Trending Video: ಸಾಮಾಜಿಕ ಮಾಧ್ಯಮಗಳಲ್ಲಿ ಯಾವಾಗ ಯಾವ ಸಂಗತಿ ವೈರಲ್ ಆಗುತ್ತದೆ ಎಂಬುದನ್ನು ಹೇಳುವುದು ಸ್ವಲ್ಪ ಕಷ್ಟಸಾಧ್ಯ, ಇವುಗಳಲ್ಲಿ ಹಲವು ಸಂಗತಿಗಳು ಸಾಕಷ್ಟು ತಮಾಷೆಯಿಂದ ಕೂಡಿರುತ್ತವೆ ಮತ್ತು ಕೆಲ ವಿಡಿಯೋಗಳನ್ನೂ ನೋಡಿ ಮೈಮೇಲಿನ ರೂಮಗಳೇ ಎದ್ದು ನಿಲ್ಲುತ್ತವೆ.ವೈರಲ್ ಆಗುವ ಇಂತಹ ವಿಡಿಯೋಗಳನ್ನು ನೋಡುವಲ್ಲಿ ಜನರು ತಮ್ಮ ಇಡೀ ದಿನವನ್ನೇ ಕಳೆಯುತ್ತಾರೆ. ಈ ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ಅವರು ಸಾಮಾಜಿಕ ವೇದಿಕೆಯಲ್ಲಿ ಭಾರಿ ಚರ್ಚೆಯನ್ನೇ ನಡೆಸುತ್ತಾರೆ. ಅಂತಹುದೇ ಒಂದು ವಿಡಿಯೋ ಇದೀಗ ಜನರಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸುತ್ತಿದೆ, ಇದರಲ್ಲಿ ಎರಡು ಗೂಳಿಗಳ ನಡುವೆ ಅಪಾಯಕಾರಿ ಕಾಳಗ ನಡೆಯುತ್ತಿದೆ. ಈ ಆಘಾತಕಾರಿ ವಿಡಿಯೋ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ ಮತ್ತು ಅದರ ಮೇಲೆ ಸಾಕಷ್ಟು ಚರ್ಚೆಗಳನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ-Viral Video : ಕತ್ತೆಯನ್ನು ಬೆನ್ನಿನ ಮೇಲೆ ಹೊತ್ತು ಬಸ್ ಮೇಲೆ ಹತ್ತಿದ ವ್ಯಕ್ತಿ!
ಪ್ರಾಣಿಗಳ ನಡುವೆಯೂ ಕೂಡ ಅಪಾಯಕಾರಿ ಕಾದಾಟ ನಡೆಯುತ್ತಿದೆ ಎಂಬ ಸಂಗತಿ ನಮ್ಮೆಲ್ಲರಿಗೂ ತಿಳಿದೇ ಇದೆ. ನಮ್ಮ ಸುತ್ತಲೂ ಕೂಡ ಪ್ರಾಣಿಗಳು ಜಗಳವಾಡುವುದನ್ನು ನಾವು ನೋಡುತ್ತೇವೆ. ಆದರೆ, ಕೆಲ ಪ್ರಾಣಿಗಳು ಜಗಳವಾಡುತ್ತಿದ್ದಾಗ, ಜನರು ಅವುಗಳನ್ನು ನೋಡಿ ಗಾಬರಿಗೊಂಡು ಅಲ್ಲಿಂದ ಓಡಿಹೋಗುತ್ತಾರೆ. ಈ ವೈರಲ್ ವೀಡಿಯೊದಲ್ಲಿ ನೀವು ಅಂತಹ ದೃಶ್ಯವನ್ನು ನೋಡಬಹುದು. ನಡುರಸ್ತೆಯಲ್ಲಿಯೇ ಎರಡು ಗೂಳಿಗಳ ನಡುವೆ ಕಾದಾಟ ನಡೆದಿರುವುದನ್ನು ವಿಡಿಯೋದಲ್ಲಿ ನೀವು ಕಾಣಬಹುದು. ಎರಡೂ ಗೂಳಿಗಳು ಬಿರುಸಿನಿಂದ ಪರಸ್ಪರ ದಾಳಿ ಮಾಡುತ್ತಿವೆ. ಗೂಳಿಗಳ ಕಾದಾಟ ಕಂಡು ಜನರೂ ಅಲ್ಲಿಂದ ಓಡಿ ಹೋಗಿದ್ದಾರೆ. ಎರಡೂ ಗೂಳಿಗಳು ಕಾದಾಡುತ್ತಿರುವ ರೀತಿ ತುಂಬಾ ಅಪಾಯಕಾರಿಯಾಗಿತ್ತು. ಇದೇ ವೇಳೆ ಅದರ ಫಲಿತಾಂಶ ಕೂಡ ಮತ್ತಷ್ಟು ಆಶ್ಚರ್ಯ ಹುಟ್ಟಿಸುವಂತಿದೆ. ವಿಡಿಯೋ ನೋಡಿ..
ಇದನ್ನೂ ಓದಿ-Peacock Viral Video: ಹಚ್ಚ ಹಸಿರಿನ ಮಧ್ಯೆ ಗರಿಬಿಚ್ಚಿ ಕುಣಿದಾಡಿದ ನವಿಲು: ಎಷ್ಟೊಂದು ಸುಂದರ ಈ ದೃಶ್ಯ
ಈ ವೀಡಿಯೋ ನೋಡಿ ನೀವೂ ಬೆಚ್ಚಿ ಬಿದ್ದಿರಬಹುದು. ಈ ಕಾದಾಟದ ವೀಡಿಯೊವನ್ನು Instagram ನಲ್ಲಿ 'i_am_arun_78' ಹೆಸರಿನ ಖಾತೆಯೊಂದಿಗೆ ಹಂಚಿಕೊಳ್ಳಲಾಗಿದೆ. ಇದುವರೆಗೆ ಲಕ್ಷಾಂತರ ಮಂದಿ ವಿಡಿಯೋ ವೀಕ್ಷಿಸಿದ್ದಾರೆ. ಆದರೆ, 65 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಇದೇ ವೇಳೆ ಕೆಲ ಜನರು ಮೋಜು ಮಾಡುತ್ತಲೇ ವೀಡಿಯೊಗೆ ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಇಂತಹ ದೃಶ್ಯವನ್ನು ಮೊದಲ ಬಾರಿಗೆ ನೋಡಿದ್ದೇವೆ ಎಂದು ಹೇಳುತ್ತಾರೆ. ಆದರೆ, ಫಲಿತಾಂಶವು ನಿಜವಾಗಿಯೂ ಅಪಾಯಕಾರಿ ಎಂದು ಕೆಲವರು ಹೇಳುತ್ತಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.