Viral video : ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿದಿನ ಸಾವಿರಾರು ವಿಡಿಯೋಗಳು ಅಪ್ಲೋಡ್ ಆಗುತ್ತವೆ. ಆದರೆ, ಎಲ್ಲಾ ವಿಡಿಯೋಗಳು ಜನಮೆಚ್ಚುಗೆ ಗಳಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ.   ಕೆಲವು ವೀಡಿಯೊಗಳು ಮಾತ್ರ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕ ಯುವತಿಯ ವಿಡಿಯೋಗಳು, ಶಾಲಾ ವಿದ್ಯಾರ್ಥಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ.  ಅದರಲ್ಲೂ ಇತ್ತೀಚೆಗೆ ವೈರಲ್ ಆಗಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯ ವಿಡಿಯೋ ವೀಕ್ಷಕರನ್ನು ಒಂದು ಕ್ಷಣ ಯೋಚನೆಗೆ ದೂಡುತ್ತವೆ.  ಜ್ನಾನಾರ್ಜನೆಗೆಂದು ಶಾಲೆಗೆ ಬರುವ ವಿದ್ಯಾರ್ಥಿಗಳು ತರಗತಿಗೆ ಬಂದು ಏನು ಕಲಿಯುತ್ತಿದ್ದಾರೆ ಎನ್ನುವುದೇ ಇಲ್ಲಿ ಪ್ರಶ್ನಾರ್ಥಕ. 


COMMERCIAL BREAK
SCROLL TO CONTINUE READING

ಬೆಚ್ಚಿ ಬೀಳಿಸುತ್ತದೆ ವಿದ್ಯಾರ್ಥಿಗಳ ವರ್ತನೆ : 
ವಿಡಿಯೋದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ತರಗತಿಯಲ್ಲಿ ಕುಳಿತು ಕೊಂಡಿರುವುದನ್ನು ಕಾಣಬಹುದು. ತಕ್ಷಣಕ್ಕೆ ನೋಡಿದರೆ ಇಬ್ಬರೂ ಕುಳಿತು ಓದುತ್ತಿದ್ದಾರೆ ಎನ್ನುವಂತೆ ಕಾಣಿಸುತ್ತದೆ. ಆದರೆ ಇಲ್ಲಿ ಹುಡುಗಿ ಹುಡುಗನಿಗೆ ಪಾಠ ಹೇಳಿಕೊಡುತ್ತಿದಾಳೋ ಅಥವಾ ಮಾತನಾಡುತ್ತಿದ್ದಾಳೋ ಗೊತ್ತಿಲ್ಲ.  ಹುಡುಗ ಮಾತ್ರ ಅವಳು ಏನು ಹೇಳುತ್ತಿದ್ದಾನೆ ಎನ್ನುವುದಕ್ಕೆ ಕಿವಿಯಾಗಿದ್ದಾನೆ. 


ಇದನ್ನೂ ಓದಿ : Viral Video : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು


ಬರೀ ಇಷ್ಟೇ ಆದರೆ ಯಾರೂ ಏನೂ ಹೇಳುತ್ತಿರಲಿಲ್ಲ. ಅದು ವೈರಲ್ ಆಗುತ್ತಿರಲೂ ಇಲ್ಲ. ಇಲ್ಲಿ ಹುಡುಗಿಯ ಕಾಲಿಗೆ ಹುಡುಗ ತರಗತಿಯಲ್ಲಿ ಕುಳಿತುಕೊಂಡು ಮಸಾಜ್ ಮಾಡುತ್ತಿದ್ದಾನೆ. ಅದು ಸ್ನೇಹವೋ, ಪ್ರೀತಿಯೋ ಏನೇ ಇರಲಿ. ಆದರೆ ತರಗತಿಯಲ್ಲಿ ಇಂಥ ನಡವಳಿಕೆಗಳು ಎಷ್ಟು ಸರಿ ಎನ್ನುವುದು ಪ್ರಶ್ನೆ. ಇಂಥ ಕೆಲವೊಂದು ವಿದ್ಯಾರ್ಥಿಗಳ ನಡವಳಿಕೆ ಬೇರೆ ವಿದ್ಯಾರ್ಥಿಗಳ ಮೇಲೇ ಕೂಡಾ ಪ್ರಭಾವ ಬೀರುತ್ತದೆ. 


 


 

 

 

 



 

 

 

 

 

 

 

 

 

 

 

A post shared by Psycho Bihari (@bihari.broo)


ಇದನ್ನೂ ಓದಿ : Trending Video : ಸೊಂಡಿಲಿನಿಂದ ಡ್ರಮ್ ನುಡಿಸುವ ಆನೆ.. ವಿಡಿಯೋ ವೈರಲ್‌


ಈ ವೀಡಿಯೋವನ್ನು bihari.brooandgiedde ಎಂಬ ಹೆಸರಿನ Instagram ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಬಹಳಷ್ಟು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಮಾತ್ರವಲ್ಲ ತಮಗೆ  ಬೇಕಾದಂತೆ ಕಾಮೆಂಟ್ ಕೂಡಾ ಮಾಡಿದ್ದಾರೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.