Viral Video : ಬರೋಬ್ಬರಿ 200 ಕೆಜಿ ತೂಕದ ಕರಿ ಮತ್ತು ಬಿಳಿ ಹೆಬ್ಬಾವಿನ ಜೋಡಿ ! ಈ ಜೋಡಿ ಮಧ್ಯೆ ವ್ಯಕ್ತಿ
Python Viral Video : ಹಾವಿನ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಂತೆಯೇ ಆ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇದೀಗ ಜೋಡಿ ಹೆಬ್ಬಾವಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
Python Viral Video : ಸಾಮಾಜಿಕ ಜಾಲ ತಾಣಗಳಲ್ಲಿ ಮನುಷ್ಯರ ವಿಡಿಯೋಗಳು ಸುದ್ದಿಗಳು ಎಷ್ಟು ವೈರಲ್ ಆಗುತ್ತವೆಯೋ ಪ್ರಾಣಿಗಳ ವಿಡಿಯೋಗಳು ಕೂಡಾ ಅಷ್ಟೇ ಸದ್ದು ಮಾಡುತ್ತವೆ. ಪ್ರಾಣಿ ಪ್ರಿಯರು ತಮ್ಮ ನೆಚ್ಚಿನ ಪ್ರಾಣಿಗಳ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅದರಲ್ಲೂ ಹಾವಿನ ವಿಡಿಯೋಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಹೆಚ್ಚು. ಹಾವಿನ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದಂತೆಯೇ ಆ ವಿಡಿಯೋಗಳು ಕ್ಷಣ ಮಾತ್ರದಲ್ಲಿ ವೈರಲ್ ಆಗಿ ಬಿಡುತ್ತವೆ. ಇದೀಗ ಜೋಡಿ ಹೆಬ್ಬಾವಿಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಇಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ಎರಡು ಹೆಬ್ಬಾವುಗಳನ್ನು ಕಾಣಬಹುದು. ಒಂದು ಕರಿ ಹೆಬ್ಬಾವು ಆಗಿದ್ದರೆ, ಇನ್ನೊಂದು ಬಿಳಿ ಬಣ್ಣದ್ದಾಗಿದೆ. ಈ ಹೆಬ್ಬಾವುಗಳನ್ನು ವ್ಯಕ್ತಿಯೊಬ್ಬರು ಮನೆಯಲ್ಲಿಯೇ ಸಾಕಿದ್ದಾರೆ. ಸಣ್ಣ ಮರಿಗಳನ್ನು ತಂದು ಸಾಕಿರುವುದಾದರೂ ಇದೀಗ ಈ ಜೋಡಿ ದೈತ್ಯ ರೂಪ ಪಡೆದುಕೊಂಡಿವೆ. ಈ ದೈತ್ಯ ಜೋಡಿಗಳು ಹರಿದಾಡುತ್ತಿದ್ದರೆ ಅವುಗಳನ್ನು ಹಿಡಿದು ನಿಲ್ಲಿಸಲು ವ್ಯಕ್ತಿ ಹರ ಸಾಹಸ ಪಡುವುದನ್ನು ಇಲ್ಲಿ ಗಮನಿಸಬಹುದು.
ಇದನ್ನೂ ಓದಿ : Watch: ಫೋನ್‌ಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ ಹಿಂದಿನಿಂದ ಬಂದು ಲಿಪ್‌ಲಾಕ್ ಮಾಡಿದ ಯುವಕ!
ಈ ಎರಡೂ ಹೆಬ್ಬಾವುಗಳ ಬಾಲ ಹಿಡಿದು ವ್ಯಕ್ತಿ ಅವುಗಳನ್ನು ಹಿಡಿದಿಡಲು ಪ್ರಯತ್ನ ಪಡುತ್ತಿದ್ದಾರೆ. ಆದರೆ ವ್ಯಕ್ತಿಗೆ ಅದು ಸಾಧ್ಯವಾಗುತ್ತಿಲ್ಲ. ಆದರೂ ವ್ಯಕ್ತಿಗೆ ಬೇಸರವಾಗುತ್ತಿಲ್ಲ. ಏಕೆಂದರೆ ಆ ಹೆಬ್ಬಾವುಗಳನ್ನೂ ಆತ ಪ್ರೀತಿಯಿಂದ ಸಾಕಿರುವಂಥದ್ದು. ಇದನ್ನೂ ಆ ವ್ಯಕ್ತಿಯೇ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ತಮ್ಮ ಮನಸ್ಸಿಗೆ ಇಷ್ಟವಾಗುವ ಕೆಲಸವನ್ನು ಜೀವನದಲ್ಲಿ ಮಾಡಬೇಕು, ಕೆಲವೊಂದು ಬಾರಿ ಯಾರೂ ನಿಮ್ಮ ಜೊತೆ ನಿಲ್ಲದಿದ್ದರೂ ನಿಮ್ಮ ಆಯ್ಕೆಯ ಬಗ್ಗೆ ನೀವು ತೃಪ್ತಿ ಪಡುವಂತಿರಬೇಕು ಎಂದು ಬರೆದಿದ್ದಾರೆ.
ಇಲ್ಲಿದೆ ಜೋಡಿ ಹೆಬ್ಬಾವುಗಳ ವಿಡಿಯೋ :
ಇದನ್ನೂ ಓದಿ : Viral Video: ಅಪರೂಪದ ಶ್ವೇತ ನಾಗರ ನೋಡಿದ್ದೀರಾ? ಮಿಲಿಯನ್ ಡಾಲರ್ ಬೆಲೆ ಬಾಳುವ ಹಾವಿನ ವಿಡಿಯೋ ವೈರಲ್
ಅಂದ ಹಾಗೆ ಈ ವಿಡಿಯೋವನ್ನು jayprehistoricpets ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಲೈಕ್ ಕೂಡಾ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.