Snake Egg Hatching Viral Video: ಹಾವಿನ ಬಗ್ಗೆ ನಮಗೆ ಗೊತ್ತಿಲ್ಲದ ಅನೇಕ ಸಂಗತಿಗಳಿವೆ. ಹಾವು ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಹಾವಿನ ಮೊಟ್ಟೆಯಿಂದ ಮರಿ ಹೇಗೆ ಹೊರ ಬರುತ್ತದೆ ಎಂಬ ವಿಡಿಯೋ ಸದ್ಯ ವೈರಲ್‌ ಆಗುತ್ತಿದೆ. ಹಾವು ಒಂದು ವಿಭಿನ್ನ ಜೀವಿ. ಸುಲಭವಾಗಿ ಇದರ ಮೊಟ್ಟೆ, ಮರಿಗಳು ಕಾಣ ಸಿಗುವುದಿಲ್ಲ. ಅಂಥದ್ದರಲ್ಲಿ ಹಾವಿನ ಮೊಟ್ಟೆ ಒಡೆದು ಮರಿ ಹೊರ ಬರುವ ದೃಶ್ಯ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ. 


COMMERCIAL BREAK
SCROLL TO CONTINUE READING

ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ. ಹಲವಾರು ವಿಡಿಯೋಗಳು ವೈರಲ್‌ ಆಗುತ್ತವೆ. ಅದರಲ್ಲೂ ಹಾವಿನ ವಿಡಿಯೋ ಜನರ ಫೆವರೇಟ್‌ ಲಿಸ್ಟ್‌ನಲ್ಲಿರುತ್ತವೆ. ಹಾವಿನ ಬಗ್ಗೆ ಕುತೂಹಲಕಾರಿ ವಿಚಾರಗಳು ವೈರಲ್‌ ಆಗುತ್ತವೆ.  


ಇದನ್ನೂ ಓದಿ: ನಾಗಮಣಿ ರಕ್ಷಿಸುತ್ತಿರುವ ಕಿಂಗ್ ಕೋಬ್ರಾ.. ಅಪರೂಪದ ಕಪ್ಪು ಕಾಳಿಂಗನ ವಿಡಿಯೋ ವೈರಲ್.!


ಹಾವುಗಳು ಅತ್ಯಂತ ಅಪಾಯಕಾರಿ ಸರೀಸೃಪಗಳಾಗಿವೆ. ಹಾಗಾಗಿಯೇ ಸಾಮಾಜಿಕ ಜಾಲತಾಣಗಳಲ್ಲಿ ಹಾವಿನ ವಿಡಿಯೋಗಳಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಹಾವುಗಳ ಮೊಟ್ಟೆಗಳು 55 ರಿಂದ 60 ದಿನಗಳಲ್ಲಿ ಹೊರಬರುತ್ತವೆ. ಹಾವುಗಳು 2 ರಿಂದ 4 ವರ್ಷಗಳಲ್ಲಿ ಪೂರ್ಣ ಪ್ರಬುದ್ಧತೆಯನ್ನು ತಲುಪುತ್ತವೆ. 



ಇದೀಗ ಹಾವಿನ ಮೊಟ್ಟೆ ಒಡೆದು ಮರಿ ಹೊರ ಬರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಅನಿಮಲ್ ಪರ್ಫೆಕ್ಟ್ ಎಂಬ ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡ ವೀಡಿಯೊ ಆಗಿದೆ. ಈ ವಿಡಿಯೋದಲ್ಲಿ 9 ಮೊಟ್ಟೆಗಳು ಒಡೆದು ಹಾವಿನ ಮರಿಗಳು ಹೊರಬರುವುದನ್ನು ನೋಡಬಹುದು. ಈ ಮೊಟ್ಟೆಗಳಿಂದ ದೊಡ್ಡ ಹಾವು ಸಹ ಹೊರಬರುವುದನ್ನು ಕಾಣಬಹುದು. ಈ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದೆ.


ಇದನ್ನೂ ಓದಿ: Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.