Hanuma Janati 2022 Viral Video - ಹನುಮ ಜಯಂತಿ ದಿನದಂದೇ ಶ್ರೀ ಆಂಜನೇಯ ಕಣ್ಣೀರು ಹಾಕಿದ ಘಟನೆ ಹುಬ್ಬಳ್ಳಿ ತಾಲೂಕಿನ ಬುಡರಸಿಂಗಿ ಗ್ರಾಮದಲ್ಲಿ ನಡೆದಿದೆ. ಹೌದು.. ಬುಡರಸಿಂಗಿ ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಪ್ರಾಣ ಹನುಮ ದೇವಸ್ಥಾನದಲ್ಲಿನ ಹನುಮಂತನ ಕಣ್ಣಿನಿಂದ ನೀರು ಬರುತ್ತಿರುವುದು ಇದೀಗ ಎಲ್ಲರಿಗೂ ಭಾರಿ ಅಚ್ಚರಿ ಮೂಡಿಸಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. 

COMMERCIAL BREAK
SCROLL TO CONTINUE READING

ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಸದ್ಯ ಇಡೀ ಗ್ರಾಮಕ್ಕೆ ಗ್ರಾಮವೇ ಆಶ್ಚರ್ಯಚಕಿತಗೊಂಡಿದ್ದು, ಹನುಮನ ಮೂರ್ತಿಯಿಂದ ಕಣ್ಣೀರು ಜಿನುಗುತ್ತಿರೋದಕ್ಕೆ  ಎಲ್ಲಾ ಗ್ರಾಮಸ್ಥರು ಬಹಳ ಆಶ್ಚರ್ಯದಿಂದ ದೇವಸ್ಥಾನದತ್ತ ಮುಖ ಮಾಡಿದ್ದಾರೆ. 


ಇದನ್ನೂ ಓದಿ-Shani: ಶನಿಯ ಶುಭ ದೆಸೆ ಭಾಗ್ಯೋದಯಕ್ಕೆ ಕಾರಣ, ಜೀವನದಲ್ಲಿ ಏನೆಲ್ಲಾ ಸಿಗುತ್ತದೆ ಗೊತ್ತಾ?

ಇನ್ನು ಈ ಆಂಜನೇಯ ದೇವಸ್ಥಾನದ ಕುರಿತು ಹೇಳುವುದಾದರೆ, ಈ ದೇವಷ್ಟಾನಕ್ಕೆ ಸುಮಾರು 700 ವರ್ಷಗಳ ಇತಿಹಾಸವಿದೆ, ಜಕಣಾಚಾರಿ ಈ ಆಂಜನೇಯನ ಗುಡಿಯನ್ನು ಕಟ್ಟಿದ್ದಾರೆಂಬ ನಂಬಿಕೆ ಗ್ರಾಮಸ್ಥರದ್ದಾಗಿದೆ. ಪ್ರತಿವರ್ಷ ಹನುಮ ಜಯಂತಿ ದಿನಯಂದು ಈ ದೇವಸ್ಥಾನದಲ್ಲಿ ಸಡಗರ ಸಂಭ್ರಮದಿಂದ ಶ್ರೀ ಆಂಜನೇಯನ ಜನ್ಮೋತ್ಸವ ಕಾರ್ಯವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಂದು ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. 


ಇದನ್ನೂ ಓದಿ-Vastu Tips: ದಕ್ಷಿಣ ದಿಕ್ಕಿನಲ್ಲಿ ಮರೆತೂ ಕೂಡ ಈ ಸಸ್ಯಗಳನ್ನು ನೆಡಬೇಡಿ, ಹಣಕಾಸಿನ ಮುಗ್ಗಟ್ಟು ಎದುರಾಗುತ್ತದೆ

ಪ್ರತಿವರ್ಷದಂತೆ ಈ ವರ್ಷವು ಕೂಡ ಆಂಜನೇಯನ ವಿಶೇಷ ಪೂಜೆ ನೆರವೇರಿಸಲಾಗಿದೆ. ನಂತರ ಆಂಜನೇಯನಿಗೆ ಮಂಗಳಾರತಿ ಮಾಡುವ ಸಮಯದಲ್ಲಿ ಕಣ್ಣೀಂದ ನೀರು ಜಿನುಗಲು ಶುರುವಾಗಿದೆ. ಇದನ್ನು ಕಂಡ ಅರ್ಚಕರು ಆಶ್ಚರ್ಯಗೊಂಡು ಸ್ಥಳೀಯ ಗ್ರಾಮಸ್ಥರಿಗೆ ಈ ಮಾಹಿತಿಯನ್ನು ನೀಡಿದ್ದಾರೆ. ಆ ಬಳಿಕ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾದುತ್ತಿದೆ. .ಅದೇನಿ ಇರಲಿ ರಾಜ್ಯಾದ್ಯಂತ ಎಲ್ಲರೂ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಈ ವೇಳೆ ಬುಡರಸಿಂಗಿ ಹನುಮ ಕಣ್ಣೀರು ಹಾಕಿದ್ದು ಮಾತ್ರ ಭಕ್ತರಲ್ಲಿ ಆಶ್ಚರ್ಯದ ಜೊತೆಗೆ ಆತಂಕ ಕೂಡ ಮೂಡಿಸಿದ್ದು ಮಾತ್ರ ನಿಜ.


ಇಲ್ಲಿದೆ ಆ ವಿಡಿಯೋ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.