Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಾಗರಹಾವು; ಇದು ಪವಾಡ ಎಂದ ಭಕ್ತರು!

King Cobra Snake Spotted at Shiva Linga: ಪಾತಾಳ ಗಂಗೆಯಲ್ಲಿ ಪುರಾತನ ಚಂದ್ರಲಿಂಗೇಶ್ವರ ಸ್ವಾಮಿಯ ದೇವಾಲಯವಿದೆ. ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪಾತಾಳ ಗಂಗೆಯಲ್ಲಿರುವ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುಕೊಂಡಿರುವುದನ್ನು ಕಾಣಬಹುದು.

Written by - Puttaraj K Alur | Last Updated : Jul 16, 2024, 07:48 PM IST
  • ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯ ದೇವಾಲಯದಲ್ಲಿ ಕಾಣಿಸಿಕೊಂಡ ನಾಗರಹಾವು
  • ಪಾತಾಳ ಗಂಗೆಯ ಪುರಾತನ ಚಂದ್ರಲಿಂಗೇಶ್ವರನ ಶಿವಲಿಂಗಕ್ಕೆ ಸುತ್ತಿಕೊಂಡ ನಾಗಪ್ಪ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌, ಇದು ಪವಾಡವೆಂದ ಭಕ್ತರು
Viral Video: ಶಿವಲಿಂಗಕ್ಕೆ ಸುತ್ತಿಕೊಂಡ ನಾಗರಹಾವು; ಇದು ಪವಾಡ ಎಂದ ಭಕ್ತರು! title=
ಶಿವಲಿಂಗಕ್ಕೆ ಸುತ್ತಿಕೊಂಡ ನಾಗಪ್ಪ!

Viral Video: ದೇವಾಲಯದಲ್ಲಿ ಬೃಹತ್ ನಾಗರಹಾವೊಂದು ಕಾಣಿಸಿಕೊಂಡು ಭಕ್ತರ ಗಮನ ಸೆಳೆದಿರುವ ಘಟನೆ ಆಂಧ್ರಪ್ರದೇಶದ ಶ್ರೀಶೈಲಂ ಜಿಲ್ಲೆಯಲ್ಲಿ ನಡೆದಿದೆ. ದೇವಾಲಯದಲ್ಲಿರುವ ಶಿವಲಿಂಗಕ್ಕೆ ಸುತ್ತಿಕೊಂಡ ಈ ನಾಗರಹಾವು ಭಕ್ತರಿಗೆ ಅಚ್ಚರಿ ಮೂಡಿಸಿದೆ.

ಇದು ಶ್ರೀಶೈಲಂ ಜಿಲ್ಲೆಯ ಪಾತಾಳ ಗಂಗೆಯ ದೇವಸ್ಥಾನದ ವಿಡಿಯೋ ಎಂದು ಹೇಳಲಾತ್ತಿದೆ. ಶಿವಲಿಂಗಕ್ಕೆ ನಾಗಪ್ಪ ಸುತ್ತಿಕೊಂಡಿರುವ ದೃಶ್ಯವನ್ನು ಕೆಲವು ಭಕ್ತರು ತಮ್ಮ ಮೊಬೈಲ್‌ನಲ್ಲಿ ಸರೆ ಹಿಡಿದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದು ಈಗ ಸಖತ್‌ ವೈರಲ್‌ ಆಗುತ್ತಿದೆ.    

ಇದನ್ನೂ ಓದಿ: ಅನಂತ್- ರಾಧಿಕಾ ದಂಪತಿಗೆ ಶುಭಕೋರಿದ ಧೋನಿ..! ಒಂದೇ ದಿನದಲ್ಲಿ ಒಂದು ಕೋಟಿ ಲೈಕ್ಸ್ ಪಡೆದುಕೊಂಡ ಪೋಸ್ಟ್..!

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪಾತಾಳ ಗಂಗೆಯಲ್ಲಿರುವ ಚಂದ್ರಲಿಂಗದ ಸುತ್ತಲೂ ನಾಗರಹಾವು ಸುತ್ತುಕೊಂಡಿರುವುದನ್ನು ಕಾಣಬಹುದು. ಪಾತಾಳ ಗಂಗೆಯಲ್ಲಿ ಪುರಾತನ ಚಂದ್ರಲಿಂಗೇಶ್ವರ ಸ್ವಾಮಿಯ ದೇವಾಲಯವಿದೆ. ಇಲ್ಲಿಗೆ ಬರುವ ಸಾವಿರಾರು ಭಕ್ತರು ಪ್ರತಿದಿನವೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ದೇವಸ್ಥಾನದ ಆವರಣ ಸ್ವಚ್ಛಗೊಳಿಸಿ ಪೂಜೆ ಸಲ್ಲಿಸಲಾಗಿತ್ತು. ನಂತರ ದೊಡ್ಡ ನಾಗರಹಾವೊಂದು ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿತ್ತು. ಅದು ತನ್ನ ಹೆಡೆ ಎತ್ತಿಕೊಂಡು ಚಂದ್ರಲಿಂಗವನ್ನು ಸುತ್ತಿಕೊಂಡಿತ್ತು. 

ಈ ಪವಾಡವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಜಮಾಯಿಸಿದ್ದರು. ಅನೇಕರು ಇದು ದೇವರ ಪವಾಡವೇ ಸರಿ ಅಂತಾ ಹೇಳಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಬಳಿಕ ಈ ವಿಡಿಯೋ ಸಖತ್‌ ವೈರಲ್‌ ಆಗಿದ್ದು, ಲಕ್ಷಾಂತರ ಜನರು ವೀಕ್ಷಿಸಿದ್ದಾರೆ. ಇದು ದೇವರ ಪವಾಡ ಅಂತಾ ಹೇಳಿರುವ ಅನೇಕರು ನಾಗರಹಾವಿಗೆ ಭಕ್ತಿಯಿಂದ ನಮಸ್ಕರಿಸಿದ್ದಾರೆ. ದೇಗುಲದಲ್ಲಿ ನಾಗರಹಾವು ಇರುವ ಸುದ್ದಿ ವೈರಲ್ ಆದ ಬಳಿಕ ಸಾವಿರಾರು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. 

ಇದನ್ನೂ ಓದಿ: ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News