Slapping Game: ವಿಚಿತ್ರ ಆಟಕ್ಕಿಳಿದ ಹುಡುಗಿಯರಿಂದ ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ, ಇದೆಂಥಾ ಆಟ?
Slaping Game Video: ಚಿಕ್ಕವರಿರುವಾಗ ಮಕ್ಕಳು ತಮಾಷೆಗಾಗಿ ಇಂತಹ ಆಟವಾಡಿರಬಹುದು. ಆದರೆ, ದೊಡ್ಡವರಾದ ಮೇಲೆ ಯಾರೂ ಇಂತಹ ಆದವನ್ನು ಆಡಿರಲಿಕ್ಕಿಲ್ಲ. ದೊಡ್ಡವರಾದ ಮೇಲೂ ಕೂಡ ಯಾರಾದರು ಈ ರೀತಿಯ ಚಾಲೆಂಜ್ ತೆಗೆದುಕೊಂಡರೆ ಅವರನ್ನು ಮೂರ್ಖರೆಂದೇ ಕರೆಯಬಹುದು.
Slaping Game Video: ನೀವು ನಿಮ್ಮ ಜೀವನದಲ್ಲಿ ಹಲವು ವಿಚಿತ್ರ ರೀತಿಯ ಚಾಲೆಂಜ್ ಅಥವಾ ಆಟಗಳನ್ನು ನೋಡಿರಬಹುದು. ಆದರೆ, ಇಂದು ನಾವು ನಿಮಗೆ ತೋರಿಸಲು ಹೊರಟಿರುವ ಆಟವನ್ನು ನೋಡಿ ನಿಮ್ಮ ತಲೆ ಕೂಡ ಗಿರಕಿ ಹೊಡೆಯಲಿದೆ. ಏಕೆಂದರೆ ಇಂತಹ ಆಟ ನೀವು ಈ ಮೊದಲು ಎಂದಿಗೂ ಕೂಡ ವಿಕ್ಷೀಸಿರುವುದಿಲ್ಲ ಎಂಬುದು ನಮ್ಮ ಅನಿಸಿಕೆ. ಈ ಆಟವನ್ನು ನೋಡು ಒಂದು ಕ್ಷಣ ನಮ್ಮ ಮೆದುಳು ಕೆಲಸವನ್ನೇ ಮಾಡುವುದನ್ನು ನಿಲ್ಲಿಸಬಹುದು. ಏಕೆಂದರೆ, ಕಿವಿಯಲ್ಲಿ ಕುಂಯಿಗುಟ್ಟುವ ಸದ್ದು ಮಾತ್ರ ಕೇಳಿಸಲಿದೆ. ಇಲ್ಲಿ ವಿಶೇಷತೆ ಎಂದರೆ ಎರಡು ಯುವತಿಯರು ಈ ಆಟವನ್ನು ಆಡುತ್ತಿದ್ದಾರೆ.
ಪರಸ್ಪರರ ಕೆನ್ನೆಗೆ ಕಪಾಳಮೋಕ್ಷ ಮಾಡುವ ಇಂತಹ ಆಟವನ್ನು ನೀವು ಹಿಂದೆಂದೂ ಕೂಡ ವೀಕ್ಷಿಸಿರಲಿಕ್ಕಿಲ್ಲ. ಚಿಕ್ಕವರಿರುವಾಗ ಮಕ್ಕಳು ತಮಾಷೆಗಾಗಿ ಇಂತಹ ಆಟವಾಡಿರಬಹುದು. ಆದರೆ, ದೊಡ್ಡವರಾದ ಮೇಲೆ ಯಾರೂ ಇಂತಹ ಆದವನ್ನು ಆಡಿರಲಿಕ್ಕಿಲ್ಲ. ದೊಡ್ಡವರಾದ ಮೇಲೂ ಕೂಡ ಯಾರಾದರು ಈ ರೀತಿಯ ಚಾಲೆಂಜ್ ತೆಗೆದುಕೊಂಡರೆ ಅವರನ್ನು ಮೂರ್ಖರೆಂದೇ ಕರೆಯಬಹುದು. ಏಕೆಂದರೆ ಯಾರು ತಾನೇ ಏಟು ತಿನ್ನಲು ಇಷ್ಟಪಡುತ್ತಾರೆ ಹೇಳಿ, ವಿಡಿಯೋ ನೋಡಿ...
ಇದನ್ನೂ ಓದಿ-Parrot Video: ಟೀಗಾಗಿ ಹಿಂದಿಯಲ್ಲಿ 'ಅಮ್ಮಾ' ಎಂದು ಕರೆದ ವಿದೇಶಿ ಗಿಳಿ, ಅಮ್ಮನ ಉತ್ತರ ಕೇಳಿ ಮನಸೋತ ನೆಟ್ಟಿಗರು
ವಿಚಿತ್ರ ಆಟಕ್ಕಿಳಿದ ಯುವತಿಯರು
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಒಂದು ವಿಚಿತ್ರ ಆಟವನ್ನು ಆಡುತ್ತಿದ್ದಾರೆ. ಈ ಇಬ್ಬರು ಯುವತಿಯರು ಪರಸ್ಪರ ಕೆನ್ನೆಗೆ ಹೊಡೆಯುವ ಚಾಲೆಂಜ್ ತೆಗೆದುಕೊಂಡಿರುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು. ಬಳಿಕ ಇಬ್ಬರ ನಡುವ ಪರಸ್ಪರ ಕಪಾಳಮೋಕ್ಷ ಮಾಡುವ ಆಟ ಆರಂಭವಾಗುತ್ತದೆ. ಈ ಆಟದಲ್ಲಿ ಮೊದಲ ಕಪಾಳಮೋಕ್ಷ ಎಷ್ಟೊಂದು ತೀವ್ರವಾಗಿದೆ ಎಂದರೆ ಇಬ್ಬರು ಯುವತಿಯರು ನಿಂತಲ್ಲಿಯೇ ನಲುಗಿಹೋಗಿದ್ದಾರೆ ಎಂಬುದನ್ನು ನೀವು ವಿಡಿಯೋದಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ-OMG: ಮಾಲೆ ಹಾಕುವ ಬದಲು ವರನ ಕೊರಳಿಗೆ ಅಪಾಯಕಾರಿ ಹಾವನ್ನು ಹಾಕಿದ ವಧು, ವರ ಮಾಡಿದ್ದೇನು ಗೊತ್ತಾ?
ಇಷ್ಟಾದ ಬಳಿಕವೂ ಕೂಡ ಇಬ್ಬರು ಹಿಂದಕ್ಕೆ ಸರಿಯುವುದಿಲ್ಲ ಮತ್ತು ಪರಸ್ಪರರ ಮೇಲೆ ಕೆನ್ನೆಹೊಡೆತದ ಸುರಿಮಳೆಯನ್ನೇಗೈಯುತ್ತಾರೆ. ವಿಡಿಯೋದ ಆರಂಭದಲ್ಲಿ ನಗುಮೊಗದೊಂದಿಗೆ ಈ ಹುಡುಗಿಯರು ಪರಸ್ಪರರ ಮುಂದೆ ಬಂದು ನಿಲ್ಲುತ್ತಾರೆ ಮತ್ತು ಪರಸ್ಪರರ ಮೇಲೆ ತುಂಬಾ ಮಜಾ ಮಾಡುತ್ತಾ ಕಪಾಳಮೋಕ್ಷ ಮಾಡುತ್ತಾರೆ. ಈ ವಿಡಿಯೋವನ್ನು only._.sarcasm_ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಅಪ್ಲೋಡ್ ಮಾಡಲಾಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.