ಬಾಗಲಕೋಟೆ: ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ... ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆಭರಣ, ಹಣ ಕದಿಯುವ ಕಳ್ಳರ ಬಗ್ಗೆ ಆಗಾಗ್ಗೆ ವರದಿ ಆಗುತ್ತಲೇ ಇರುತ್ತದೆ. ಆದರೆ ಇಲ್ಲೊಬ್ಬ ಆಸಾಮಿ ಕಳೆದೊಂದು ಹದಿನೈದು ದಿನಗಳಿಂದ ಅಡುಗೆ ಮನೆಗೆ ನುಗ್ಗಿಅಡುಗೆ ಹಾಗೂ ಮನೆಯ ಹೊರಗಡೆಯ ಉಡುಪು ಕದಿಯುತ್ತಿರುವ ವಿಚಿತ್ರ ಘಟನೆ ನಡೆಯುತ್ತಿದ್ದು ಜನರನ್ನು ಬೆಚ್ಚಿ ಬೀಳಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಲಕ್ಷ್ಮೀ ನಗರ, ಸಾಯಿ ಹಾಗೂ ಕಾಡಸಿದ್ಧೇಶ್ವರ ನಗರದಲ್ಲಿ ಇಂತಹ ವಿಚಿತ್ರ ಘಟನೆ ನಡೆಯುತ್ತಿದ್ದು, ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ.


COMMERCIAL BREAK
SCROLL TO CONTINUE READING

ಹೌದು, ಇದು ವಿಚಿತ್ರವಾದರೂ ಸತ್ಯ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಬನಹಟ್ಟಿಯ ಜಗದಾಳ ರಸ್ತೆಯಲ್ಲಿರುವ ಮಾನಸಿಕ ಅಸ್ವಸ್ಥನೆಂದು ಹೇಳಲಾಗುತ್ತಿರುವ ವ್ಯಕ್ತಿಯಿಂದ ಈ ಕೃತ್ಯ ನಡೆಯುತ್ತಿದೆ ಎಂಬುದು ಪ್ರತ್ಯಕ್ಷದರ್ಶಿಗಳಿಂದ ತಿಳಿದು ಬಂದಿದೆ.


ಈ ಪ್ರದೇಶದಲ್ಲಿ ಕಳೆದ ಹದಿನೈದು ದಿನಗಳಿಂದ ರಾತ್ರಿಯಲ್ಲಿ ಮನೆಯ ಮುಂಭಾಗದಲ್ಲಿ ಒಣಹಾಕಿದ ಬಟ್ಟೆಗಳೂ ಕಣ್ಮರೆ ಆಗುತ್ತಿವೆ. ಮಾತ್ರವಲ್ಲ, ಮನೆಯಲ್ಲಿ ಮಾಡಿದ ಅಡುಗೆ ಮಾಯವಾಗುತ್ತಿದೆ. ಕೆಲ ಮನೆಗಳಲ್ಲಿ ಮನೆಯೊಳಗೆ ಹೋಗಿ ಅಡುಗೆ ಮನೆಯಲ್ಲಿದ್ದ ಆಹಾರ, ಊಟವೆನ್ನೆಲ್ಲ ತಿಂದು ಹೊರನಡೆಯುತ್ತಾನೆ. ವಿಶೇಷವೆಂದರೆ ಈ ಸಮಯದಲ್ಲಿ ಮನೆಯಲ್ಲಿ ಒಂದು ನಯಾಪೈಸವೂ ಕಳುವಾಗುವುದಿಲ್ಲ. ಆಹಾರ ಚೆಕ್ ಮಾಡುವಾಗ ಡಬ್ಬಿಗಳಲ್ಲಿ ಹಣ ಇದ್ರೂ ದುಡ್ಡು ಬೀಸಾಕಿ ಹೋಗಿರುವ ಕಳ್ಳನ ಬಗ್ಗೆ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ- ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡೋ 14 ನರ್ಸ್‌ಗಳು!


ಈ ವಿಚಿತ್ರ ರಹಸ್ಯ ಬೇಧಿಸಲು ಹೊರಟ ಕೆಲವರು ಸಿಸಿ ಕ್ಯಾಮೆರಾ ಅಳವಡಿಸಿದ್ದರು. ಸೋಮವಾರ ತಡರಾತ್ರಿ 12 ಗಂಟೆ ಸುಮಾರಿಗೆ ಸಾಯಿ ನಗರದಲ್ಲಿನ ವೈದ್ಯನೋರ್ವರ ಮನೆಗೆ ಈ ಅಪರೂಪದ ಕಳ್ಳ ಬಂದಿದ್ದಾನೆ. ಕಾಂಪೌಂಡ್ ಒಳಗೆ ನುಗ್ಗಿ ಮನೆಯ ಹಿಂದಿನ ಬಾಗಿಲಿನಿಂದ ನುಗ್ಗುವ ಪ್ರಯತ್ನ ಮಾಡುವಾಗ, ಕಿಟಕಿಯಲ್ಲಿ ಮನೆಯಲ್ಲಿದ್ದವರನ್ನು ಗಮನಿಸಿ ಓಡುತ್ತಿದ್ದಂತೆ  ಮನೆ ಮಾಲೀಕರು ಈ ವಿಕಾರ ವ್ಯಕ್ತಿಯನ್ನು ನೋಡಿ ಗಾಬರಿಯಿಂದ ಚೀರಿದ್ದಾರೆ. ನೆರೆಹೊರೆಯವರು ಆತನನ್ನು ಹಿಡಿಯುವಷ್ಟರಲ್ಲಿ ಅಲ್ಲಿಂದ ಪರಾರಿಯಾಗಿದ್ದಾನೆ. Viral Video: ಕೈಯಿಂದ ತಳ್ಳಿದ್ರೆ ಕುಸಿದು ಬಿದ್ದ ಕಾಲೇಜು ಕಟ್ಟಡದ ಗೋಡೆ!


ಈತನ ಕೃತ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದು, ಆರೋಪಿ ಪತ್ತೆಗೆ ಪೊಲೀಸ್ ಜಾಲ ತೀವ್ರ ನಿಗಾ ವಹಿಸಿದೆ. ಆದರೆ ಈ ಅಪರೂಪದ ಕಳ್ಳನ ಅವಾಂತರದಿಂದಾಗಿ ದಿನಂಪ್ರತಿ ರಾತ್ರಿ ಹೊತ್ತು ಈ ಭಾಗದ ಜನತೆ ನಿದ್ರೆಯಿಲ್ಲದೆ ತಂಡ-ತಂಡವಾಗಿ ಬೀದಿಗಳಲ್ಲಿ ಬಡಿಗೆ ಹಿಡಿದುಕೊಂಡು ಗಸ್ತು ತಿರುಗುವಂತಾಗಿದೆ ಎನ್ನುತ್ತಾರೆ ಇಲ್ಲಿನ ಜನ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.