Viral Video: ಮದುವೆಯು ಸಾಮಾನ್ಯವಾಗಿ ಪ್ರಪಂಚದಾದ್ಯಂತದ ಜೀವನದಲ್ಲಿ ಒಂದು ಪ್ರಮುಖ ಘಟನೆಯಾಗಿದೆ. ಆದರೆ, ಹಿರಿಯರು ನಿಶ್ಚಯಿಸಿದ ಮದುವೆ, ಪ್ರೀತಿಸಿ ಮದುವೆ, ಸೋದರ ಮಾವನೊಂದಿಗೆ ಮದುವೆ ಹೀಗೆ ನಾನಾ ರೀತಿಯ ಮದುವೆಗಳು ನಡೆಯುತ್ತಿವೆ. ಇತತೀಚೆಗಿನ ಯುವಕರು-ಯುವತಿಯರು ತಮ್ಮ ಆಯ್ಕೆಯ ವ್ಯಕ್ತಿಯನ್ನು ಜೀವನ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ಬಹುತೇಕ ಮದುವೆಗಳು ವಧು-ವರರ ಪೋಷಕರ ಸಮ್ಮುಖದಲ್ಲಿ ನಡೆಯುತ್ತವೆ. ಆದರೆ ಈಗ ಆಘಾತಕಾರಿ ವಿವಾಹವೊಂದು ಬೆಳಕಿಗೆ ಬಂದಿದೆ. ಮಕ್ಕಳಿರುವ ತಾಯಿ ವಿಚ್ಛೇದನ ಪಡೆದರೆ ಅಥವಾ ಗಂಡನ ಮರಣದ ನಂತರ ಮಹಿಳೆಯರು ಮರುಮದುವೆ ಮಾಡಿಕೊಂಡರೆ ಸಮಾಜ ನೋಡುವ ದೃಷ್ಟಿಯೇ ಬೇರೆ.. ಇದೀ ಅಂತದ್ದೇ ಮದುವೆಯ ವಿಡಿಯೋವೊಂದು ವೈರಲ್‌ ಆಗಿದೆ.. ಅಬ್ದುಲ್ ಎಂಬ ಯುವಕ ಎಲ್ಲ ಗಡಿ ದಾಟಿ ತನ್ನನ್ನು ಹೆತ್ತ ತಾಯಿಯನ್ನೇ ಮದುವೆ ಮಾಡಿಸಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಅವರು ತಮ್ಮ ತಾಯಿಗೆ ಏಕೆ ಮದುವೆ ಅವಶ್ಯಕತೆಯಿದೆ ಎಂದು ವಿವರಿಸುವ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.



 


ಇದನ್ನೂ ಓದಿ-ಪ್ರಖ್ಯಾತ ಸೆಲೆಬ್ರಿಟಿಯೊಂದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮದುವೆ! ಯುವ ರಾಜಕಾರಣಿಯನ್ನು ವರಿಸಲಿರುವ ಆ ಚೆಲುವೆ ಯಾರು ಗೊತ್ತೇ?   


18 ವರ್ಷದ ಅಬ್ದುಲ್ ಅಹಮದ್ ತನ್ನ ತಾಯಿಯ ಋಣವನ್ನು ತೀರಿಸಲು ಆಕೆಗೆ ಮತ್ತೊಂದು ಮದುವೆ ಮಾಡಿಸಿದ್ದಾನೆ.. ಇದರಿಂದ ಅವರು ಮತ್ತೆ ಸುಂದರವಾದ ಜೀವನವನ್ನು ನಡೆಸುವ ಹಕ್ಕು ಪಡೆಯುತ್ತಾಳೆ. ಇದೀಗ ಈ ತಾಯಿ ಮಗನ ಸುದ್ದಿ ಚರ್ಚೆಗೆ ಗ್ರಾಸವಾಗಿದೆ. ಅಬ್ದುಲ್ ಅವರೇ ಈ ಮದುವೆಯ ಬಗ್ಗೆ ಸುಂದರ ವಿಡಿಯೋ ಮೂಲಕ ಜಗತ್ತಿಗೆ ಮಾಹಿತಿ ನೀಡಿದ್ದಾರೆ. ಈ ವೀಡಿಯೊದಲ್ಲಿ, ಅವರು ತಮ್ಮ ತಾಯಿಗೆ ಏಕೆ ಮದುವೆ ಮಾಡಲು ನಿರ್ಧರಿಸಿದರು ಎಂಬುದನ್ನು ವಿವರಿಸಲು ಪ್ರಯತ್ನಿಸಿದ್ದಾರೆ. ಇಬ್ಬರ ಸುಂದರ ಫೋಟೋಗಳಿರುವ ವಿಡಿಯೋ ಜೊತೆಗೆ ಸಂದೇಶವನ್ನೂ ನೀಡಿದ್ದಾರೆ. ಈ ಮದುವೆ ಶಾರೀರಿಕ ಸಂಬಂಧಕ್ಕಾಗಿ ಅಲ್ಲ.. ತಾಯಿಗೆ ಸುಂದರ ಬದುಕು ಕಟ್ಟಿಕೊಳ್ಳಲು ಮಾತ್ರ.. ಎಂದು ಹೇಳಿಕೊಂಡಿದ್ದಾರೆ.. 


ಇದನ್ನೂ ಓದಿ-ಪ್ರಖ್ಯಾತ ಸೆಲೆಬ್ರಿಟಿಯೊಂದಿಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮದುವೆ! ಯುವ ರಾಜಕಾರಣಿಯನ್ನು ವರಿಸಲಿರುವ ಆ ಚೆಲುವೆ ಯಾರು ಗೊತ್ತೇ?   


ಅಬ್ದುಲ್ ಅವರ ತಾಯಿ ಚಿಕ್ಕ ವಯಸ್ಸಿನಲ್ಲೇ ಮದುವೆಯಾದರು. ಮಗಳು ಮತ್ತು ಮಗ ಹುಟ್ಟಿದ ನಂತರ ಪತಿ ನಿಧನರಾದರು. ಅಂದಿನಿಂದ ಒಬ್ಬಂಟಿಯಾಗಿ ಮಕ್ಕಳನ್ನು ಬೆಳೆಸಿದರು. ಎಷ್ಟೇ ಆರ್ಥಿಕ ಸಂಕಷ್ಟವಿದ್ದರೂ ಯಾವುದೇ ಕೊರತೆ ತಿಳಿಯದಂತೆ ಮಕ್ಕಳನ್ನು ಬೆಳೆಸಿದರು. ಅಮ್ಮನ ಕಷ್ಟ ನೋಡಿಕೊಂಡು ಬೆಳೆದ ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಉದ್ಯೋಗದೊಂದಿಗೆ ಜೀವನದಲ್ಲಿ ನೆಲೆಯೂರಿದ್ದಾರೆ. ಆದರೆ ಅಬ್ದುಲ್ ತನ್ನ ತಾಯಿಗೆ ಮದುವೆಯ ಬಗ್ಗೆ ಮನವರಿಕೆ ಮಾಡಿ... ತನಗಾಗಿ ನಿಸ್ವಾರ್ಥವಾಗಿ ಬದುಕಿದ ತಾಯಿಗೆ ತನ್ನ ಜೀವನದಲ್ಲಿ ಮತ್ತೆ ಪ್ರೀತಿ ಪಡೆಯುವ ಹಕ್ಕಿದೆ ಎಂದು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿಸಿದ್ದಾನೆ.. ಈ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಬ್ದುಲ್ ಅವರ ಕೆಲಸವು ನೆಟಿಜನ್‌ಗಳಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿದೆ.. ಅಬ್ದುಲ್ ತನ್ನ ತಾಯಿಯ ಬಗ್ಗೆ ಯೋಚಿಸಿ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾನೆ ಎಂದು ಕೆಲವರು ಹೊಗಳುತ್ತಿದ್ದರೆ.. ಇನ್ನು ಕೆಲವರು ಇದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.