ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್‌ಗೆ ಹೋಗಿದ್ದ ಪತ್ನಿಗೆ ಶಾಕ್‌!

ಪ್ರವಾಸಕ್ಕೆಂದು ಪತ್ನಿ ತೆರಳಿದ್ದ ಸಂದರ್ಭದಲ್ಲಿ ಪತಿಯು ʼವೈಫ್‌ ಫಾರ್‌ ಸೇಲ್‌ʼ ಎಂದು ಆಕೆಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯನ್ನು ಹಳೆಯ ಕಾರ್‌ಗೆ ಹೋಲಿಕೆ ಮಾಡಿದ್ದಾನೆ. 

Written by - Bhavishya Shetty | Last Updated : May 25, 2022, 04:07 PM IST
  • ಸೋಶಿಯಲ್‌ ಮೀಡಿಯಾದಲ್ಲಿ ಹೆಂಡತಿ ಬಗ್ಗೆ ಪೋಸ್ಟ್‌
  • ʼWife For Saleʼ ಎಂದು ಜಾಹೀರಾತು ನೀಡಿದ ಪತಿ
  • ಪೋಸ್ಟ್‌ ನೋಡಿದ ಜನರು ಶಾಕ್‌
ʼWife For Saleʼ ಎಂದು ಜಾಹೀರಾತು ನೀಡಿದ ಪತಿ: ಟೂರ್‌ಗೆ ಹೋಗಿದ್ದ ಪತ್ನಿಗೆ ಶಾಕ್‌!  title=
Wife For Sale

ಬ್ರಿಟನ್‌ ಮೂಲದ ದಂಪತಿ  ಸೋಶಿಯಲ್‌ ಮೀಡಿಯಾದಲ್ಲಿ ಫನ್ನಿಯಾಗಿ ಪೋಸ್ಟ್‌ ಹಾಕುವ ಮೂಲಕ ಜನರನ್ನು ದಂಗುಗೊಳಿಸಿದ್ದಾರೆ. ಹೌದು ಪ್ರವಾಸಕ್ಕೆ ತೆರಳಿದ್ದ ಪತ್ನಿಗೆ ಮನೆಯಲ್ಲಿ ಕುಳಿತಿದ್ದ ಪತಿ ಶಾಕ್‌ ನೀಡಿದ್ದಾನೆ. ಏನಿದು ಶಾಕಿಂಗ್‌ ನ್ಯೂಸ್‌ ಎಂದು ತಿಳಿಯಬೇಕೇ? ಹಾಗಾದ್ರೆ ಈ ಸುದ್ದಿ ಓದಿ. 

ಪ್ರವಾಸಕ್ಕೆಂದು ಪತ್ನಿ ತೆರಳಿದ್ದ ಸಂದರ್ಭದಲ್ಲಿ ಪತಿಯು ʼವೈಫ್‌ ಫಾರ್‌ ಸೇಲ್‌ʼ ಎಂದು ಆಕೆಯ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯನ್ನು ಹಳೆಯ ಕಾರ್‌ಗೆ ಹೋಲಿಕೆ ಮಾಡಿದ್ದಾನೆ. 

ಇದನ್ನು ಓದಿ: Shocking: ಪಂಜರದಲ್ಲಿರುವ ಸಿಂಹದ ಜೊತೆಗೆ ಚೆಲ್ಲಾಟ, ನೋಡುತ್ತಲೇ ನಡೆದ್ಹೋಯ್ತು ಈ ಘಟನೆ

ಈ ಕುರಿತು 'ನ್ಯೂಯಾರ್ಕ್ ಪೋಸ್ಟ್' ವರದಿ ಮಾಡಿದೆ. ಅದರ ಪ್ರಕಾರ, ಫೋಟೋ ಶೇರ್‌ ಮಾಡಿದ ವ್ಯಕ್ತಿಯ ಹೆಸರು ರಾಬಿ ಮೆಕ್‌ಮಿಲನ್. ವೃತ್ತಿಯಲ್ಲಿ ಡಿಸ್ಕೋ ಜಾಕಿಯಾಗಿ ಕೆಲಸ ಮಾಡುತ್ತಿರುವ ಮಿಲನ್‌, ತನ್ನ ಪತ್ನಿ ಸಾರಾ ಅವರ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಸಾರಾಳನ್ನು ಖರೀದಿಸಿದರೆ ಆಗುವ ಅನುಕೂಲ, ಅನಾನುಕೂಲಗಳ ಬಗ್ಗೆಯೂ ತಿಳಿಸಿದ್ದಾರೆ. 

"ಈಗ ಮಾರಾಟಕ್ಕೆ ಲಭ್ಯವಿಲ್ಲ": 
"ನಾವು ಸುಮಾರು 20 ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸುತ್ತಿದ್ದೇವೆ. ಒಬ್ಬರಿಗೊಬ್ಬರು ಚೆನ್ನಾಗಿ ಅರ್ಥೈಸಿಕೊಂಡಿದ್ದೇವೆ. ಪೋಸ್ಟ್‌ ಮಾಡಿದ ಬಳಿಕ ಅನೇಕರು ಆಕೆಯನ್ನು ಖರೀದಿ ಮಾಡುತ್ತೇವೆ ಎಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಅವಳನ್ನು ಈಗ ಮಾರಾಟ ಮಾಡುವುದಿಲ್ಲ. ಅವಳು ಮಿಲಿಯನ್‌ಗೆ ಒಬ್ಬಳು" ಎಂದು ಪ್ರೀತಿಯಿಂದ ಬರೆದುಕೊಂಡಿದ್ದಾನೆ.  

ಇದನ್ನು ಓದಿ: Viral Video: 15 ಸೆಕೆಂಡ್ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟ ಟಿಕ್‍ಟಾಕ್ ಸ್ಟಾರ್!

ಪತಿಗೆ ಸಂದೇಶ ಕಳುಹಿಸಿದ ಸಾರಾ: 
ಎಸ್ಸೆಕ್ಸ್‌ ಮೂಲದವರಾದ ದಂಪತಿ ಸದ್ಯ, ಪೋರ್ಟೊ ರಿಕೊ ಡಿ ಗ್ರ್ಯಾನ್ ಕೆನರಿಯಾದಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಿಲನ್‌ ಅವರ ಈ ಪೋಸ್ಟ್‌ಗೆ ಲೈಕ್‌, ಶೇರ್‌ ಮತ್ತು ಕಾಮೆಂಟ್‌ಗಳ ಸುರಿಮಳೆಯೇ ಬಂದಿವೆ. ಈ ಪೋಸ್ಟ್‌ಗೆ ಸ್ವತಃ ಸಾರಾ ಕೂಡ ಕಾಮೆಂಟ್ ಮಾಡಿದ್ದಾರೆ. "ರಾಬಿ ತುಂಬಾ ಫ್ಲರ್ಟೇಟಿವ್" ಎಂದು ಸಾರಾ ಹೇಳಿದ್ದಾರೆ. "ಪೋಸ್ಟ್ ಅನ್ನು ನೋಡಿದಾಗ ನನಗೆ ನಗು ಬಂದಿತ್ತು. ಏಕೆಂದರೆ ಅವನು ಯಾವಾಗಲೂ ಈ ರೀತಿಯ ಕೆಲಸವನ್ನು ಮಾಡುತ್ತಾನೆ. ಅವನು ಸ್ವಲ್ಪ ಚೇಷ್ಟೆಗಾರ" ಎಂದು ಹೇಳಿದರು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News