Tamil Nadu Viral News: ಹಣದ ಆಸೆಗೆ ಮಹಿಳೆಯೊಬ್ಬಳು ಬರೋಬ್ಬರಿ 50 ಜನರನ್ನು ವಿವಾಹವಾಗಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ವಂಚಿಸುವುದನ್ನೇ ದಂಧೆ ಮಾಡಿಕೊಂಡು ದುಡ್ಡು, ಬಂಗಾರ ದೋಚಿ ಎಸ್ಕೇಪ್‌ ಆಗುತ್ತಿದ್ದ ಕಿಲಾಡಿ ಲೇಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.


COMMERCIAL BREAK
SCROLL TO CONTINUE READING

ತಮಿಳುನಾಡಿನಲ್ಲಿ ಈ ಘಟನೆ ನಡೆದಿದೆ. ಈ ಕಿಲಾಡಿ ಲೇಡಿ ಮೊದಲು ಮದುವೆ ಆಗುವುದು, ನಂತರ ಗಂಡನ ಮನೆಯ ದುಡ್ಡು-ಬಂಗಾರವನ್ನು ದೋಚಿ ಪರಾರಿ ಆಗುವುದು. ಕೆಲ ದಿನಗಳ ಬಳಿಕ ಮತ್ತೊಬ್ಬನ ಜೊತೆಗೆ ಮದುವೆ ಆಗುವುದು. ಹೀಗೆ ಈಕೆ ಬರೋಬ್ಬರಿ 50 ಜನರನ್ನು ಮದುವೆಯಾಗಿ ವಂಚಿಸಿ ಕೊನೆಗೆ ಖಾಕಿ ಬಲೆಗೆ ಸಿಕ್ಕಿಬಿದ್ದಿದ್ದಾಳೆ.   


ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುವ ಮಹಿಳೆಯರು ಹೂ ಮುಡಿದುಕೊಳ್ಳಲ್ಲ..! ಏಕೆ ಗೊತ್ತಾ?


ತಮಿಳುನಾಡಿನ ತಿರುಪುರದ 35 ವರ್ಷದ ಯುವಕನೊಬ್ಬನಿಗೆ ಆನ್‌ಲೈನ್‌ ಮ್ಯಾರೇಜ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಧ್ಯಾ (30) ಎಂಬಾಕೆ ಪರಿಚಯವಾಗಿದ್ದಳು. ಇತ್ತೀಚೆಗಷ್ಟೇ ಇವರು ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಆಕೆಯ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿದೆ. ನಂತರ ಆತ ಸಂಧ್ಯಾಳ ಆಧಾರ್‌ ಕಾರ್ಡ್‌ ಪರಿಶೀಲಿಸಿದ್ದಾನೆ. ಆಧಾರ್‌ ಕಾರ್ಡ್‌ನಲ್ಲಿ ಸಂಧ್ಯಾಳ ಪತಿಯ ಹೆಸರನ್ನು ಕಂಡು ಆತನಿಗೆ ಆಘಾತವಾಗಿದೆ. ತನಗೆ ವಂಚನೆ ಮಾಡಿದ್ದಾಳೆಂದು ತಿಳಿದ ಆತ ಈ ಬಗ್ಗೆ ತಾರಾಪುರಂ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾನೆ.


ಬಳಿಕ ಪೊಲೀಸರು ಸಂಧ್ಯಾಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆಯ ಭಯಾನಕ ವಂಚನೆಗಳ ಸತ್ಯ ಬಯಲಾಗಿದೆ. 10 ವರ್ಷಗಳ ಹಿಂದೆಯೇ ಮದುವೆಯಾಗಿದ್ದ ಈಕೆಗೆ ಒಂದು ಮಗು ಸಹ ಇದೆಯಂತೆ. ನಂತರ ತನ್ನ ಮೊದಲ ಪತಿಯಿಂದ ದೂರವಾದ ಈಕೆ ಹಣದಾಸೆಗೆ ಅವಿವಾಹಿತ ಪುರುಷೆನ್ನೇ ಟಾರ್ಗೆಟ್‌ ಮಾಡುತ್ತಿದ್ದಳಂತೆ. ಮದುವೆಯ ಮೇಲೆ ಮದುವೆಯಾಗಿ ಅವರ ಬಳಿ ಇದ್ದ ಹಣ ಮತ್ತು ಚಿನ್ನಾಭರಣ ಕದ್ದು ಎಸ್ಕೇಪ್‌ ಆಗುತ್ತಿದ್ದಳಂತೆ. ಹೀಗೆ ಡಿವೈಎಸ್ಪಿ, ಎಸ್ಪಿ, ಉದ್ಯಮಿಗಳು ಸೇರಿದಂತೆ ಈಕೆ ಬರೋಬ್ಬರಿ 50 ಜನರಿಗೆ ವಂಚಿಸಿದ್ದಾಳಂತೆ. ಕೊನೆಗೂ ಆಕೆಯ ಮೋಸದಾಟ ಬಯಲಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.


ಇದನ್ನೂ ಓದಿ: ನನ್ನ ಮದುವೆ ಭಾರತದಲ್ಲಿಯೇ ನಡೆಯಬೇಕು..! ಅಂಬಾನಿ ಮಗನ ನಿರ್ಧಾರದ ಹಿಂದಿದೆ ಮಹತ್ವದ ಕಾರಣ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.