Rabbit Snake Fight Video : ಸಾಮಾಜಿಕ ಜಾಲತಾಣಗಳಲ್ಲಿ ಪ್ರಾಣಿಗಳ ಕಾದಾಟದ ಹಲವು ವಿಡಿಯೋಗಳನ್ನು ನೀವು ನೋಡಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ಹಾವು ಮತ್ತು ಮುಂಗುಸಿಗಳ ಕಾದಾಟದ ಅದೆಷ್ಟೋ ವಿಡಿಯೋಗಳು ಕಾಣಸಿಗುತ್ತವೆ. ಆದರೆ ಮೊಲ ಮತ್ತು ಹಾವಿನ ಕಾದಾಟದ ವಿಡಿಯೋಗಳನ್ನು ಎಂದಾದರೂ ನೋಡಿದ್ದೀರಾ? ಅಂತಹ ಒಂದು ವಿಡಿಯೋ ಇತ್ತೀಚಿನ ದಿನಗಳಲ್ಲಿ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ಹಾವಿನೊಂದಿಗೆ ಕಾದಾಟಕ್ಕಿಳಿದ ಪುಟ್ಟ ಮೊಲ :
ಚಿಕ್ಕ ಮೊಲವೊಂದು ಗದ್ದೆಯಲ್ಲಿ ಅಪಾಯಕಾರಿ ಹಾವಿನೊಂದಿಗೆ ಕಾದಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಕಳೆದ ಕೆಲವು ದಿನಗಳಿಂದ ಈ ವಿಡಿಯೋ ವೈರಲ್ ಆಗುತ್ತಿದೆ. ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಚಿಕ್ಕ ಮೊಲವು ವಿಷಕಾರಿ ಹಾವಿಗೆ ಹೆದರದೆ ಅದರೊಂದಿಗೆ ಗುದ್ದಾಡುತ್ತಿರುವುದನ್ನು ಇಲ್ಲಿ ಕಾಣಬಹುದು.  ಒಂದು ಸಲಕ್ಕೆ ಈ ವಿಡಿಯೋವನ್ನು ನೋಡಿದರೆ ಇದು ಮೊಲವೋ ಮುಂಗುಸಿಯೋ ಎಂದು ಸಂದೇಹ ಬರುವಷ್ಟರ ಮಟ್ಟಿಗೆ ಮೊಲ ಹಾವಿನೊಂದಿಗೆ ಕಾದಾಡುತ್ತದೆ. 


ಇದನ್ನೂ ಓದಿ :   Viral Video: ಪಂಕ್ಚರ್ ಅಂಗಡಿಯಲ್ಲಿ ಇದ್ದಕ್ಕಿದ್ದಂತೆ ಏನಾಗಿದೆ ನೋಡಿ..!


ಹಾವಿನ ದಾಳಿಗೆ ಮೊಲ ಪ್ರತಿದಾಳಿ ಮಾಡುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಹಾವಿನ ದಾಳಿಗೆ ಕಿಂಚಿತ್ತೂ ಹೆದರದ ಮೊಲ, ಪದೇ ಪದೇ ಪ್ರತಿದಾಳಿ ಮಾಡುತ್ತದೆ. ಕೊನೆಯಲ್ಲಿ, ಈ ಪುಟ್ಟ ಮೊಲವು ಆ ವಿಷಕಾರಿ ಪ್ರಾಣಿಯನ್ನು ಅಲ್ಲಿಂದ ಓಡಿಸುವುದರಲ್ಲಿ ಯಶಸ್ವಿಯಾಗುತ್ತದೆ. 


 


Shanghai Lockdown: ಕೊರೊನಾ ಲಾಕ್ಡೌನ್ ನಲ್ಲಿ ಮನೆಯಲ್ಲಿ ಬಂಧಿಯಾದ ಜನರ ಕಿರುಚಾಟ, Viral Video


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.