Stray Dog Bite: ಜನನಿಬಿಡ ರಸ್ತೆಯಲ್ಲಿ ಬೀದಿ ನಾಯಿಯೊಂದು ಭಯಭೀತಗೊಂಡು ಒಂದು ಗಂಟೆಯೊಳಗೆ ಸುಮಾರು 29 ಜನರನ್ನು ಕಚ್ಚಿರುವ ಘಟನೆ ಮಂಗಳವಾರ (ನ.21, 2023) ಸಂಜೆ ಚೆನ್ನೈನ  ಜಿಎ ರಸ್ತೆಯ ರಾಯಪುರಂ ಪ್ರದೇಶದಲ್ಲಿ ನಡೆದಿದೆ. ಬಳಿಕ ಸ್ಥಳೀಯರೇ ಆ ನಾಯಿಯನ್ನು ಥಳಿಸಿ ಕೊಂದಿದ್ದಾರೆ ಎಂದು ವರದಿಯಾಗಿದೆ. 


COMMERCIAL BREAK
SCROLL TO CONTINUE READING

ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಉತ್ತರ ಚೆನ್ನೈನ ರಾಯಪುರಂ ಪ್ರದೇಶದ ಬಹುಪಾಲು ವಾಣಿಜ್ಯ ಪ್ರದೇಶವಾಗಿದೆ. ಇಲ್ಲಿ ಮಲಗಿದ್ದ ನಾಯಿಯೊಂದು ಇದ್ದಕ್ಕಿದ್ದಂತೆ ಎದ್ದು ಪಾದಚಾರಿಗಳ ಮೇಲೆ ದಾಳಿ ಮಾಡಿತು. ರಸ್ತೆಯಲ್ಲಿ ಚಲಿಸುತ್ತಿದ್ದ ಪಾದಚಾರಿಗಳನ್ನು ಅಟ್ಯಾಕ್ ಮಾಡಿ ಅವರ ಮೊಣಕಾಲು, ಪಾದಗಳನ್ನು ಕಚ್ಚಿತು. ಈ ಸಂದರ್ಭದಲ್ಲಿ ಬಿಡಿಸಲು ಎಷ್ಟೇ ಪ್ರಯತ್ನಿಸಿದರು ಸಹ ನಾಯಿಯಿಂದ ಸಂತ್ರಸ್ತರನ್ನು ಬಿಡಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ. 


ಘಟನೆ ಬಳಿಕ ಸ್ಥಳೀಯರ ಥಳಿತದಿಂದ ನಾಯಿ ಸಾವನ್ನಪ್ಪಿದ್ದು, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಸತ್ತ ನಾಯಿಯನ್ನು ಮರಣೋತ್ತರ ಪರೀಕ್ಷೆಗಾಗಿ,  ಮದ್ರಾಸ್ ಪಶುವೈದ್ಯಕೀಯ ಕಾಲೇಜಿಗೆ ವರ್ಗಾಯಿಸಿದೆ. ಇನ್ನೆರಡು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬರಲಿದೆ ಎಂದು ಜಿಸಿಸಿ ಪಶುವೈದ್ಯಾಧಿಕಾರಿ ಡಾ. ಕಮಲ್ ಹುಸೇನ್ ಹೇಳಿದ್ದಾರೆ. 


ಇದನ್ನೂ ಓದಿ- Viral Video: ಹೆಮ್ಮರದಲ್ಲಿ ಉಕ್ಕಿ ಹರಿದ ನೀರು.. ಪ್ರಕೃತಿ ವಿಸ್ಮಯದ ವಿಡಿಯೋ ಒಮ್ಮೆ ನೋಡಿ


"ನಾಯಿ ಪ್ರಚೋದಿತ ಆಕ್ರಮಣವನ್ನು ತೋರಿರುವುದರಿಂದ ಇದು ರೇಬೀಸ್ ಸೋಂಕಿಗೆ ಒಳಗಾಗಿರಬಹುದು ಎಂದು ಶಂಕೆ ವ್ಯಕ್ತವಾಗಿದ್ದು, ಇದು ಜನರ ಆತಂಕವನ್ನು ಹೆಚ್ಚಿಸಿದೆ." ಆದಾಗ್ಯೂ, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸತ್ಯಾಸತ್ಯಗೆ ಹೊರಬೀಳಲಿದೆ. 


ದಾಳಿಗೊಳಗಾದವರಲ್ಲಿ, 24 ವರ್ಗದ ಮೂರು ಕಡಿತಗಳನ್ನು ಹೊಂದಿತ್ತು, ಇದರರ್ಥ ಆಳವಾದ ಕಡಿತ ಮತ್ತು ರಕ್ತಸ್ರಾವದ ಜೊತೆಗೆ ನಾಯಿಯಿಂದ ಮನುಷ್ಯನಿಗೆ ಲಾಲಾರಸ ವರ್ಗಾವಣೆಯಾಗಬಹುದು. ಗಾಯಗೊಂಡವರಲ್ಲಿ ಹತ್ತು ಮಂದಿ ಶಾಲಾ ಮಕ್ಕಳು. ಕೆಲ ಹಿರಿಯ ನಾಗರಿಕರು ಬಿದ್ದು ತಲೆ ನೋವು ಮಾಡಿಕೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ರಾತ್ರೋರಾತ್ರಿ ಸಮೀಪದ ಸರ್ಕಾರಿ ಸ್ಟಾನ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.


ಇದನ್ನೂ ಓದಿ- ಭಾರತದ ಈ ಹಳ್ಳಿಯಲ್ಲಿ ಇಂದಿಗೂ ಮಹಿಳೆಯರು ಬಟ್ಟೆ ಧರಿಸಲ್ಲ..! ಕಾರಣ ಏನ್‌ ಗೊತ್ತಾ..?


ಘಟನೆಯ ನಂತರ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಆರು ನಾಯಿಮರಿಗಳನ್ನು ಒಳಗೊಂಡಂತೆ 32 ನಾಯಿಗಳನ್ನು ರೇಬೀಸ್‌ಗಾಗಿ ವೀಕ್ಷಣೆಯಲ್ಲಿ ಇರಿಸಿದೆ ಎಂದು ವರದಿಯೊಂದು ತಿಳಿಸಿದೆ.


TANUVAS ಪ್ರೊಫೆಸರ್ ಮತ್ತು ಪಶುವೈದ್ಯಕೀಯ ತಜ್ಞ ಎಂ ಬಾಲಗಂಗಾತರತಿಲಗಾರ್ ಅವರು 12 ಗಂಟೆಗಳ ಒಳಗೆ ಅಪ್ರಚೋದಿತ ನಾಯಿ ಕಡಿತಕ್ಕೆ ಒಳಗಾದವರು ಆಂಟಿ-ರೇಬಿಸ್ ಇಮ್ಯುನೊಗ್ಲಾಬ್ಯುಲಿನ್ ಸೀರಮ್ ಮತ್ತು ಲಸಿಕೆಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.