Watch: ಫೋನ್‌ಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ ಹಿಂದಿನಿಂದ ಬಂದು ಲಿಪ್‌ಲಾಕ್‌ ಮಾಡಿದ ಯುವಕ!

Viral Video: ಬಿಹಾರದ ಜಮುಯಿಯಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಜಮುಯಿ ಸದರ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಮಹಿಳಾ ಆರೋಗ್ಯ ಕಾರ್ಯಕರ್ತೆ ಕ್ಯಾಂಪಸ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಅಶ್ಲೀಲ ಕೃತ್ಯ ಎಸಗಿದ್ದಾನೆ.

Written by - Chetana Devarmani | Last Updated : Mar 15, 2023, 04:28 PM IST
  • ಫೋನ್‌ಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆ
  • ಹಿಂದಿನಿಂದ ಬಂದು ಲಿಪ್‌ಲಾಕ್‌ ಮಾಡಿದ ಯುವಕ
  • ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌
Watch: ಫೋನ್‌ಲ್ಲಿ ಮಾತನಾಡುತ್ತ ನಿಂತಿದ್ದ ಮಹಿಳೆಗೆ ಹಿಂದಿನಿಂದ ಬಂದು ಲಿಪ್‌ಲಾಕ್‌ ಮಾಡಿದ ಯುವಕ!  title=
Bihar

Viral Video: ಇಂತಹ ವಿಡಿಯೋಗಳನ್ನು ನಾವು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ನೋಡುತ್ತಿರುತ್ತೇವೆ. ಇತ್ತೀಚಿನ ದಿನಗಳಲ್ಲಿ, ಕೆಲವು ಹುಚ್ಚರಂತೆ ವಿಚಿತ್ರವಾದ ಕೆಲಸಗಳನ್ನು ಮಾಡುತ್ತಿರುವುದು ಕಂಡುಬರುತ್ತದೆ. ಯಾವುದೇ ಸಾಮಾನ್ಯ ಮನುಷ್ಯನು ಮಾಡಲು ಯೋಚಿಸುವುದಿಲ್ಲ, ಅಂತಹ ಕೆಲವು ಘಟನೆಗಳನ್ನು ಇಲ್ಲಿನೋಡಬಹುದು. ಈ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತವೆ.

ಬಿಹಾರದ ಜಮುಯಿಯಲ್ಲಿ ಮಹಿಳಾ ಆರೋಗ್ಯ ಕಾರ್ಯಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಜಮುಯಿ ಸದರ್ ಆಸ್ಪತ್ರೆ ಆವರಣದಲ್ಲಿ ನಡೆದಿದೆ. ಮಹಿಳಾ ಆರೋಗ್ಯ ಕಾರ್ಯಕರ್ತೆ ಕ್ಯಾಂಪಸ್‌ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಕ್ತಿ ಅಶ್ಲೀಲ ಕೃತ್ಯ ಎಸಗಿದ್ದಾನೆ. ಇದಾದ ಬಳಿಕ ಆತ ಪರಾರಿಯಾಗಿದ್ದ. ಮಾರ್ಚ್ 10ರ ಶುಕ್ರವಾರದಂದು ಘಟನೆ ನಡೆದಿದೆ ಎನ್ನಲಾಗಿದೆ. ಅದರ ಸಿಸಿಟಿವಿ ದೃಶ್ಯಾವಳಿಗಳು ಬಯಲಿಗೆ ಬಂದಿವೆ.

ಇದನ್ನೂ ಓದಿ : Viral Video: ಅಪರೂಪದ ಶ್ವೇತ ನಾಗರ ನೋಡಿದ್ದೀರಾ? ಮಿಲಿಯನ್ ಡಾಲರ್ ಬೆಲೆ ಬಾಳುವ ಹಾವಿನ ವಿಡಿಯೋ

ಮಹಿಳಾ ಆರೋಗ್ಯ ಕಾರ್ಯಕರ್ತೆ 2015 ರಿಂದ ಸದರ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಘಟನೆ ನನಗೆ ಹಿಂದೆಂದೂ ಸಂಭವಿಸಿರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ. ಮಾರ್ಚ್ 10ರ ಶುಕ್ರವಾರದಂದು ಅವರು ಮೊಬೈಲ್‌ನಲ್ಲಿ ಯಾರೊಂದಿಗಾದರೂ ಮಾತನಾಡುತ್ತಿದ್ದಾಗ ಯುವಕನೊಬ್ಬ ಆಸ್ಪತ್ರೆಯ ಗೋಡೆ ಹಾರಿ ಆಕೆಯ ಬಳಿಗೆ ಓಡಿ ಬಂದಿದ್ದಾನೆ. ಬಾಯಿ ಒತ್ತಿ ಅಶ್ಲೀಲ ಕೃತ್ಯ ಎಸಗಿ ಓಡಿ ಹೋಗಿದ್ದಾನೆ. ಆಕೆಗೆ ಅರ್ಥವಾಗುವ ಮೊದಲೇ ಯುವಕ ಓಡಿಹೋಗಿದ್ದ. ಈ ದೃಶ್ಯ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

 

 

ಈ ಇಡೀ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆ ಜಮುಯಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಅರ್ಜಿ ಸಲ್ಲಿಸಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆ ನ್ಯಾಯಕ್ಕಾಗಿ ಮನವಿ ಮಾಡಿದ್ದಾಳೆ. ಇತ್ತ ಪೊಲೀಸರು ಆರೋಪಿ ಯುವಕನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಆರೋಪಿ ಯುವಕರನ್ನು ಶೀಘ್ರ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ರಾಜೀವ್ ಕುಮಾರ್ ತಿವಾರಿ ತಿಳಿಸಿದ್ದಾರೆ.

ಇದನ್ನೂ ಓದಿ : Trending Video : ಕಂಠಪೂರ್ತಿ ಕುಡಿದು ತೂರಾಡುತ್ತ ಬಂದ ಮದುಮಗ.. ತಾಳಿ ಕಟ್ಟುವ ವೇಳೆ ಮಲಗಿದ, ಮುಂದೇ!? 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News