ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡೋ 14 ನರ್ಸ್‌ಗಳು!

ಅಮೆರಿಕಾದ ಮಿಸ್ಸೋರಿ ರಾಜ್ಯದ ಕನ್ಸಾನ್‌ ಸಿಟಿಯಲ್ಲಿರುವ ಸೈಂಟ್‌ ಲೂಕರ್‌ ಈಸ್ಟ್‌ ಆಸ್ಪತ್ರೆಯ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಈ 14 ಮಂದಿ ಒಂದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬೋದು ವಿಶೇಷ. 

Written by - Bhavishya Shetty | Last Updated : Jun 24, 2022, 04:42 PM IST
  • 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭಿಣಿಯರಾಗಿದ್ದಾರೆ
  • ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ ಸುದ್ದಿ
  • ಸೈಂಟ್‌ ಲೂಕರ್‌ ಈಸ್ಟ್‌ ಆಸ್ಪತ್ರೆಯ 14 ಮಂದಿ ನರ್ಸ್‌ಗಳು
ಏಕಕಾಲದಲ್ಲಿ ಗರ್ಭಿಣಿಯರಾದ ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡೋ 14 ನರ್ಸ್‌ಗಳು! title=
Missouri Hospital

ಅಮೆರಿಕಾದ ವಾಷಿಂಗ್ಟನ್‌ನಲ್ಲಿ ಯಾರೂ ಊಹಿಸಲಾರದ ಅಪರೂಪದ ಘಟನೆಯೊಂದು ನಡೆದಿದೆ. ಇಲ್ಲಿನ ಆಸ್ಪತ್ರೆಯೊಂದರ ಹೆರಿಗೆ ವಾರ್ಡ್‌ನಲ್ಲಿ ಕೆಲಸ ಮಾಡುವ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭಿಣಿಯರಾಗಿದ್ದಾರೆ. ಈ ವಿಚಾರ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. 

ಅಮೆರಿಕಾದ ಮಿಸ್ಸೋರಿ ರಾಜ್ಯದ ಕನ್ಸಾನ್‌ ಸಿಟಿಯಲ್ಲಿರುವ ಸೈಂಟ್‌ ಲೂಕರ್‌ ಈಸ್ಟ್‌ ಆಸ್ಪತ್ರೆಯ 14 ಮಂದಿ ನರ್ಸ್‌ಗಳು ಏಕಕಾಲಕ್ಕೆ ಗರ್ಭ ಧರಿಸಿದ್ದಾರೆ. ಈ 14 ಮಂದಿ ಒಂದೇ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬೋದು ವಿಶೇಷ. 

ಇದನ್ನೂ ಓದಿ: Used Cars: ಕೇವಲ 5.9 ಲಕ್ಷ ರೂಪಾಯಿಗೆ ಮನೆಗೆ ತನ್ನಿ Mahindra Thar

ಇನ್ನು ಒಂದೇ ಸಮಯದಲ್ಲಿ ಗರ್ಭಿಣಿಗಳಾಗಿರುವ ಸಂತೋಷದಲ್ಲಿರುವ ನರ್ಸ್‌ಗಳು ಫೋಟೋಗಳನ್ನು ತೆಗೆದು ಸೋಶಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇವರ ಫೋಟೋಗಳಿಗೆ ಸೋಶಿಯಲ್‌ ಮೀಡಿಯಾದಲ್ಲಿ ವಿಧ ವಿಧವಾದ ಕಮೆಂಟ್‌ಗಳು ಬಂದಿವೆ.

ಇನ್ನು ಈ ಗರ್ಭಿಣಿಯರ ಗುಂಪುನಲ್ಲಿರುವ ಓರ್ವ ನರ್ಸ್‌ ಈ ಬಗ್ಗೆ ಮಾತನಾಡಿದ್ದು, "ಇದು ನನ್ನ ಚೊಚ್ಚಲ ಹೆರಿಗೆ. ಗರ್ಭಿಣಿಯಾದ 12 ವಾರಗಳ ಕಾಲ ಈ ಬಗ್ಗೆ ಯಾರೊಂದಿಗೂ ಹೇಳಿಕೊಂಡಿರಲಿಲ್ಲ.  ಆ ಬಳಿಕ ಒಬ್ಬೊಬ್ಬರು ತಾವು ಗರ್ಭಿಣಿ ಎಂಬ ವಿಷಯ ಹೇಳಲು ಆರಂಭಿಸಿದರು. ಹಾಗಾಗಿ ನಾನು ಕೂಡ ತಾಯಿಯಾಗುತ್ತಿರುವುದರ ಬಗ್ಗೆ ಘೋಷಣೆ ಮಾಡಿದೆ" ಎಂದು ಹೇಳಿದ್ದಾರೆ. ಈ ಮಹಿಳೆಯ ಹೆಸರು ಕೈತಿಲಿನ್‌ ಹಾಲ್. ಇವರೇ ಮೊದಲು ಗರ್ಭಿಣಿಯಾಗಿದ ನರ್ಸ್‌. ಇವರು ಕಳೆದ ಕೆಲ ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಸದ್ಯ ಆಸ್ಪತ್ರೆಯಲ್ಲಿ 13 ಮಂದಿ ನರ್ಸ್‌ಗಳು ತಮ್ಮ ಕಂದಮ್ಮನನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿದ್ದಾರೆ. ಈ ಸಂತಸದ ವಿಚಾರವನ್ನ ಸೈಂಟ್‌ ಲೂಕ್‌ ಆಸ್ಪತ್ರೆ ಮಂದಿ ಸಹ ಹಂಚಿಕೊಂಡಿದ್ದಾರೆ. "ಇತರ ತಾಯಿಯಂದಿರಿಗೆ ತೋರುವ ಕಾಳಜಿ, ಪ್ರೀತಿಯನ್ನು ನಮ್ಮ ಸಿಬ್ಬಂದಿಗಳಿಗೂ ತೋರುತ್ತೇವೆ. ಈ ವಿಶೇಷ ಸಂದರ್ಭಕ್ಕೆ ನಮ್ಮ ಆಸ್ಪತ್ರೆ ಸಾಕ್ಷಿಯಾಗಲಿದೆ' ಎಂದು ಆಸ್ಪತ್ರೆ ತನ್ನ ಫೇಸ್‌ಬುಕ್‌ನ ಅಧಿಕೃತ ಖಾತೆಯಲ್ಲಿ ಬರೆದುಕೊಂಡಿದೆ.  

ಇದನ್ನೂ ಓದಿ: ರೋಹಿತ್ ಟೆನ್ಷನ್ ಹೆಚ್ಚಿಸಿದ ಈ ಮಾರಣಾಂತಿಕ ಬೌಲರ್!

ಸದ್ಯ 13 ಮಂದಿ ಗರ್ಭಿಣಿಯರು ತಮ್ಮ ಕಂದಮ್ಮನನ್ನು ಬರ ಮಾಡಿಕೊಳ್ಳಲು ಸಿದ್ಧರಾಗಿದ್ದಾರೆ. ಇನ್ನು ಪ್ರತಿಯೊಬ್ಬರಿಗೆ ಹೆರಿಗೆ ದಿನಾಂಕ ಬೇರೆ ಬೇರೆಯಾಗಿದ್ದು, ಡಿಸೆಂಬರ್ ಅಂತ್ಯದವರೆಗೆ ಮುಂದುವರಿಯಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News