Viral Video : ಹಾವಿನ ಜೊತೆ ಹುಚ್ಚಾಟ ತಲೆಕೆಟ್ಟು ಸರ್ಪ ಕಚ್ಚಿದ್ದೆಲ್ಲಿ ನೋಡಿ..
Viral Video : ಸಾಮಾನ್ಯವಾಗಿ ಮನುಷ್ಯರಿಗೆ ಕಾಡು ಪ್ರಾಣಿಗಳ ಬಗ್ಗೆ ಮೋಹ ಇರುತ್ತದೆ. ಅದಕ್ಕೆ ಕಾರಣ ಕಾಡುಪ್ರಾಣಿಗಳ ಸ್ವಭಾವದಿಂದ ನಾವು ಹತ್ತಿರಕ್ಕೆ ಹೋಗಲು ಸಾಧ್ಯವಿಲ್ಲ. ಮನುಷ್ಯರು ಯಾವಾಗಲೂ ಭಯಾನಕ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೆ.
Viral Video : ಸಾಮಾನ್ಯವಾಗಿ ಮನುಷ್ಯರಿಗೆ ಕಾಡು ಪ್ರಾಣಿಗಳ ಬಗ್ಗೆ ಮೋಹ ಇರುತ್ತದೆ. ಅದಕ್ಕೆ ಕಾರಣ ಕಾಡುಪ್ರಾಣಿಗಳ ಸ್ವಭಾವದಿಂದ ನಾವು ಹತ್ತಿರಕ್ಕೆ ಹೋಗಲು ಸಾಧ್ಯವಿಲ್ಲ. ಮನುಷ್ಯರು ಯಾವಾಗಲೂ ಭಯಾನಕ ವಿಷಯದಲ್ಲಿ ಆಸಕ್ತಿ ಹೊಂದಿರುತ್ತಾರೆ. ಹಾಗೆ ನೋಡಿದರೆ ಹೆಚ್ಚಿನವರಿಗೆ ಹಾವುಗಳೆಂದರೆ ಭಯ. ಆದರೆ ನಾಗರಹಾವಿನ ಸಿನಿಮಾವನ್ನು ಆಸಕ್ತಿಯಿಂದ ನೋಡುತ್ತಾರೆ. ಅದೇ ರೀತಿ ಹಾವಿನ ವಿಡಿಯೋವೊಂದು ಅಂತರ್ಜಾಲ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : Viral Video : ತನ್ನಪಾಡಿಗೆ ನಿಂತಿದ್ದ ಎಮ್ಮೆಯನ್ನು ಕೆಣಕಿದವನ ಸ್ಥಿತಿ ಏನಾಯ್ತು ನೋಡಿ!
ಪ್ರತಿದಿನ ಹಲವಾರು ಪ್ರಾಣಿಗಳ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಬೇಕರು ಈ ವಿಷಸರ್ಪಗಳ ಜೊತೆ ಸೆಣೆಸಾಡುವುದನ್ನು ನೋಡಬಹುದು. ಮತ್ತೆ ಕೆಲವರು ಸುಖಾ ಸುಮ್ಮನೆ ಅವುಗಳ ತಂಟೆಗೆ ಹೋಗಿ ಹಾನಿ ಮಾಡಿಕೊಳ್ಳುವುದನ್ನು ಕಾಣಬಹುದು. ಇದೀಗ ಇಲ್ಲೊಬ್ಬ ವ್ಯಕ್ತಿ ಹಾವಿನ ಜತೆ ಹುಚ್ಚಾಟ ಆಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.
ವ್ಯಕ್ತಿಯೊಬ್ಬ ಹಾವನ್ನು ಹಿಡಿದು ಎಳೆದಾಡುವ ದೃಶ್ಯವನ್ನು ನೋಡಬಹುದು. ಈ ವಿಡಿಯೋದಲ್ಲಿ ಆತ ಆಗಾಗ ಹಾವಿನ ಬಾಲವನ್ನು ಎಳೆಯುವುದನ್ನು ನೋಡಬಹುದು. ಇದರಿಂದ ಸಿಟ್ಟಿಗೆದ್ದ ಹಾವು ಸ್ವಲ್ಪವೂ ಯೋಚಿಸದೆ ಆತನಿಗೆ ಕಚ್ಚಿತು. ಸದು ಕಚ್ಚಬಾರದ ಜಾಗಕ್ಕೆ ಕಚ್ಚಿದೆ. ಈ ವಿಡಿಯೋ ನೋಡಿದಾಗ ಯಾವುದೋ ಪೈಪೋಟಿ ನಡೆಯುತ್ತಿದ್ದಂತೆ ತೋರುತ್ತದೆ. ಆ ಸ್ಪರ್ಧೆಯು ಮನುಷ್ಯ ಮತ್ತು ಹಾವಿನ ನಡುವೆ ಇರುವಂತೆ ಕಾಣುತ್ತದೆ.
ಇದೀಗ ಈ ವಿಡಿಯೋವನ್ನು snake._.world ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಸಾವಿರಾರು ವೀಕ್ಷಣೆಗಳು ಮತ್ತು ಲೈಕ್‌ಗಳನ್ನು ಪಡೆಯುತ್ತಿದೆ. ಈ ವಿಡಿಯೋ ನೋಡಿ ಬೆಚ್ಚಿಬಿದ್ದ ನೆಟ್ಟಿಗರು ಇದಕ್ಕೆ ನಾನಾ ರೀತಿಯ ಕಮೆಂಟ್ ಗಳನ್ನು ಹಾಕುತ್ತಿದ್ಧಾರೆ.
ಇದನ್ನೂ ಓದಿ : Viral Video : ಅಡುಗೆ ಮನೆಯ ಸಿಲೆಂಡರ್ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.