Viral Video : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು

Viral Video : ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿರುವುದನ್ನು ನೋಡಬಹುದು. ಆದರೆ ಅವನು ಒಬ್ಬನೇ ಅಲ್ಲ. ಬೈಕ್‌ನಲ್ಲಿ ಮಕ್ಕಳು ಸೇರಿದಂತೆ ಇನ್ನೂ ಐದಾರು ಮಂದಿ ಕಾಣಸಿಗುತ್ತಾರೆ. ಇಷ್ಟೇ ಅಲ್ಲ ಬೈಕಿನ ಮೇಲೆ ಎರಡು ನಾಯಿಗಳು ಮತ್ತು ಎರಡು ಕೋಳಿಗಳು ಸಹ ಇವೆ. 

Written by - Chetana Devarmani | Last Updated : Nov 24, 2022, 02:34 PM IST
  • 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ!
  • ಈ ಸವಾರಿ ಕಂಡು ಮೂವಿಸ್ಮಿತರಾದ ನೆಟ್ಟಿಗರು
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌
Viral Video : 6 ಜನ, 2 ಶ್ವಾನ, 2 ಕೋಳಿ ಬೈಕ್‌ ಮಾತ್ರ ಒಂದೇ! ಈ ಸವಾರಿ ಕಂಡು ಹೌಹಾರಿದ ನೆಟ್ಟಿಗರು  title=
ವಿಡಿಯೋ ವೈರಲ್‌

Viral Video : ಅನೇಕ ವಿಚಿತ್ರ ದೃಶ್ಯಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತವೆ. ರಸ್ತೆ ಅಪಘಾತ, ಕಳ್ಳತನ, ಪ್ರಾನಿಗಳ ವಿಡಿಯೋ ಹಿಗೆ ದಿನನಿತ್ಯ ಅನೇಕ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಸಿಗುತ್ತವೆ. ಆದರೆ ಈ ವಿಡಿಯೋ ನೋಡಿದ ಮೇಲೆ ನೆಟ್ಟಿಗರ ತಲೆ ಗಿರ್‌ ಅಂದಿದೆ. ಒಂದೇ ಒಂದು ಬೈಕ್‌ ಮೇಲೆ ಇಷ್ಟೆಲ್ಲಾ ಸಾಗಿಸಬಹುದಾ ಎಂಬ ಅಚ್ಚರಿಗೆ ಕಾರಣವಾಗಿದೆ. ಇದನ್ನೇನಾದರೂ ಸಂಚಾರಿ ಪೊಲೀಸರು ನೋಡಿದ್ರೆ ಅರೆಕ್ಷಣ ದಂಗಾಗುವುದು ಗ್ಯಾರಂಟಿ. 

ಇದನ್ನೂ ಓದಿ : FIFA World Cup 2022 ರಲ್ಲಿ ಮಗನ ಆಟ ಕಂಡು ತಾಯಿಯ ಸಂತೋಷ ನೋಡಿ!

ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಬೈಕ್ ಓಡಿಸುತ್ತಿರುವುದನ್ನು ನೋಡಬಹುದು. ಆದರೆ ಅವನು ಒಬ್ಬನೇ ಅಲ್ಲ. ಬೈಕ್‌ನಲ್ಲಿ ಮಕ್ಕಳು ಸೇರಿದಂತೆ ಇನ್ನೂ ಐದಾರು ಮಂದಿ ಕಾಣಸಿಗುತ್ತಾರೆ. ಇಷ್ಟೇ ಅಲ್ಲ ಬೈಕಿನ ಮೇಲೆ ಎರಡು ನಾಯಿಗಳು ಮತ್ತು ಎರಡು ಕೋಳಿಗಳು ಸಹ ಇವೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ‘ಹಮ್ ದೋ ಹುಮಾರೇ ದೋ’ ಎಂಬ ಜನಪ್ರಿಯ ಮಾತನ್ನು ಈ ವ್ಯಕ್ತಿ ಕೇಳಿಯೇ ಇಲ್ಲ ಎನಿಸುತ್ತೆ. 6 ಜನ, 2 ಶ್ವಾನ, 2 ಕೋಳಿ ಒಂದೇ ಒಂದು ಬೈಕ್‌ ಮೇಲೆ ಸವಾರಿ ಮಾಡುವ ಈ ವಿಡಿಯೋ ನೆಟ್ಟಿಗರ ಅಚ್ಚರಿಗೆ ಕಾರಣವಾಗಿದೆ.

 

 

ಈ ಕ್ಲಿಪ್ 258k ವೀಕ್ಷಣೆಗಳನ್ನು ಪಡೆದಿದೆ. ಅಲ್ಲದೇ ಸಾವಿರಾರು ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ರೀತಿ ಓವರ್‌ ಲೋಡ್‌ ಮಾಡಿಕೊಂಡು ಗಾಡಿ ಓಡಿಸುವುದು ಎಷ್ಟೊಂದು ಅಪಾಯಕಾರಿ ಎಂದು ಕೆಲವು ಜನರು ಒಂದು ನಿಮಿಷವೂ ಯೋಚಿಸುವುದಿಲ್ಲ ಎಂದು ತೋರುತ್ತದೆ. ಈ ವಿಡಿಯೋ ಫನ್ನಿಯಾಗಿದ್ದರು ಟ್ರಾಫಿಕ್‌ ರೂಲ್ಸ್‌ ಮತ್ತು ಜೀವದ ಮಹತ್ವವನ್ನು ಸಾರುತ್ತಿದೆ. 

ಇದನ್ನೂ ಓದಿ : ದೇವರಾಣೆಗೂ ನಾನಲ್ಲಿಗೆ ಬರಲ್ಲ.. ನೀನೇ ಬಂದು ಕೊಡು.: ಸಖತ್‌ ಫನ್ನಿಯಾಗಿದೆ ಈ ವಿಡಿಯೋ..!

"ಇದು ಅತ್ಯಂತ ಅಪಾಯಕಾರಿ," ಎಂದು ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. "ಅನೇಕ ಜೀವಗಳನ್ನು ಏಕೆ ಅಪಾಯಕ್ಕೆ ದೂಡಿದ್ದೀರಾ?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. "ಅತ್ಯಂತ ಮೂರ್ಖತನ. ಈ ಜನರಿಗೆ ಭಾರಿ ದಂಡ ವಿಧಿಸಬೇಕು" ಎಂದು ಇನ್ನೋರ್ವ ನೆಟ್ಟಿಗ ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News