ನುಂಗಿದ ಬೆಕ್ಕನ್ನು ಅರಗಿಸಿಕೊಳ್ಳಲಾಗದೆ ಹೆಬ್ಬಾವಿನ ನರಳಾಟ ! ಇಲ್ಲಿದೆ ವಿಡಿಯೋ

Python Viral Video : ಹೆಬ್ಬಾವು ಮನೆಯೊಂದಕ್ಕೆ ನುಗ್ಗಿ ಸಾಕು ಬೆಕ್ಕಿನ ಮೇಲೆ ದಾಳಿ ಮಾಡಿ ನುಂಗಿ ಹಾಕಿದೆ. ಇದಾದ ನಂತರ ಆ ಬೆಕ್ಕನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ದೈತ್ಯ ಹೆಬ್ಬಾವಿನ ಪಡುವ ನರಳಾಟ ಬೆಚ್ಚಿ ಬೀಳಿಸುವಂತಿದೆ.   

Written by - Ranjitha R K | Last Updated : Apr 26, 2023, 10:25 AM IST
  • ಬೆಕ್ಕನ್ನು ನುಂಗಿ ಹಾಕಿದ ಹೆಬ್ಬಾವು
  • ಅರಗಿಸಿಕೊಳ್ಳಲು ಕಷ್ಟ ಪಡುತ್ತಿರುವ ದೈತ್ಯ ಹಾವು
  • ವೈರಲ್ ಆಯಿತು ಈ ವಿಡಿಯೋ
ನುಂಗಿದ ಬೆಕ್ಕನ್ನು ಅರಗಿಸಿಕೊಳ್ಳಲಾಗದೆ ಹೆಬ್ಬಾವಿನ ನರಳಾಟ ! ಇಲ್ಲಿದೆ ವಿಡಿಯೋ  title=

Python Viral Video : ಹೆಬ್ಬಾವುಗಳು ವಿಷಕಾರಿಯಲ್ಲದ ಹಾವುಗಳ ವರ್ಗದಲ್ಲಿ ಬರುತ್ತದೆ. ಹೆಬ್ಬಾವು ಹೆಚ್ಚಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತವೆ.  ಈ ಹಾವಿನ ಬಣ್ಣ ಹಳದಿ ಅಥವಾ ಗಾಢ ಕಂದು. ಅದರ ಬಣ್ಣವು ವಾಸಿಸುವ ಭೂಪ್ರದೇಶ ಮತ್ತು ಆವಾಸಸ್ಥಾನವನ್ನು ಅವಲಂಬಿಸಿ ಬದಲಾಗುತ್ತದೆ. ಪಶ್ಚಿಮ ಘಟ್ಟಗಳು, ಅಸ್ಸಾಂನಂತಹ ಪರ್ವತ ಪ್ರದೆಶಗಳಲ್ಲಿ ಕಂಡು ಬರುವ ಹೆಬ್ಬಾವು ಗಾಢ ಬಣ್ಣದ್ದಾಗಿರುತ್ತದೆ. ಆದರೆ ಡೆಕ್ಕನ್ ಪ್ರಸ್ಥಭೂಮಿ ಮತ್ತು ಪೂರ್ವ ಕರಾವಳಿಯಲ್ಲಿ  ಕಂಡು ಬರುವ ಹೆಬ್ಬಾವು ತಿಳಿ ಬಣ್ಣದ್ದಾಗಿರುತ್ತದೆ. ಈ ಹಾವುಗಳು ತಮ್ಮ ಬೇಟೆಯನ್ನು ಮೊದಲು ಕತ್ತು ಹಿಸುಕಿ ಉಸಿರುಗಟ್ಟಿಸುತ್ತದೆ. ನಂತರ ಆ ಪ್ರಾಣಿಯನ್ನು ಹಾಗೆಯೇ ನುಂಗಿ ಬಿಡುತ್ತದೆ. ಹೀಗೆ ನುಂಗಿದ ಪ್ರಾಣಿಯನ್ನು ಕೆಲ ಹೊತ್ತಿನಲ್ಲಿ ಕರಗಿಸಿಕೊಳ್ಳುತ್ತದೆ.  ಆದರೆ ಕೆಲವೊಮ್ಮೆ ನುಂಗಿದ ಪ್ರಾಣಿಯನ್ನು ಅರಗಿಸಿಕೊಳ್ಳುವುದು ಸಾಧ್ಯವಾಗದೇ ಒದ್ದಾಡುತ್ತದೆ. ನುಂಗಿದ ಹಾವನು ಹಾಗೆಯೇ ಕಕ್ಕಿ ಬಿಡುತ್ತದೆ. 

ಇದೀಗ ಈ ಹಾವಿಗೆ ಸಂಬಂಧಿಸಿದ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ಹೆಬ್ಬಾವು ಜನವಸತಿ ಪ್ರದೇಶದಲ್ಲಿ ಸಾಕು ಬೆಕ್ಕನ್ನು ಬೇಟೆಯಾಡಿ ತಿಂದು ಹಾಕಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಆದರೆ ಬೆಕ್ಕನ್ನು ನುಂಗಿದ ನಂತರ ಹಾವಿನ ತೊಳಲಾಟವನ್ನು ಇಲ್ಲಿ ಕಾಣಬಹುದು.  

ಇದನ್ನೂ ಓದಿ : Viral Video: ಡಿಸ್ಕೌಂಟ್‌ ಸೀರೆಗಾಗಿ ನಾರಿಯರ ಜಡೆಜಗಳ.. WWF ಗಿಂತ ಬಲು ಜೋರಾಗಿತ್ತು ಫೈಟ್‌!

ಪ್ರಸ್ತುತ ವೈರಲ್ ಆಗುತ್ತಿರುವ ಭಯಾನಕ ವೈರಲ್ ವೀಡಿಯೊದಲ್ಲಿ, ಹೆಬ್ಬಾವು  ಮನೆಯೊಂದಕ್ಕೆ ನುಗ್ಗಿದ್ದು, ಆ ಮನೆಯ ಬೆಕ್ಕನ್ನು ಹಿಡಿದು ನುಂಗಿ ಬಿಟ್ಟಿದೆ. ಆದರೆ ನಂತರ ಆ ಹಾವಿಗೆ ಅಲ್ಲಿಂದ ಕದಲುವುದು ಕೂಡಾ ಸಾಧ್ಯವಾಗುವುದಿಲ್ಲ.  ಅಷ್ಟರಲ್ಲಿ ಅಲ್ಲಿಗೆ ಬಂದ ಉರಗ ತಜ್ಞರು ಹೆಬಾವನ್ನು ಮನೆಯಿಂದ ಹೊರಕ್ಕೆ ತರುತ್ತಾರೆ. ವಿಶಾಲ ಪ್ರದೇಶದಲ್ಲಿ ಹೆಬ್ಬಾವನ್ನು ಬಿಟ್ಟ ತಕ್ಷಣ ಅದು ಅರಸಿಸಲು ಸಾಧ್ಯವಾಗದೆ ಬೆಕ್ಕನ್ನು ಕಕ್ಕಿ ಬಿಡುತ್ತದೆ. 

ಹೆಬ್ಬಾವು ಬೆಕ್ಕಿನ್ನು ನುಂಗಿ ಮತ್ತೆ ಹೊರಹಾಕುವ ವಿಡಿಯೋ ಇಲ್ಲಿದೆ : 

 

ಇದನ್ನೂ ಓದಿ : ತಿಂಡಿಗೆಂದು ಬಂದ ಕೋತಿಯ ಕಿತಾಪತಿ ! ಕೊಬ್ಬಿದ ಮಂಗನ ವಿಡಿಯೋ

ಈ ವೀಡಿಯೊವನ್ನು   Khaosod English ಎಂಬ YouTube ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಸಾವಿರಾರು  ವ್ಯುವ್ಸ್ ಮತ್ತು ಲೈಕ್‌ಗಳು ಸಿಕ್ಕಿವೆ.  

(ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೊ ಮತ್ತು ನೀಡಿರುವ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಿಂದ ತೆಗೆದುಕೊಳ್ಳಲಾಗಿದೆ. ಜೀ  ಕನ್ನಡ  ನ್ಯೂಸ್  ಇವುಗಳನ್ನು ಯಾವುದೇ ರೀತಿಯಲ್ಲಿ ಅನುಮೋದಿಸುವುದಿಲ್ಲ.)
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News