ಲಖಿಂಪುರ ಖೇರಿ: ಶಾಲೆಗೆ ತಡವಾಗಿ ಬಂದ ಶಿಕ್ಷಕಿಗೆ ಪ್ರಾಂಶುಪಾಲ ಬೂಟಿನಿಂದ ಹೊಡೆದಿರುವ ಘಟನೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.


COMMERCIAL BREAK
SCROLL TO CONTINUE READING

ಖೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಹಂಗು ಖೇರಾ ಶಾಲೆಯಲ್ಲಿ ಈ ಘಟನೆ ನಡೆದಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಶಾಲೆಗೆ ತಡವಾಗಿ ಬಂದಿದ್ದರು. ಇದರಿಂದ ಕುಪಿತರಾದ ಪ್ರಾಂಶುಪಾಲ ಶೂಗಳಿಂದ ಅವರನ್ನು ಥಳಿಸಿದ್ದಾರೆ. 20 ಸೆಕೆಂಡುಗಳ ವಿಡಿಯೋವನ್ನು ANI ಸುದ್ದಿಸಂಸ್ಥೆ ಹಂಚಿಕೊಂಡಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.


ಇದನ್ನೂ ಓದಿ: Video : ಕುಡಿದು ತೂರಾಡಿಕೊಂಡು ಹಸೆಮಣೆ ಏರಿದ ವರ..! ಹಾರ ಬದಲಾಯಿಸುವಾಗ ಮಾಡಿಯೇ ಬಿಟ್ಟ ಎಡವಟ್ಟು ..!


ಪ್ರಾಂಶುಪಾಲನನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಮೂಲ ಶಿಕ್ಷಾ ಅಧಿಕಾರಿ(ಬಿಎಸ್‌ಎ) ಲಕ್ಷ್ಮೀಕಾಂತ್ ಪಾಂಡೆ ಹೇಳಿದ್ದಾರೆ.


ಇದನ್ನೂ ಓದಿ: Shocking Viral Video: ಪ್ರಾಣ ಪಣಕ್ಕಿಟ್ಟು ವ್ಯಕ್ತಿಯ ಜೀವ ಉಳಿಸಿದ ರೈಲ್ವೇ ಉದ್ಯೋಗಿ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.