Spider Crawling Out Of Mans Ear: ನಮ್ಮಲ್ಲಿ ಹೆಚ್ಚಿನವರು ಜೇಡಗಳಿಗೆ ಹೆದರುತ್ತಾರೆ. ಮುಖ್ಯವಾಗಿ ಮಕ್ಕಳನ್ನು ಅಂತಹ ಕೀಟಗಳಿಂದ ದೂರವಿರುವಂತೆ ಸೂಚಿಸಲಾಗುತ್ತದೆ. ಏಕೆಂದರೆ ಅವು ನಮ್ಮನ್ನು ಕಚ್ಚಬಹುದು, ಇಲ್ಲವೇ ತೀವ್ರವಾದ ನೋವನ್ನು ನೀಡುತ್ತದೆ. ಕೀಟವನ್ನೆಲ್ಲಾ ಕಂಡಾಗ ಅದನ್ನು ಓಡಿಸಲು ಪ್ರಯತ್ನಿಸುತ್ತೇವೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಭಯಾನಕ ಹಳೆಯ ದೃಶ್ಯವೊಂದು ನಿಮ್ಮ ಮೈ ಜುಂ ಎನ್ನುವಂತೆ ಮಾಡದಿರದು. ಹೌದು ಮನುಷ್ಯನ ಕಿವಿಯಿಂದ ಜೇಡ ತೆವಳಿಕೊಂಡು ಹೊರಬರುವುದನ್ನು ಕಾಣಬಹುದು.
ಇದನ್ನೂ ಓದಿ: ಮಕ್ಕಳಾದ ಮೇಲೆ ಸಂಗಾತಿಗೆ ವಿಚ್ಛೇದನ ನೀಡಿ ಮತ್ತೊಬ್ಬರ ಜೊತೆ ಸಂಬಂಧ ಬೆಳಸಿಕೊಂಡ ಬಾಲಿವುಡ್ ಸೆಲೆಬ್ರಿಟಿಗಳು
ವೀಡಿಯೊವನ್ನು ಟ್ವಿಟ್ಟರ್ ಪೇಜ್ ‘ಆಡ್ಲಿ ಟೆರಿಫೈಯಿಂಗ್’ ಹಂಚಿಕೊಂಡಿದೆ. ಒಬ್ಬ ವ್ಯಕ್ತಿ ಮಲಗಿರುವಾಗ ಆತನ ಕಿವಿಗೆ ಲವಣಯುಕ್ತವಾಗಿ ಕಂಡುಬರುವ ಕೆಲವು ದ್ರವವನ್ನು ಹಾಕುತ್ತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದು. ಹೀಗೆ ಮಾಡಿದ ಕೆಲವೇ ಸೆಕೆಂಡುಗಳಲ್ಲಿ, ಜೇಡವು ಕಿವಿಯಿಂದ ಹೊರಬರುತ್ತದೆ. ಅವನ ಟಿ-ಶರ್ಟ್ ಮೇಲೆ ತೆವಳಿಕೊಂಡು ಬಂದು ಬಿದ್ದಿದೆ. ಆದರೆ ಈ ವೀಡಿಯೊದ ಸತ್ಯಾಸತ್ಯತೆ ಏನೆಂದು ಇಂದಿಗೂ ತಿಳಿದಿಲ್ಲ.
Look at what comes out of this guys ear 😳 pic.twitter.com/PKtRv5Fxyx
— OddIy Terrifying (@OTerrifying) March 2, 2023
ಈ ಶಾರ್ಟ್ ಕ್ಲಿಪ್ ನ್ನು ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾಗಿದೆ. ಇದಕ್ಕೆ ಆರು ಮಿಲಿಯನ್ ವೀಕ್ಷಣೆಗಳು ಮತ್ತು 44,000 ಲೈಕ್ ಗಳು ಬಂದಿವೆ.
ಈ ವಿಡಿಯೋ ನೋಡಿದ ಅನೇಕರು ಕಾಮೆಂಟ್ ಗಳ ಮೂಲಕ ತಮ್ಮ ಮಾತುಗಳನ್ನು ವ್ಯಕ್ತಪಡಿಸಿದ್ದಾರೆ, ಓರ್ವ ಬರೆದುಕೊಂಡಿದ್ದ, "ಅವರು ಕಿವಿಯ ಮೇಣವನ್ನು ಹೊರಹಾಕುತ್ತಿದ್ದಾ ಎಂದು ನಾನು ಭಾವಿಸಿದೆ. ಆದರೆ ಅದು ನನ್ನ ತಪ್ಪು ಗ್ರಹಿಕೆ” ಎಂದು ಹೇಳಿದ್ದಾರೆ. ಮತ್ತೊಬ್ಬರು ಪ್ರತಿಕ್ರಿಯೆ ನೀಡಿ, "ರಾತ್ರಿಯಲ್ಲಿ ನನ್ನ ಕಿವಿಯಲ್ಲಿ ತುರಿಕೆ ಕಾಣಿಸಿಕೊಳ್ಳುತ್ತದೆ. ಬಹುಶಃ ಇದೇ ಕಾರಣಕ್ಕಾಗಿರಬಹುದು” ಎಂದು ಎರಡನೇ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬರು ಪ್ರತಿಕ್ರಿಯಿಸಿ “ಇಡೀ ಕಿವಿಯನ್ನು ಕತ್ತರಿಸಿ ಎಸೆಯಿರಿ!" ಎಂದು ಹೇಳಿದ್ದಾರೆ. "ನಾನು ಈ ಘಟನೆಯನ್ನು ಮೊದಲ ಬಾರಿಗೆ ನೋಡಿದಾಗ ಕಿರುಚಿಕೊಂಡು ಫೋನ್ ಎಸೆದಿದ್ದೇನೆ" ಎಂದು ಒಬ್ಬ ವ್ಯಕ್ತಿ ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: 1 ಐಪಿಎಲ್, 16 ಪಂದ್ಯ, 973 ರನ್: ಯಾರಿಂದಲೂ ಟಚ್ ಮಾಡೋಕಾಗ್ತಿಲ್ಲ ವಿರಾಟ್ ಸೃಷ್ಟಿಸಿದ ಈ ದಾಖಲೆಗಳನ್ನು!
ಇದೇ ರೀತಿಯ ಘಟನೆ 2019 ರಲ್ಲಿ ಚೀನಾದಲ್ಲಿ ನಡೆದಿತ್ತು. ಒಬ್ಬ ವ್ಯಕ್ತಿ ತನ್ನ ಕಿವಿಯೊಳಗೆ ತುರಿಕೆ, ತೆವಳುವ ಅನುಭವ ಆಗುತ್ತಿದೆ ಎಂದು ಹೇಳಿ ವೈದ್ಯರ ಬಳಿ ಬಂದಿದ್ದ. ಆಗ ರೋಗಿಯ ಕಿವಿಯನ್ನು ಪರೀಕ್ಷಿಸಿದ ವೈದ್ಯರಿಗೆ ಮೊದಲಿಗೆ ಏನೂ ಕಾಣಿಸಿಕೊಳ್ಳಲಿಲ್ಲ. ಬಳಿಕ ಸೂಕ್ಷ್ಮವಾಗಿ ಗಮನಿಸಿದಾಗ, ಸಣ್ಣ ಜೇಡ ಇರುವುದು ಕಂಡುಬಂತು. ಜೊತೆಗೆ ಕಿವಿಯಲ್ಲಿಯೇ ಬಲೆ ನೇಯುವುದು ಕಂಡುಬಂದಿತ್ತು. ಅಂತಿಮವಾಗಿ, ಜೇಡವನ್ನು ಹೊರಹಾಕಲು ವೈದ್ಯರು ಲವಣಯುಕ್ತ ದ್ರಾವಣವನ್ನು ಬಳಸಿ, ಆ ಜೇಡವನ್ನು ಹೊರತೆಗೆದಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.