆಟ್ ಒಂದು ಪ್ರತ್ಯೇಕ ಪ್ರಪಂಚವಾಗಿ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಅನೇಕ ವಿಭಿನ್ನ ವಿಷಯಗಳ ಬಗ್ಗೆ ಕೆಲವು ಮಾಹಿತಿ ಸಿಗುತ್ತದೆ. ಇಲ್ಲಿ ಹಂಚಿಕೊಳ್ಳಲಾದ ಸಂದೇಶಗಳು, ಫೋಟೋಗಳು ಮತ್ತು ವೀಡಿಯೊಗಳು ಅನೇಕ ರೀತಿಯ ಸಂದೇಶಗಳನ್ನು ಕೂಡಾ ರವಾನಿಸುತ್ತವೆ. ಇದು ಉಪಯುಕ್ತ ಮಾಹಿತಿಯೊಂದಿಗೆ ಮನರಂಜನೆ ನೀಡುವ ಮಾರ್ಗವಾಗಿದೆ. ಪ್ರಾಣಿಗಳ ವೀಡಿಯೊಗಳು ತಮ್ಮದೇ ಆದ ಅಭಿಮಾನಿಗಳನ್ನು ಹೊಂದಿವೆ. ಪ್ರಾಣಿಗಳ ಜಗತ್ತಿನಲ್ಲಿ, ನಾವು ನಂಬಲಾಗದ ಅನೇಕ ಘಟನೆಗಳು ನಡೆಯುತ್ತಿದ್ದು, ಆ ಘಟನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಕಾಣಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿದೆ. ಸೆಲೆಬ್ರಿಟಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಲ್ಲದೆ, ಅಪಾಯಕಾರಿ ಸ್ಥಳಗಳಲ್ಲಿಯೂ ಸೆಲ್ಫಿ ತೆಗೆದುಕೊಳ್ಳುವುದನ್ನು ಕಾಣಬಹುದು. ಈ ರೀತಿ ಹುಚ್ಚಿಗೆ ಬಿದ್ದು ಸೆಲ್ಫಿ ತೆಗೆದುಕೊಳ್ಳುವಾಗ ನಡೆಯುತ್ತಿರುವ ವಿಚಿತ್ರ ಘಟನೆಗಳು ಕ್ಯಾಮಾರಾದಲ್ಲಿ ಸೆರೆಯಾಗಿ ಬಿಡುತ್ತವೆ.
ಇದನ್ನೂ ಓದಿ : Viral Video: ಚಲಿಸುತ್ತಿದ್ದ ಆಟೋದಲ್ಲಿ ನಿಮಿಷದಲ್ಲೇ ಟೈರ್ ಬದಲಿಸಿದ ಚಾಲಕ
ಇತ್ತೀಚೆಗಷ್ಟೇ ಮಹಿಳೆಯೊಬ್ಬರು ಸೆಲ್ಫಿ ತೆಗೆದುಕೊಳ್ಳುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹೊರಬಿದ್ದಿದೆ. ಇಲ್ಲಿ ಆ ಹುಡುಗಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಯಾರೊಂದಿಗೆ ಎನ್ನುವುದೇ ಕುತೂಹಲಕಾರಿ ಸಂಗತಿ. ಅಪಾಯಕಾರಿ ಪ್ರಾಣಿಗಳ ನಡುವೆ ಯುವತಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಸೆಲ್ಫಿ ತೆಗೆಯಲು ಮುಂದಾದ ಯುವತಿಯ ಜೀವಕ್ಕೆ ಸಂಚಾಕಾರ ತರುವ ಘಟನೆ ಇಲ್ಲಿ ನಡೆದಿದೆ. ಸಿಂಹ ಮತ್ತು ಕರಡಿಯ ಪಂಜರಗಳ ಮುಂದೆ ಹುಡುಗಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಪ್ರತಿಯೊಬ್ಬರೂ ವನ್ಯಜೀವಿಗಳೊಂದಿಗೆ ಫೋಟೋ ತೆಗೆದುಕೊಳ್ಳಲು ಇಷ್ಟಪಡುತ್ತಾರೆ. ಇಲ್ಲಿ ಪ್ರಾಣಿಗಳು ಪಂಜರದೊಳಗೆ ಇದ್ದ ಕಾರಣ ಯುವತಿ ನಿರಾತಂಕವಾಗಿ ಫೋಟೋ ತೆಗೆಯಲು ಮುಂದಾಗಿದ್ದಾರೆ. ಆದರೆ ಪಂಜರದೊಳಗಿನಿಂದಲೇ
ಆ ಪ್ರಾಣಿಗಳು ತಮ್ಮ ಕರಾಮತ್ತು ತೋರಿಸಿವೆ.
ಇದನ್ನೂ ಓದಿ : ನುಂಗಿದ ಬೆಕ್ಕನ್ನು ಅರಗಿಸಿಕೊಳ್ಳಲಾಗದೆ ಹೆಬ್ಬಾವಿನ ನರಳಾಟ ! ಇಲ್ಲಿದೆ ವಿಡಿಯೋ
ಈ ವೀಡಿಯೊದಲ್ಲಿ, ಹುಡುಗಿ ಸೆಲ್ಫಿ ತೆಗೆದುಕೊಳ್ಳುವಾಗ ಕರಡಿ ಬೋನಿಗೆ ತುಂಬಾ ಹತ್ತಿರ ಹೋಗಿರುವುದನ್ನು ಗಮನಿಸಬಹುದು. ಪಂಜರದೊಳಗಿರುವ ಕರಡಿ ಸರಳುಗಳ ಎಡೆಯಿಂದ ತನ್ನ ಕೈಯನ್ನು ಹೊರಹಾಕಿ ಹುಡುಗಿಯ ಟೀ ಶರ್ಟ್ ಹಿಡಿದು ಎಳೆದಿದೆ. ಆದರೆ ಆ ಕರಡಿ ಪಂಜರದ ಒಳಗೆ ಇದ್ದ ಕಾರಣ ಹೆಚ್ಚು ಅನಾಹುತ ಆಗಲಿಲ್ಲ. ಹುಡುಗಿ ಪಾರಾಗಿದ್ದಾಳೆ.
Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ :
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಹಲವರು ತಮ್ಮ ಪೇಜ್ ಗಳಲ್ಲಿ ಶೇರ್ ಮಾಡಿದ್ದು, ಈ ರೀತಿ ನಿರ್ಲಕ್ಷ್ಯ ಮಾಡಬೇಡಿ ಎಂದು ಎಲ್ಲರಿಗೂ ಸಲಹೆ ನೀಡುತ್ತಿದ್ದಾರೆ. ಈ ವೀಡಿಯೊವನ್ನು Instagram ನಲ್ಲಿ _hasret_kokulum_ ಖಾತೆಯಿಂದ ಹಂಚಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿರುವ ಈ ವಿಡಿಯೋ ಬಹುತೇಕ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಈ ವೀಡಿಯೊದ ಮೂಲಕ ಒಂದು ಸಣ್ಣ ತಪ್ಪು ಹೇಗೆ ಮತ್ತು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದು. ಈ ವೀಡಿಯೊವನ್ನು ಈ ಸುದ್ದಿ ಬರೆಯುವ ಸಮಯದವರೆಗೆ ಸಾಮಾಜಿಕ ಮಾಧ್ಯಮದಲ್ಲಿ 4.7 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ.
( ಸೂಚನೆ : ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. Zee ಕನ್ನಡ ನ್ಯೂಸ್ ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.