Monkey Video : ಹಜಾರಿಬಾಗ್ ಜಿಲ್ಲೆಯ ಚೌಪರಾನ್ ಬ್ಲಾಕ್ ಮತ್ತೊಮ್ಮೆ ಚರ್ಚೆಯಲ್ಲಿದೆ, ಅಲ್ಲಿ ಮಂಗವೊಂದು ಶಾಲೆಯೊಂದರಲ್ಲಿ ಮಕ್ಕಳ ಜೊತೆ ಪಾಠ ಕೇಳುವ ದೃಶ್ಯ ವೈರಲ್‌ ಆಗಿದೆ. ಪ್ರಸ್ಥಭೂಮಿ ಮತ್ತು ಪರ್ವತಗಳ ನಡುವಿನ ಹೈಸ್ಕೂಲ್ ದನುವಾ ಜಾರ್ಖಂಡ್-ಬಿಹಾರ ಗಡಿಯಲ್ಲಿರುವ ಪ್ರಧಾನ ಕಚೇರಿಯಿಂದ 13 ಕಿ.ಮೀ. ದೂರದಲ್ಲಿದೆ. ಕಳೆದ ಹಲವು ದಿನಗಳಿಂದ ಮಂಗವೊಂದು ತರಗತಿಗೆ ಬರುತ್ತದೆ ಮತ್ತು ಮಕ್ಕಳೊಂದಿಗೆ ಕುಳಿತು ಅಧ್ಯಯನ ಮಾಡುತ್ತದೆ. ಈ ಕುರಿತ ವಿಡಿಯೋವೊಂದು ಸಾಕಷ್ಟು ವೈರಲ್ ಆಗುತ್ತಿದೆ. ಈ ವಿಚಿತ್ರ ಘಟನೆಯಿಂದ ಸ್ಥಳೀಯರು ಕೂಡ ಅಚ್ಚರಿಗೊಂಡಿದ್ದಾರೆ. ಈ ಬಗ್ಗೆ ಶಾಲೆಯ ಪ್ರಾಂಶುಪಾಲ ರತನ್ ಕುಮಾರ್ ವರ್ಮಾ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Funny Video: ಮಂಗಗಳ ಕೈಗೆ ಸ್ಮಾರ್ಟ್‌ಫೋನ್‌ ಸಿಕ್ರೆ ಹೇಗಿರುತ್ತೆ? ಈ ವಿಡಿಯೋ ನೋಡಿ


ತರಗತಿ ಬಂದು ಕೂರುವ ಮಂಗ : 


ಒಂದು ಮಂಗ ಪ್ರತಿದಿನ ಶಾಲೆಗೆ ಬಂದು ಮಕ್ಕಳೊಂದಿಗೆ ಹೇಗೆ ಕೂರುತ್ತದೆ ಎಂಬುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಶಿಕ್ಷಕರು  ಮಕ್ಕಳಿಗೆ ಪುಸ್ತಕದಲ್ಲಿ ಬರೆಯುವಾಗ, ಅದು ನೋಡುತ್ತಲೇ ಇರುತ್ತದೆ. ಅಲ್ಲದೇ, ಶಿಕ್ಷಕರು ಅಲ್ಲಿಂದ ಹೊರ ಹೋಗುವಂತೆ ಕೇಳಿದಾಗ  ನಿರಾಕರಿಸುತ್ತಂತೆ. ಮಕ್ಕಳು ಗಾರ್ಡನ್‌ ಏರಿಯಾದಲ್ಲಿದ್ದರೆ ಅಲ್ಲಿಗೂ ಬರುತ್ತಂತೆ. ಎಲ್ಲಾ ಮಕ್ಕಳು ಈ ಕೋತಿಯನ್ನು ಚೆನ್ನಾಗಿ ಪರಿಚಯ ಮಾಡಿಕೊಂಡಿದ್ದಾರೆ. ಅಲ್ಲದೇ ಕ್ಲಾಸ್‌ರೂಂಗೆ ಬರುವ ಈ ಮಂಗ ಯಾರಿಗೂ ತೊಂದರೆ ಕೊಡುವುದಿಲ್ಲ. 


 


Snake Found In Scooty: ಸ್ಕೂಟರ್‌ ಒಳಗಿನಿಂದ ಹೊರಬಂತು 5 ಅಡಿ ಉದ್ದದ ಹಾವು


ಶಾಲೆಯ ಕುಟುಂಬದ ಸುರಕ್ಷತೆಗಾಗಿ ಆತನನ್ನು ಹಿಡಿಯುವಂತೆ ಮುಖ್ಯಾಧ್ಯಾಪಕರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಗೌತಮ ಬುದ್ಧ ವನ್ಯಜೀವಿ ಅಭಯಾರಣ್ಯದ ಅರಣ್ಯ ಸಿಬ್ಬಂದಿ ಶಾಲೆಗೆ ಬಂದು, ಸಾಕಷ್ಟು ಪ್ರಯತ್ನ ಮಾಡಿದರೂ ಮಂಗ ಮಾತ್ರ ಸಿಗಲಿಲ್ಲ. ಬುಧವಾರವೂ ಸಮಯಕ್ಕೆ ಸರಿಯಾಗಿ ಶಾಲೆಗೆ ಬಂದು ಅಚ್ಚರಿಗೆ ಕಾರಣವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.