ಕಸದ ರಾಶಿಯಲ್ಲಿಯೇ ಬಿದ್ದಿರುವ ಈ ಕೀಟ 75 ಲಕ್ಷ ಬೆಲೆ ಬಾಳುತ್ತದೆಯಂತೆ ! ನಿಮ್ಮ ಸುತ್ತ ಇದ್ದರೂ ಇರಬಹುದು ಈ ಜೀವಿ !
Expensive Insect:ಈ ಕೀಟ ಅತ್ಯಂತ ದುಬಾರಿ. ಈ ಕೀಟವನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿ ಬಿಡಬಹುದು. ಆದರೆ, ಕೆಲವೇ ಜನರು ಮಾತ್ರ ಈ ಕೀಟವನ್ನು ಗುರುತಿಸಲು ಸಮರ್ಥರಾಗಿರುತ್ತಾರೆ.
Expensive Insect : ಆಭರಣ ವ್ಯಾಪಾರಿಯಿಂದ ಮಾತ್ರ ನಿಜವಾದ ವಜ್ರವನ್ನು ಗುರುತಿಸುವುದು ಸಾಧ್ಯವಾಗುತ್ತದೆಯಂತೆ. ಹೀಗೆ ನಮ್ಮ ಹಿರಿಯರು ಹೇಳುತ್ತಲೇ ಇರುತ್ತಾರೆ. ಈ ಮಾತನ್ನು ಇಲ್ಲಿ ಹೇಳಿರುವುದಕ್ಕೂ ಒಂದು ಕಾರಣವಿದೆ. ಈ ಭೂಮಿಯ ಮೇಲೆ ಕೋಟಿ ಬೆಲೆ ಬಾಳುವ ಕೀಟಗಳು ಇವೆಯಂತೆ. ಅತ್ಯಂತ ಅಚ್ಚರಿಯ ಸಂಗತಿ ಎಂದರೆ ಈ ಕೀಟ ಕಸದಲ್ಲಿ ಕಂಡು ಬರುತ್ತದೆ. ಈ ಕೀಟದ ಹೆಸರು ಸ್ಟಾಗ್ ಬೀಟಲ್. ಈ ಕೀಟ ಅತ್ಯಂತ ದುಬಾರಿ. ಈ ಕೀಟವನ್ನು ಮಾರಾಟ ಮಾಡುವ ಮೂಲಕ ರಾತ್ರೋರಾತ್ರಿ ಮಿಲಿಯನೇರ್ ಆಗಿ ಬಿಡಬಹುದು. ಆದರೆ, ಕೆಲವೇ ಜನರು ಮಾತ್ರ ಈ ಕೀಟವನ್ನು ಗುರುತಿಸಲು ಸಮರ್ಥರಾಗಿರುತ್ತಾರೆ.
ಲಕ್ಷಗಳಲ್ಲಿ ಮಾರಾಟವಾಗುತ್ತದೆ ಈ ಕೀಟ :
ಕೆಲವು ವರ್ಷಗಳ ಹಿಂದೆ ಸ್ಟಾಗ್ ಬೀಟಲ್ ಅನ್ನು 89,000 ಡಾಲರ್ ಅಂದರೆ ಅಂದರೆ 74.25 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಇದು ಭೂಮಿಯ ಮೇಲೆ ಇರುವ ಅಪರೂಪದ ಜೀವಿಗಳಲ್ಲಿ ಒಂದಾಗಿದೆ. ಲುಕಾನಿಡೇ ಜಾತಿಗೆ ಸೇರಿದ ಈ ಕೀಟ ಒಟ್ಟು 1200 ಪ್ರಜಾತಿಗಳಲ್ಲಿ ಕಂಡುಬರುತ್ತವೆ. ಸ್ಟ್ಯಾಗ್ ಬೀಟಲ್ ಅಥವಾ ಸ್ಟ್ಯಾಗ್ ಜೀರುಂಡೆ ಕಸದಲ್ಲಿ ವಾಸಿಸಲು ಇಷ್ಟಪಡುತ್ತದೆ. ಈ ಕೀಟವು ಲಾರ್ವಾ ಹಂತದಲ್ಲಿದ್ದಾಗ, ಕೊಳೆಯುತ್ತಿರುವ ಮರವು ಅದರ ನೆಚ್ಚಿನ ಆಹಾರವಾಗಿದೆ. ಈ ಜೀವಿಗಳು ಕೇವಲ 7 ವರ್ಷಗಳವರೆಗೆ ಬದುಕುತ್ತವೆ.
ಇದನ್ನೂ ಓದಿ : ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ!
ಈ ಕೀಟಕ್ಕೆ ಇರುತ್ತವೆ ಕೊಂಬು :
ಸ್ಟಾಗ್ ಬೀಟಲ್ ಸಾಮಾನ್ಯವಾಗಿ ಬೆಚ್ಚಗಿನ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತದೆ. ಇದರ ಗುರುತೆಂದರೆ ಅದರ ತಲೆಯ ಮೇಲ್ಭಾಗದಲ್ಲಿ ಕೊಂಬುಗಳು ಬೆಳೆಯುತ್ತವೆ. ಅದು ಕೆಲವೊಮ್ಮೆ ಐದು ಇಂಚು ಉದ್ದವಿರುತ್ತದೆ. ಈ ಕೀಟಗಳು ವಿಪರೀತ ಚಳಿಯಲ್ಲಿ ಬದುಕುವುದಿಲ್ಲ. ಸ್ಟಾಗ್ ಬೀಟಲ್ ಜಗಳಕ್ಕೆ ಇಳಿದರೆ ಇದು ಸುಮೊ ಕುಸ್ತಿಪಟುಗಳನ್ನು ನೆನಪಿಸುತ್ತವೆ. ಏಕೆಂದರೆ ಎರಡು ಸ್ಟಾಗ್ ಬೀಟಲ್ ಜಗಳವಾಡಲು ಆರಂಭಿಸಿದರೆ ಒಂದನ್ನೊಂದು ಹಿಂದಕ್ಕೆ ತಳ್ಳುತ್ತದೆ.
ಈ ಜೀರುಂಡೆ ಇಷ್ಟು ದುಬಾರಿಯಾಗಲು ಕಾರಣ ? :
ಅಪಾಯಕಾರಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಇದು ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹಲವರು ಹೇಳುತ್ತಾರೆ. ಈ ಕಾರಣದಿಂದಲೇ ಈ ಜೀವಿಯನ್ನು ಬಹಳ ದೊಡ್ಡ ಸಂಖ್ಯೆಯಲ್ಲಿ ಹಿಡಿಯಲಾಗುತ್ತದೆ. ಹಾಗಾಗಿ ಈಗ ಇದು ಅಳಿವಿನ ಅಪಾಯದಲ್ಲಿದೆ. ಜಾಗತಿಕ ಮಟ್ಟದಲ್ಲಿ ಈ ಕೀಟಕ್ಕೆ ಬೇಡಿಕೆ ತುಂಬಾ ಹೆಚ್ಚಿದೆ.ಈ ಕೀಟ ಎಲ್ಲಿಯಾದರೂ ಕಂಡು ಬಂದರೆ ನೀವು ರಾತ್ರೋರಾತ್ರಿ ಶ್ರೀಮಂತರಾಗುವುದಂತೂ ಖಂಡಿತಾ.
ಇದನ್ನೂ ಓದಿ : 'ಈಗ್ ಗೊತ್ತಾಯ್ತು ಅಪ್ಪ ಸರ್ಕಾರಿ ಸ್ಕೂಲಲ್ಲಿ ಯಾಕೆ ಓದಿಸಿದ್ರು ಅಂತಾ...', ವೈರಲ್ ಆಗುತ್ತಿರುವ' ನರ್ಸರಿ-ಕೆಜಿ ಶುಲ್ಕ ವಿವರ ನೀವೂ ನೋಡಿ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ