Snake gaurding Nagamani Viral Video: ಹಾವು ಸರಿಸೃಪ ಜೀವಿ. ಇವು ತೆವಳುತ್ತ ಸಾಗುತ್ತವೆ. ತಮಗೆ ಅಪಾಯವಿದೆ ಎನಿಸಿದಲ್ಲಿ ಹೆಡೆ ಎತ್ತಿ ನಿಲ್ಲುತ್ತವೆ. ಹಾವಿನ ಹಲವು ಅಪರೂಪದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತವೆ. ಹಾವುಗಳ ಲೋಕದ ಕುತೂಹಲಕಾರಿ ಸಂಗತಿ ಎಂದರೆ ಅದು ನಾಗಮಣಿ. 


COMMERCIAL BREAK
SCROLL TO CONTINUE READING

ನಾಗಮಣಿ ಬಗ್ಗೆ ಪ್ರಾಚೀನ ಭಾರತದ ಪುರಾಣಗಳಲ್ಲಿ ಸಾಕಷ್ಟು ಉಲ್ಲೇಖವಿದೆ. ನಾಗಮಣಿ ಒಂದು ವಿಶೇಷ ರತ್ನ. ನಾಗ ಮಾಣಿಕ್ಯ, ನಾಗ ರತ್ನಂ ಎಂದು ಸಹ ಕೆಲವರು ಕರೆಯುತ್ತಾರೆ. ಇದು ನಾಗ ಲೋಕದಿಂದ ಬರುವ ರತ್ನ ಎಂಬ ನಂಬಿಕ ಹಲವರದ್ದು. ನಾಗಮಣಿ ಅಷ್ಟು ಸುಲಭವಾಗಿ ಬರಿಗಣ್ಣಿಗೆ ನೋಡಲು ಸಿಗುವುದಿಲ್ಲ. 


ನಾಗಮಣಿ ಎಂಬ ಈ ವಿಶೇಷ ರತ್ನ ನಾಗರ ಹಾವಿನ ತಲೆ ಮೇಲೆ ಅಂದರೆ ಹೆಡೆಯ ಮೇಲ್ಭಾಗದಲ್ಲಿ ಇರುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿದೆ. ಪುರಾಣಗಳ ಪ್ರಕಾರ, ನಾಗಮಣಿ ಪಾತಾಳದಲ್ಲಿರುವ ನಾಗಲೋಕದಲ್ಲಿ 9 ವಿಧದ ನಾಗಗಳ ತಲೆಯ ಮೇಲೆ ಕಂಡುಬರುತ್ತವೆ.


ಇದನ್ನೂ ಓದಿ: Viral Video: ಸೆಲ್ಫಿ ತೆಗೆದುಕೊಳ್ಳಲು ಬಂದ ಸ್ವಚ್ಛತಾ ಸಿಬ್ಬಂದಿಗೆ ಹಿಂಗ್ಯಾಕ್‌ ಮಾಡಿದ್ರು ರೋಜಾ!


ಈ ನಾಗಮಣಿ ವಿಶೇಷವಾದ ಬೆಳಕನ್ನು ಹೊರಸೂಸುತ್ತದೆ. ಈ ಬೆಳಕಿನಿಂದಲೇ ನಾಗಗಳು ಕತ್ತಲೆಯಲ್ಲಿ ಚಲಿಸಬಹುದು ಎಂದು ಹೇಳಲಾಗುತ್ತದೆ. ನಾಗಮಣಿಯನ್ನು ತಲೆಯ ಮೇಲೆ ಧರಿಸಿದ ಹಾವುಗಳು ಅಪಾಯದ ಸಂದರ್ಭದಲ್ಲಿ ಅದನ್ನು ನುಂಗುತ್ತವಂತೆ. ಈಗ ಹಾವಿನ ಜೊತೆಗೆ ನಾಗಮಣಿ ಇರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಜನರಲ್ಲಿ ಅಚ್ಚರಿ ಮೂಡಿಸಿದೆ. 


Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಾಗರಹಾವು; ಇದು ಪವಾಡ ಎಂದ ಭಕ್ತರು!


ಕಪ್ಪು ಕಾಳಿಂಗ ಸರ್ಪವೊಂದು ನಾಗಮಣಿ ಕಾಯುತ್ತ ಕಾವಲು ಕುಳಿತ ವಿಡಿಯೋ ವೈರಲ್‌ ಆಗಿದೆ. ರಾತ್ರಿಯ ಹೊತ್ತಿನಲ್ಲಿ ಆ ಹಾವು ನಾಗಮಣಿ  ಕಾವಲು ಕಾಯುತ್ತಿದೆ. ವಿಡಿಯೋ ನೋಡಿದವರು ಶಾಕ್ ಆಗಿದ್ದಾರೆ. ಈ ವಿಡಿಯೋವನ್ನು  ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇದು ಎಲ್ಲಿ ಯಾವಾಗ ಸೆರೆಯಾಗಿದ್ದು ಎಂಬ ಮಾಹಿತಿ ಇಲ್ಲ. (ಸೂಚನೆ: ಇದು ಕೇವಲ ವೈರಲ್‌ ವಿಡಿಯೋ ಆಗಿದೆ. ಇದರ ಸತ್ಯಾಸತ್ಯತೆಯನ್ನು Zee Kannada News ಖಚಿತಪಡಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.