ಬಲೆಗೆ ಬಿದ್ದ ʼರಿವರ್‌ ಬೀಸ್ಟ್‌ʼ: ಈ ರಾಕ್ಷಸ ಮೀನು ಕಾಣಸಿಗೋದೆ ಅಪರೂಪ!

ಮೀನುಗಾರರು ಕೂಡ ಈ ಬೃಹತ್ ಮೀನಿನ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ಫೋಟೋಗಳನ್ನು ನೋಡಿದ ಜನರು 'ಅಪರೂಪದ ಜೀವಿ ಮೆಲನಿಸ್ಟಿಕ್ ಅಲಿಗೇಟರ್ ಗಾರ್ʼ ಎಂದು ಹೇಳುತ್ತಿದ್ದಾರೆ. ಈ ಮೀನು ಕನಿಷ್ಠ 5 ಅಡಿ ಉದ್ದವಿರುತ್ತದೆ. 

Written by - Bhavishya Shetty | Last Updated : May 23, 2022, 05:49 PM IST
  • ಅಸ್ತಿತ್ವದಲ್ಲಿರುವ ದೊಡ್ಡ ಜಾತಿಯ ಮೀನು ಪತ್ತೆ
  • ಇದನ್ನು ಜೆಟ್-ಬ್ಲಾಕ್ ರಿವರ್ ಬೀಸ್ಟ್ ಎನ್ನಲಾಗುತ್ತದೆ
  • ಅಮೆರಿಕದ ಟೆಕ್ಸಾಸ್‌ನಲ್ಲಿ ಕಂಡುಬಂದ ಮೀನು
ಬಲೆಗೆ ಬಿದ್ದ ʼರಿವರ್‌ ಬೀಸ್ಟ್‌ʼ: ಈ ರಾಕ್ಷಸ ಮೀನು ಕಾಣಸಿಗೋದೆ ಅಪರೂಪ! title=
Jet-Black River Beast

Jet Black River Beast: ಅಮೆರಿಕದ ಟೆಕ್ಸಾಸ್‌ನಲ್ಲಿ ಇಬ್ಬರು ಮೀನುಗಾರರು ತಮ್ಮ ಸಾಮಾನ್ಯ ದಿನಚರಿಯಂತೆ ಮೀನು ಹಿಡಿಯಲು ಮುಂದಾದಾಗ ಬಲೆಗೆ ದೈತ್ಯ ಮೀನೊಂದು ಬಿದ್ದಿದೆ. ಇದನ್ನು ಕಂಡ ಮೀನುಗಾರರು ಒಮ್ಮೆಗೆ ದಂಗಾಗಿದ್ದಾರೆ. ಇನ್ನು ಈ ಮೀನು ಬಲು ಅಪರೂಪದ ತಳಿಯಾಗಿದ್ದು,  ಜೆಟ್-ಬ್ಲಾಕ್ ರಿವರ್ ಬೀಸ್ಟ್ ಎಂದು ಕರೆಯಲಾಗುತ್ತದೆ.  

ಇದನ್ನು ಓದಿ: Mussoorie Tour: ಚಾರಣಪ್ರಿಯರೇ.. ಪ್ರವಾಸದ ಪ್ಲಾನ್‌ ಹಾಕಿದ್ರೆ ಈ ಸ್ಥಳಗಳು ಬೆಸ್ಟ್‌

ಮೀನುಗಾರರು ಕೂಡ ಈ ಬೃಹತ್ ಮೀನಿನ ಕೆಲವು ಚಿತ್ರಗಳನ್ನು ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೈರಲ್ ಫೋಟೋಗಳನ್ನು ನೋಡಿದ ಜನರು 'ಅಪರೂಪದ ಜೀವಿ ಮೆಲನಿಸ್ಟಿಕ್ ಅಲಿಗೇಟರ್ ಗಾರ್ʼ ಎಂದು ಹೇಳುತ್ತಿದ್ದಾರೆ. ಈ ಮೀನು ಕನಿಷ್ಠ 5 ಅಡಿ ಉದ್ದವಿರುತ್ತದೆ.  

WION ಸುದ್ದಿ ಮಾಧ್ಯಮದ ಪ್ರಕಾರ, ಮೀನುಗಾರರಲ್ಲಿ ಒಬ್ಬರಾದ ಜೋರ್ಡಾನ್ ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಶೀರ್ಪಿಕೆ ನೀಡಿದ ಅವರು "ನಾನು ಮತ್ತು ಟೆರೆಲ್ ನಿನ್ನೆ ಮೆಲಾನಿಸ್ಟಿಕ್ ಗಾರ್ ಇದೆ ಎಂಬುನ್ನು ಖಚಿತಪಡಿಸಿಕೊಂಡಿದ್ದೇವೆ" ಎಂದು ಬರೆದುಕೊಂಡಿದ್ದಾರೆ. ಮೀನು ಬಲೆಗೆ ಬೀಳುತ್ತಿದ್ದಂತೆ ಅದನ್ನು ರಕ್ಷಣೆ ಮಾಡಿದ ಮೀನುಗಾರರು ಮತ್ತೆ ಅದೇ ನದಿಗೆ ಮೀನನ್ನು ಬಿಟ್ಟಿದ್ದಾರೆ.  

ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಅಲಿಗೇಟರ್ ಗಾರ್ ಮೀನು ಸದ್ಯ ಅಸ್ತಿತ್ವದಲ್ಲಿರುವ ಗಾರ್‌ ಜಾತಿಗಳಲ್ಲಿ ದೊಡ್ಡದಾಗಿದೆ. ಇದು ಉತ್ತರ ಅಮೆರಿಕಾದಲ್ಲಿ ಅತಿದೊಡ್ಡ ಸಿಹಿನೀರಿನಲ್ಲಿ ಕಂಡುಬರುತ್ತದೆ. ಈ ಮೀನುಗಳು ಮಿಸ್ಸಿಸ್ಸಿಪ್ಪಿ ನದಿಯ ಜಲಾನಯನ ಪ್ರದೇಶದಲ್ಲಿ ಪ್ರತ್ಯೇಕವಾಗಿ ವಾಸಿಸುಸುತ್ತವೆ. ಅಲ್ಲಿ ಸಣ್ಣ ಮೀನುಗಳು, ನೀಲಿ ಏಡಿಗಳು, ಜಲಪಕ್ಷಿಗಳು ಮತ್ತು ಆಮೆಗಳನ್ನು ತಿಂದು ಇವುಗಳು ಜೀವಿಸುತ್ತವೆಯಂತೆ. 

ಇದನ್ನು ಓದಿ: ಹೋಟೆಲ್-ರೆಸ್ಟಾರೆಂಟ್ ಗಳಲ್ಲಿ ಸೇವಾ ಶುಲ್ಕ ನೀಡುವ ಅವಶ್ಯಕತೆ ಇಲ್ಲ, ಸರ್ಕಾರದ ಮಹತ್ವದ ಘೋಷಣೆ

ಅಳಿವಿನಂಚಿನಲ್ಲಿರುವ ಪ್ರಭೇದ: 
ಇತಿಹಾಸಪೂರ್ವ ನೋಟಕ್ಕೆ ಹೆಸರುವಾಸಿಯಾದ ಈ ದೈತ್ಯ ಮೀನು ಅಪರೂಪ ಮತ್ತು ಅಳಿವಿನಂಚಿನಲ್ಲಿದೆ. ಅವು ಸಾಮಾನ್ಯವಾಗಿ ಗಾಢ ಹಸಿರು ಅಥವಾ ಆಲಿವ್ ಬಣ್ಣವನ್ನು ಹೊಂದಿರುತ್ತವೆ. ಆದರೆ ಕಪ್ಪಗಿರುವ ಮೀನು ಕಾಣಸಿಗುವುದು ಇನ್ನೂ ವಿರಳ. ಸಂಪೂರ್ಣವಾಗಿ ಬೆಳೆದ ಅಲಿಗೇಟರ್ ಗಾರ್ ಭಯ ಸೃಷ್ಟಿಸುತ್ತದೆ. ಆದರೂ ಅವು ಮನುಷ್ಯರಿಗೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ. ಆದರೆ ಅವುಗಳ ಮೊಟ್ಟೆಗಳು ಜನರಿಗೆ ವಿಷಕಾರಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News