ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ!

Viral QR Code Statue Photo: ಭಾರತದಲ್ಲಿ ಕ್ಯೂಆರ್ ಕೋಡ್ ತಂತ್ರಜ್ಞಾನದ ಮೂಲಕ ಆನ್‌ಲೈನ್ ಪಾವತಿಯ ಬಳಕೆಯು ಕೇವಲ ಒಂದು ದಶಕವಾಗಿದೆ. ಇಂತಹ  ಪರಿಸ್ಥಿತಿಯಲ್ಲಿ, ವೈರಲ್ ವಿಗ್ರಹದಲ್ಲಿ ಮಾಯಾ ನಾಗರಿಕತೆಯ ಸುಧಾರಿತ ತಂತ್ರಜ್ಞಾನವನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯಲ್ಲಿ ಇಂತಹ ತಂತ್ರಜ್ಞಾನವನ್ನು ಕೆಲವು ಮಹತ್ವದ ಕೆಲಸಗಳಿಗೆ ಬಳಸಿರಬೇಕು ಎಂದು ಜನರು ಹೇಳುತ್ತಿದ್ದಾರೆ. (Viral News In Kannada)

Written by - Nitin Tabib | Last Updated : Dec 11, 2023, 06:40 PM IST
  • ಈ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ಗೊತ್ತಿಲ್ಲ, ಆದರೆ ಈ ವಿಗ್ರಹದ ಚಿತ್ರವು ಖಂಡಿತವಾಗಿಯೂ ಇಂಟರ್ನೆಟ್‌ನಲ್ಲಿ ಜನರ ಭಾವನೆಯನ್ನೇ ತಿರುಗಿಸಿದೆ.
  • ಇದನ್ನು ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಮಿಸ್ಟೀರಿಯಸ್ ವರ್ಲ್ಡ್ ಹೆಸರಿನ ಖಾತೆ ಮೂಲಕ ಹಂಚಿಕೊಳ್ಳಲಾಗಿದ್ದು,
  • ಇದುವರೆಗೆ 16 ಸಾವಿರ ಮಂದಿ ಲೈಕ್ ಮಾಡಿದ್ದಾರೆ, ಸಾವಿರಾರು ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
ಮೂರು ಸಾವಿರ ವರ್ಷಗಳ ಹಿಂದೆಯೂ QR Code ಬಳಕೆಯಲ್ಲಿತ್ತು ಎಂದರೆ ನಂಬ್ತೀರಾ? ವೈರಲ್ ಆಗುತ್ತಿರುವ ಈ ವಿಗ್ರಹ ಹೌದು ಎನ್ನುತ್ತೆ! title=

ಅಮೆರಿಕಾ: ಇಂದು ಬಳಸುತ್ತಿರುವ ಕ್ಯೂಆರ್ ಕೋಡ್ ತಂತ್ರಜ್ಞಾನವು 3000 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ ಎಂದರೆ ನಂಬ್ತೀರಾ? ನಿಸ್ಸಂಶಯವಾಗಿ, ಇದನ್ನು ಓದಿದ ನಂತರ ನಿಮಗೆ ಶಾಕ್ ಆಗಿರಬಹುದು. ವಾಸ್ತವದಲ್ಲಿ, ಜನರು ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಹಕ್ಕುಗಳನ್ನು ಮಂಡಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ, ಪುರಾತನ ವಿಗ್ರಹದ ಚಿತ್ರವೊಂದು ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದರ ಮೇಲೆ ಕ್ಯೂಆರ್ ಕೋಡ್‌ನಂತಹ ಆಕೃತಿ ಕಂಡುಬರುತ್ತದೆ. ಈ ವಿಗ್ರಹ ಮಾಯಾ ನಾಗರಿಕತೆಗಿಂತಲೂ ಹಿಂದಿನ ಕಾಲದ್ದು, ಎಂದು ಹೇಳಲಾಗುತ್ತಿದೆ, ಈ ನಾಗರಿಕತೆ ಮೆಕ್ಸಿಕೊ, ಹೊಂಡುರಾಸ್, ಗ್ವಾಟೆಮಾಲಾ ಮತ್ತು ಯುಕಾಟಾನ್ ಪೆನಿನ್ಸುಲಾದಲ್ಲಿ 1500ಬಿಸಿ ಗಿಂತ ಮುಂಚೆಯೇ ಅಸ್ತಿತ್ವದಲ್ಲಿತ್ತು. (Viral News In Kannada)

ಅಮೆರಿಕದ ಈ ಪ್ರಾಚೀನ ನಾಗರಿಕತೆಯು ಅದರ ಸಮಯಕ್ಕಿಂತ ಬಹಳ ತುಂಬಾ ಆಧುನಿಕವಾಗಿತ್ತು ಎಂದು ಪರಿಗಣಿಸಲಾಗಿದೆ. ವಿಗ್ರಹದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಮೂಲಕ ಜನರು ಈ ಹೇಳಿಕೆಯನ್ನು ಬೆಂಬಲಿಸುತ್ತಿದ್ದಾರೆ. ಹಕ್ಕಿನ ಪ್ರಕಾರ, ಸಂಶೋಧಕರು ಸಾವಿರಾರು ವರ್ಷಗಳಷ್ಟು ಹಳೆಯದಾದ ಪುರಾತನ ವಿಗ್ರಹವನ್ನು ಕಂಡುಕೊಂಡಿದ್ದಾರೆ, ಇದು ಮಾಯಾ ನಾಗರಿಕತೆಗೆ ಸಂಬಂಧಿಸಿದೆ. ಈ ಪುರಾತನ ವಿಗ್ರಹ ಸಾಮಾನ್ಯ ಪ್ರತಿಮೆಗಳಿಗಿಂತ ವಿಭಿನ್ನ ಮತ್ತು ವಿಚಿತ್ರವಾಗಿದೆ. ಏಕೆಂದರೆ, ಅದಕ್ಕೆ ಕೈಕಾಲುಗಳಿವೆ ಆದರೆ ತಲೆಯ ಬದಲಾಗಿ ಯಾವುದೋ ಕ್ಯೂಆರ್ ಕೋಡ್ ಆಕೃತಿ ತಲೆ ಜಾಗಕ್ಕೆ ಕಾಣಿಸುತ್ತದೆ. ಆನ್‌ಲೈನ್ ಪಾವತಿಗಳನ್ನು ಮಾಡಲು ನೀವು ಮತ್ತು ನಾವು ಇಂದು ಬಳಸುವ ಅದೇ ಕ್ಯೂಆರ್ ಕೋಡ್ ರೀತಿ ಅದು ಕಾಣಿಸುತ್ತಿದೆ. 

ಇದನ್ನೂ ಓದಿ-'ಈಗ್ ಗೊತ್ತಾಯ್ತು ಅಪ್ಪ ಸರ್ಕಾರಿ ಸ್ಕೂಲಲ್ಲಿ ಯಾಕೆ ಓದಿಸಿದ್ರು ಅಂತಾ...', ವೈರಲ್ ಆಗುತ್ತಿರುವ' ನರ್ಸರಿ-ಕೆಜಿ ಶುಲ್ಕ ವಿವರ ನೀವೂ ನೋಡಿ!

ಭಾರತದಲ್ಲಿ ಕ್ಯೂಆರ್ ಕೋಡ್ ತಂತ್ರಜ್ಞಾನದ ಮೂಲಕ ಆನ್‌ಲೈನ್ ಪಾವತಿಯ ಬಳಕೆಯು ಕೇವಲ ಒಂದು ದಶಕವಾಗಿದೆ. ಇಂತಹ  ಪರಿಸ್ಥಿತಿಯಲ್ಲಿ, ವೈರಲ್ ವಿಗ್ರಹದಲ್ಲಿ ಮಾಯಾ ನಾಗರಿಕತೆಯ ಸುಧಾರಿತ ತಂತ್ರಜ್ಞಾನವನ್ನು ನೋಡಿ ಜನರು ದಿಗ್ಭ್ರಮೆಗೊಂಡಿದ್ದಾರೆ. ಮೂರು ಸಾವಿರ ವರ್ಷಗಳಷ್ಟು ಹಳೆಯದಾದ ಮಾಯಾ ನಾಗರಿಕತೆಯಲ್ಲಿ ಇಂತಹ ತಂತ್ರಜ್ಞಾನವನ್ನು ಕೆಲವು ಮಹತ್ವದ ಕೆಲಸಗಳಿಗೆ ಬಳಸಿರಬೇಕು ಎಂದು ಜನರು ಹೇಳುತ್ತಿದ್ದಾರೆ.

ಇದನ್ನೂ ಓದಿ-ಪ್ರೀತಿಗಾಗಿ ಲಿಂಗ ಬದಲಾಯಿಸಿದ ಹುಡುಗಿ, ಗೆಳತಿಯನ್ನೇ ಮದುವೆಯಾದ್ಲು!

ಈ ಹೇಳಿಕೆಗಳಲ್ಲಿ ಎಷ್ಟು ಸತ್ಯವಿದೆ ಎಂಬುದು ಗೊತ್ತಿಲ್ಲ, ಆದರೆ ಈ ವಿಗ್ರಹದ ಚಿತ್ರವು ಖಂಡಿತವಾಗಿಯೂ ಇಂಟರ್ನೆಟ್‌ನಲ್ಲಿ ಜನರ ಭಾವನೆಯನ್ನೇ ತಿರುಗಿಸಿದೆ. ಇದನ್ನು ಇತ್ತೀಚೆಗಷ್ಟೇ ಫೇಸ್‌ಬುಕ್‌ನಲ್ಲಿ ಮಿಸ್ಟೀರಿಯಸ್ ವರ್ಲ್ಡ್ ಹೆಸರಿನ ಖಾತೆ ಮೂಲಕ ಹಂಚಿಕೊಳ್ಳಲಾಗಿದ್ದು, ಇದುವರೆಗೆ 16 ಸಾವಿರ ಮಂದಿ ಲೈಕ್ ಮಾಡಿದ್ದಾರೆ, ಸಾವಿರಾರು ಬಳಕೆದಾರರು ತಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರರು 'ಇದು ನಮ್ಮ ಭವಿಷ್ಯ ಹೇಗಿರಬಹುದು ಎಂಬುದನ್ನು ತೋರಿಸುತ್ತಿದೆ' ಎಂದಿದ್ದರೆ, ಮತ್ತೊರ್ವ ಬಳಕೆದಾರರು 'ಬಹುಶಃ ಇದು ನಿಗೂಢ ನಿಧಿಯ ಬಳಿ ತಲುಪುವ ನಕ್ಷೆಯಾಗಿರಬಹುದು ಎಂದಿದ್ದಾರೆ.  ಮೂರನೇ ಬಳಕೆದಾರೆ 'ಆ ಕಾಲದ ಜನರು ಭವಿಷ್ಯವನ್ನು ನೋಡಬಹುದಾಗಿತ್ತು ಎಂಬುದನ್ನು ಇದು ತೋರಿಸುತ್ತದೆ' ಎಂದಿದ್ದಾರೆ,

ಇಲ್ಲಿದೆ ಆ ವೈರಲ್ ಕ್ಯೂಆರ್ ಕೋಡ್ ವಿಗ್ರಹದ ಚಿತ್ರ...

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News