ನವದೆಹಲಿ: ಆಪ್ಟಿಕಲ್ ಇಲ್ಯೂಷನ್ ಈಗ ಅತ್ಯಂತ ಜನಪ್ರಿಯ ಇಂಟರ್ನೆಟ್ ಚಟುವಟಿಕೆಯಾಗಿದೆ. ಆಪ್ಟಿಕಲ್ ಇಲ್ಯೂಷನ್‌ಗಳುಳ್ಳ ಫೋಟೋ, ವಿಡಿಯೋಗಳು ಪ್ರತಿದಿನ ವೈರಲ್ ಆಗುತ್ತಲೇ ಇರುತ್ತವೆ. ನಮ್ಮ ಕಣ್ಣುಗಳಿಗೆ ಭ್ರಮೆ ಹುಟ್ಟಿಸುವ, ನಂಬಲಾಗದಂತಹ ಫೋಟೋ ಮತ್ತು ವಿಡಿಯೋಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಂಡಿರುತ್ತಾರೆ. ಬಹುಪಾಲು ಜನರು ಆಪ್ಟಿಕಲ್ ಭ್ರಮೆಗಳನ್ನು ಪತ್ತೆಹಚ್ಚಲು ವಿಫಲರಾಗುತ್ತಾರೆ. ಕೆಲವು ಸೆಕೆಂಡುಗಳ ಕಾಲ ಚಿತ್ರವನ್ನು ದಿಟ್ಟಿಸಿ ನೋಡಿದ ನಂತರವೇ ಜನರಿಗೆ ಅದು ಏನು ಅಂತಾ ಅರ್ಥವಾಗಿರುತ್ತದೆ.


COMMERCIAL BREAK
SCROLL TO CONTINUE READING

ಆಪ್ಟಿಕಲ್ ಇಲ್ಯೂಷನ್ ಚಿತ್ರದ ಸತ್ಯ ತಿಳಿದುಕೊಳ್ಳಲು ಅನೇಕರು ಹತಾಶರಾಗಿರುತ್ತಾರೆ. ನಿಮ್ಮ ಮೆದುಳು ಚುರುಕಾಗಿದ್ದರೆ ಇದು ಸುಲಭವಾದ ಟಾಸ್ಕ್. ಬಹುಬೇಗನೆ ಉತ್ತರ ಕಂಡುಕೊಳ್ಳುವ ಜನರಿಗೆ ಸೂಪರ್ ಜೀನಿಯಸ್ ಎಂದು ಕರೆಯಲಾಗುತ್ತದೆ. ಕಳೆದ ಹಲವು ದಿನಗಳಿಂದ ಇಂತಹದೊಂದು ಚಿತ್ರ ವೈರಲ್ ಆಗುತ್ತಿದ್ದು, ಆದರೆ ಜನಕ್ಕೆ ಆ ಚಿತ್ರದಲ್ಲಿರುವ ಪ್ರಾಣಿಯೇ ಕಾಣಸಿಗುತ್ತಿಲ್ಲ.


ಇದನ್ನೂ ಓದಿ: ಬಲೆಗೆ ಬಿದ್ದ ʼರಿವರ್‌ ಬೀಸ್ಟ್‌ʼ: ಈ ರಾಕ್ಷಸ ಮೀನು ಕಾಣಸಿಗೋದೆ ಅಪರೂಪ!


ಕಲ್ಲುಗಳ ನಡುವೆ ಪ್ರಾಣಿ ಮರೆಯಾಗಿದೆ


ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಚಿತ್ರದಲ್ಲಿ ನೀವು ಸುತ್ತಲೂ ದೊಡ್ಡ ಕಲ್ಲುಗಳನ್ನು ಮಾತ್ರ ನೋಡುತ್ತೀರಿ. ಈಗ ನೀವು ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಪ್ರಾಣಿ ಎಲ್ಲಿ ಅಡಗಿಕೊಂಡಿದೆ ಎಂಬುದನ್ನು ಕಂಡುಹಿಡಿಯಬೇಕು. ಆದಾಗ್ಯೂ, ಕೆಲವು ಸೆಕೆಂಡುಗಳ ಕಾಲ ಚಿತ್ರವನ್ನು ನೋಡಿದ ನಂತರವೇ ನೀವು ಅದನ್ನು ಸುಲಭವಾಗಿ ಗುರುತಿಸಬಹುದು. ಈ ಪ್ರಾಣಿಯನ್ನು ಕಂಡುಹಿಡಿಯದವರು ತಮ್ಮ ಮೆದುಳಿಗೆ ಹೆಚ್ಚು ಕೆಲಸ ಕೊಡಬೇಕು. ಪ್ರಾಣಿಯು ಸಹ ಕಲ್ಲಿನ ಬಣ್ಣದ್ದಾಗಿರುವುದರಿಂದ ಅದನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲವೆಂದು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಕಾಮೆಂಟ್ ಮಾಡಿದ್ದಾರೆ.  


ಬಂಡೆಗಳ ಬಳಿ ಜೀವಿ ಹುಡುಕಲು ಜನರು ವಿಫಲ 


ಪ್ರಾಣಿಗಳ ಚಿತ್ರಗಳನ್ನು ನೋಡೇ ಇರ್ತಿರಿ. ಆದರೆ ಕಲ್ಲುಗಳು ಮತ್ತು ಬಂಡೆಗಳ ಬಳಿ ಪ್ರಾಣಿಯನ್ನು ಸುಲಭವಾಗಿ ಗುರುತಿಸಬಹುದು. ಆದರೆ, ಈ ಚಿತ್ರದಲ್ಲಿ ಅಂಥದ್ದೇನೂ ಇಲ್ಲ. ಕೆಲವು ಪ್ರಾಣಿಗಳು ಸಮುದ್ರದ ದಡದಲ್ಲಿ ತಿರುಗಾಡುತ್ತಲೇ ಇರುತ್ತವೆ, ಅವು ಕಲ್ಲುಗಳ ನಡುವೆ ಹೋಗಿ ಕುಳಿತುಕೊಳ್ಳುತ್ತವೆ. ಸಾಮಾನ್ಯವಾಗಿ ಈ ಜೀವಿಗಳು ಗಾಢ ಕಂದು ಬಣ್ಣವನ್ನು ಹೊಂದಿರುತ್ತವೆ. ಇದು ಬಂಡೆಗಳ ನಡುವೆ ಸುಲಭವಾಗಿ ಮರೆಮಾಡಲ್ಪಡುತ್ತದೆ. ಈ ಚಿತ್ರದ ಮಧ್ಯದಲ್ಲಿ ಪ್ರಾಣಿ ಇರುವುದನ್ನು ನೀವು ಕಾಣಬಹುದು. ಇದರ ಸುತ್ತಲೂ ಒಂದೇ ಬಣ್ಣದ ಕಲ್ಲುಗಳಿದ್ದು, ಇದರಿಂದ ಜನರು ಪ್ರಾಣಿ ಹುಡುಕಲು ಸಾಧ್ಯವಾಗುತ್ತಿಲ್ಲ.


ಇದನ್ನೂ ಓದಿ: Viral Image: ಬರೋಬ್ಬರಿ 11 ಲಕ್ಷ ಖರ್ಚು ಮಾಡಿ ನಾಯಿಯಂತಾದ ವ್ಯಕ್ತಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.